ಹುಬ್ಬಳ್ಳಿ: ಮಳೆ ಮತ್ತೆ ಚುರುಕುಗೊಂಡಿದೆ. ದಿನವಿಡೀ ಹನಿಯಾಗಿ ಉದುರುತ್ತ, ಬಿಟ್ಟು ಬಿಡದಂತೆ ಸುರಿಯುತ್ತ ಎಲ್ಲರನ್ನು, ಎಲ್ಲವನ್ನೂ ತೋಯಿಸುತ್ತಿದೆ. ಅಂತೆಯೇ, ನಗರದ ಪ್ರಮುಖ ರಸ್ತೆಗಳು ತಮ್ಮ ಮೈಯೊಳಗಣ ಗುಂಡಿಗಳಲ್ಲಿ ಕೆಂಬಣ್ಣದ ನೀರು ತುಂಬಿಕೊಂಡು ಕೆಸರು ಎರಚುತ್ತಿವೆ.

ಪ್ರತಿ ಮಳೆಗಾಲದಲ್ಲೂ ಇಲ್ಲಿನ ಮಂದಿ ರಸ್ತೆಗಳ ಜೊತೆಗೆ ಸಂಚಾರದ ಸರ್ಕಸ್ ನಡೆಸುವುದು ತಪ್ಪಿಲ್ಲ. ಅವಳಿನಗರದ ಅಭಿವೃದ್ಧಿಗೆ ಬರೋಬ್ಬರಿ ನೂರು ಕೋಟಿ ರೂಪಾಯಿಗಳು ಖರ್ಚಾಗಿ, ಇದೀಗ ಇನ್ನೂ ನೂರು ಕೋಟಿ ರೂಪಾಯಿಗಳು ಬರುತ್ತಿದ್ದರೂ ರಸ್ತೆ ಅಭಿವೃದ್ಧಿಯಾಗಿಲ್ಲ. ನಗರದ ಪ್ರಮುಖ ಹೆದ್ದಾರಿಗಳು ಡಾಂಬರು ಕಂಡು ಎಷ್ಟೋ ವರ್ಷಗಳೇ ಆಗಿವೆ. ಒಳರಸ್ತೆಗಳ ಪಾಡು ಕೇಳುವಂತಿಲ್ಲ.

ಚತುಷ್ಪಥವಾಗುವ ಕನಸಿನಲ್ಲಿರುವ ಪುಣೆ-ಬೆಂಗಳೂರು ಹೆದ್ದಾರಿಯ ತುಂಬ ಗುಂಡಿಗಳೇ ಕಾಣುತ್ತಿವೆ. ಧಾರವಾಡದ ಕಡೆಯಿಂದ ಹುಬ್ಬಳ್ಳಿ ಪ್ರವೇಶಿಸುವವರು ಉಣಕಲ್ ಕ್ರಾಸ್ ದಾಟಿ ಮುನ್ನಡೆದರೆ ಇದರ ನಿಜ ಅನುಭವವಾಗುತ್ತದೆ. ಕಾಟನ್ ಮಾರ್ಕೆಟ್ನ ಯಾವ ರಸ್ತೆಯಲ್ಲೂ ಡಾಂಬರು ಕಾಣುವುದಿಲ್ಲ, ಬರೀ ತಗ್ಗುಗಳೇ ತುಂಬಿಕೊಂಡಿವೆ. ಅಲ್ಲಿಂದ ಚನ್ನಮ್ಮ ವೃತ್ತದೆಡೆಗೆ ಸಾಗುವ ನೀಲಿಜಿನ್ ರಸ್ತೆ ಪೂರ ಹದಗೆಟ್ಟಿದೆ. ಚನ್ನಮ್ಮ ವೃತ್ತದಿಂದ ವಿವಿದೆಡೆಗೆ ಸಾಗುವ ರಸ್ತೆಗಳಲ್ಲೂ ಗುಂಡಿಗಳು ಸ್ವಾಗತಿಸುತ್ತಿವೆ. ಹಳೇ ಬಸ್ ನಿಲ್ದಾಣದ ಮುಂದೆ ದೊಡ್ಡ ಗುಂಡಿ ಬಿದ್ದಿದೆ.

ಕಾರವಾರ ರಸ್ತೆಗೆ ಹೊರಟರೆ ಅಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಗೋಕುಲ ರಸ್ತೆಯಿಂದ ಸಿದ್ಧಾರೂಢ ಮಠದೆಡೆಗೆ ಸಾಗುವ ರಸ್ತೆ ತುಂಬ ನೀರೇ ಕಾಣುತ್ತದೆ. ವಾಣಿಜ್ಯ ನಗರಿಯ ಬಹುತೇಕ ರಸ್ತೆಗಳದ್ದು ಇದೇ ಪಾಡು.
ಲೋಕೋಪಯೋಗಿ ಇಲಾಖೆ ಯಲ್ಲಿ ಹಣವಿಲ್ಲ:

ನಗರದ ಕೆಲವು ಪ್ರಮುಖ ರಸ್ತೆಗಳು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಮಳೆಗಾಲಕ್ಕೆ ಮುನ್ನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇಲಾಖೆ ಕೈಗೆತ್ತಿಕೊಂಡಿದೆ. ಆದರೂ ಪ್ರಮುಖ ರಸ್ತೆಗಳ ಚಿತ್ರಣ ಬದಲಾಗಿಲ್ಲ. ಇದೀಗ ಮಳೆಗಾಲವಾದ್ದರಿಂದ ಈ ಸಮಯದಲ್ಲಿ ರಸ್ತೆ ದುರಸ್ತಿಗೆ ಅನುದಾನವೂ ಇಲ್ಲ. ಅನಿವಾರ್ಯವಿರುವ ಕಡೆ ಮಣ್ಣು ತುಂಬಿ ಗುಂಡಿ ಮುಚ್ಚುವುದಷ್ಟೇ ಸದ್ಯ ಲೋಕೋಪಯೋಗಿ ಇಲಾಖೆಗೆ ಇರುವ ಕೆಲಸ.

`ಕಳೆದ ಮೇನಲ್ಲಿ ಕೂಸುಗಲ್-ಬ್ಯಾಹಟ್ಟಿ, ದೇವರಗುಡಿಹಾಳ ಸೇರಿದಂತೆ ಅನೇಕ ರಸ್ತೆಗಳನ್ನು ಡಾಂಬರೀಕರಣಗೊಳಿಸಿದ್ದೇವೆ. ಕೆಲವನ್ನು ದುರಸ್ತಿಗೊಳಿಸಿದ್ದೇವೆ. ಮಳೆ ಕಾರಣ ಕೆಲವು ರಸ್ತೆಗಳು ಮೊದಲಿನಂತೆಯೇ ಆಗಿವೆ. ಅಗತ್ಯ ಬಿದ್ದ ಕಡೆ ಮಾತ್ರ ಸದ್ಯ ರಿಪೇರಿ ಕೆಲಸ ಮಾಡುತ್ತೇವೆ~ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಎಂ. ಕುಲಕರ್ಣಿ.

ಸಿಮೆಂಟ್ ರಸ್ತೆಯ ಕನಸು
`ಪಾಲಿಕೆ ವ್ಯಾಪ್ತಿಯ ಅನೇಕ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಯೋಜನೆ ರೂಪಿಸುತ್ತಿದ್ದೇವೆ. ಈ ಬಾರಿಯ 100 ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ಸುಮಾರು 40 ಕೋಟಿ ರೂಪಾಯಿಗಳನ್ನು ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗಾಗಿ ತೆಗೆದಿರಿಸಿದ್ದೇವೆ. ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಮಳೆ ಮುಗಿಯುತ್ತಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು~ ಎನುತ್ತಾರೆ ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ.

ಇದಲ್ಲದೆ ನಗರದ ಪ್ರಮುಖ ರಸ್ತೆಗಳಿಗೆ ಸಿಮೆಂಟ್ ಹೊದಿಕೆ ಹೊದಿಸಲು ಪಾಲಿಕೆ ಚಿಂತನೆ ನಡೆಸಿದೆ. ಮೊದಲನೆ ಹಂತವಾಗಿ ನೀಲಿಜಿನ್ ರಸ್ತೆ ಸಿಮೆಂಟ್ ಕಾಮಗಾರಿ ಚಾಲನೆಯಲ್ಲಿದೆ. ಜನನಿಬಿಡ ಪ್ರದೇಶವಾದ ಕೋರ್ಟ್ ಸರ್ಕಲ್ ಅನ್ನು ಸಿಮೆಂಟ್ ಹಾದಿಯನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗುತ್ತಿದೆ. ರಸ್ತೆ ಅಭಿವೃದ್ಧಿಗಾಗಿ ಪ್ರತಿ ವಾರ್ಡ್ಗೆ 15 ಲಕ್ಷ ರೂಪಾಯಿ ನೀಡಲಾಗುತ್ತಿದೆ.

ಒಟ್ಟಾರೆ ಈ ಎಲ್ಲ ಅನುದಾನದಿಂದ ನಗರದ ರಸ್ತೆಗಳು ಸುಧಾರಣೆಯಾದರೆ ಸಾಕು ಎನ್ನುವುದು ಇಲ್ಲಿನ ನಿವಾಸಿಗಳ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.