ಶನಿವಾರ, ಏಪ್ರಿಲ್ 10, 2021
30 °C

ರಸ್ತೆ ದುರಸ್ತಿಗಾಗಿ ಪುರಸಭೆಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಇಲ್ಲಿಯ ವನ್ನಳ್ಳಿ ಬಂದರು ರಸ್ತೆಯನ್ನು ಕಳೆದ ಆರು ವರ್ಷಗಳಿಂದ ದುರಸ್ತಿ ಮಾಡದಿರುವುದನ್ನು ಖಂಡಿಸಿ ಸಾರ್ವಜನಿಕರು, ಮೀನುಗಾರರು ಹಾಗೂ ರಿಕ್ಷಾ ಚಾಲಕರು ಮಂಗಳವಾರ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ನಾಯ್ಕ, ಸಾರ್ವಜನಿಕರು ರಸ್ತೆ ಬಳಸುತ್ತಿರುವ ಬಗ್ಗೆ  ‘ರಸ್ತೆ ಕರ’ ಪಾವತಿ ಮಾಡುತ್ತಿದ್ದರೂ ಪುರಸಭೆಯವರು ರಸ್ತೆ ದುರಸ್ತಿ ಕಾರ್ಯ ಕೈಕೊಂಡಿಲ್ಲ. ರಸ್ತೆ ದುರಸ್ತಿ ಕಾರ್ಯ ಕೈಕೊಳ್ಳದಿರುವುದಕ್ಕೆ ಜನರ ನಿರ್ಲಕ್ಷ್ಯವೂ ಕಾರಣವಾಗಿದೆ. ನಿತ್ಯ ನೂರಾರು ವಾಹಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಿರುವ ರಸ್ತೆ ಕನಿಷ್ಠ ಸಂಚಾರ ಸಾಧ್ಯವಿಲ್ಲವಾಗಿದೆ. ರಸ್ತೆ ದುರಸ್ತಿಮಾಡಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ರಸ್ತೆ ದುರಸ್ತಿ ಆಗುವರೆಗೂ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.ಪುರಸಭೆ ಸದಸ್ಯ ಉಲ್ಲಾಸ ನಾಯಕ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿದರು. ಪುರಸಭೆ ಅಧ್ಯಕ್ಷೆ ಇಂದಿರಾ ವೈದ್ಯ, ಮ್ಯನೇಜರ್ ಶೇಖ್ ರಸ್ತೆ ದುರಸ್ತಿ ಭರವಸೆ ನೀಡಿದರು. ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಸುಧಾಕರ ತರಿ, ಗೌರವಾಧ್ಯಕ್ಷ ಗೋಳಿ ನಾಯ್ಕ, ರಿಕ್ಷಾ ಚಾಲಕರ ಹಾಗೂ ಮೀನುಗಾರ ಸಂಘಟನೆಯ ಪದಧಿಕಾರಿಗಳು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.