ಮಂಗಳವಾರ, ಫೆಬ್ರವರಿ 18, 2020
26 °C

ರಾಜಪಕ್ಸೆ ಪತ್ನಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಅಧಿಕಾರಾವಧಿಯ ವೇಳೆ ನಡೆ­ಸುತ್ತಿದ್ದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ  (ಎನ್‌ಜಿಒ) ಮೂಲಕ ಅಕ್ರಮ ಸಂಪಾ­ದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ರಾಜಪಕ್ಸೆ ಅವರ ಪತ್ನಿ ಶೀರಂತಿ ರಾಜಪಕ್ಸೆ ಅವರನ್ನು ಲಂಕಾ ಪೊಲೀಸರು ಸೋಮವಾರ ವಿಚಾರಣೆ ನಡೆಸಿದರು.

ಕೇಂದ್ರ ಸ್ಥಾನದಿಂದ ಹೊರಭಾಗದ ರಹಸ್ಯ ಸ್ಥಳದಲ್ಲಿ ಹಣಕಾಸು ಅಪರಾಧ ತನಿಖಾ ವಿಭಾಗ (ಎಫ್‌ಸಿಐಡಿ)ದಿಂದ   ಶೀರಂತಿ ಎರಡು ತಾಸು ವಿಚಾರಣೆ ಎದು­ರಿಸಿದರು ಎಂದು ಮೂಲಗಳು ತಿಳಿಸಿವೆ.

‘ಕಾರ್ಲ್‌ಟನ್‌ ಸಿರಿಲಿಯಾ ಸೇವಿಯ’ ಎಂಬ ಸರ್ಕಾರೇತರ ಸಂಸ್ಥೆಯ ಬ್ಯಾಂಕ್‌ ಖಾತೆಯ ಮೂಲಕ ಭ್ರಷ್ಟಾಚಾರ ನಡೆಸಿ­ದ್ದಾರೆ ಎಂಬ ಆರೋಪದ ವಿಚಾರಣೆಗೆ ಹಾಜರಾಗುವಂತೆ ಶೀರಂತಿ ಅವರಿಗೆ ಎಫ್‌ಸಿಐಡಿ ನೋಟಿಸ್‌ ಜಾರಿ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)