ಬುಧವಾರ, ಜನವರಿ 29, 2020
25 °C

ರಾಜತಾಂತ್ರಿಕ ಬಿಕ್ಕಟ್ಟಿನತ್ತ ದೇವಯಾನಿ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನ್ಯೂಯಾರ್ಕ್‌ನಲ್ಲಿನ ಭಾರತದ ಉಪ ಕಾನ್ಸಲ್‌ ಜನರಲ್‌ ದೇವಯಾನಿ ಖೋಬ್ರಾಗಡೆ ಅವರನ್ನು ನಡೆಸಿಕೊಂಡ ರೀತಿಗೆ ಭಾರತ ಸರ್ಕಾರವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೇಶದಲ್ಲಿರುವ ಅಮೆರಿಕದ ರಾಯಭಾರಿ ಅಧಿಕಾರಿಗಳಿಗೆ ನೀಡಿರುವ ಗುರುತು ಪತ್ರಗಳನ್ನು ಹಿಂದಿರುಗಿಸುವಂತೆ ಮಂಗಳವಾರ ಅಮೆರಿಕವನ್ನು ಕೇಳಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 

ನ್ಯೂಯಾರ್ಕ್‌ನಲ್ಲಿನ ಭಾರತದ ಉಪ ಕಾನ್ಸಲ್‌ ಜನರಲ್‌ ದೇವಯಾನಿ ಅವರನ್ನು ನಡೆಸಿಕೊಂಡ ರೀತಿಗೆ ಪ್ರತಿಭಟನೆಯ ಸೂಚಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕದ ರಾಜತಾಂತ್ರಿಕರು ಅನುಭವಿಸುತ್ತಿರುವ ವಿನಾಯಿತಿ ಮತ್ತು ಪ್ರಯೋಜನಗಳ ಪುನರ್ ಪರಿಶೀಲನೆ ನಡೆಸುವ ಸಲುವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಭೇಟಿ ರದ್ದು : 

ಇದೇ ವೇಳೆ ದೇವಯಾನಿ ಅವರ ವಿರುದ್ಧದ ವರ್ತನೆಗೆ ಭಾರತದ ನಾಯಕರು ಮತ್ತು ಅಧಿಕಾರಿಗಳ ತೀವ್ರ ಅಸಮಾಧನಕ್ಕೂ ಕಾರಣವಾಗಿದೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕದ ಕಾಂಗ್ರೆಸ್‌ನ ನಿಯೋಗದ ಜತೆಗಿನ ಭೇಟಿಯನ್ನು ಮಂಗಳವಾರ ರದ್ದು ಮಾಡಿದ್ದಾರೆ. 

ಈ ಮೊದಲು ಲೋಕ ಸಭೆ ಸ್ಪೀಕರ್ ಮೀರಾ ಕುಮಾರ್ ಅವರೂ ಸಹ ಇದೇ ಕಾರಣಕ್ಕಾಗಿ ಅಮೆರಿಕ ಕಾಂಗ್ರೆಸ್ ನಿಯೋಗ ಜತೆಗಿನ ಭೇಟಿಯನ್ನು ಸೋಮವಾರ ರದ್ದು ಪಡಿಸಿದ್ದರು.

 

ಪ್ರತಿಕ್ರಿಯಿಸಿ (+)