ಶುಕ್ರವಾರ, ಮಾರ್ಚ್ 5, 2021
17 °C
ಅಖಿಲ ಭಾರತ ಬಿಎಸ್‌ಎನ್‌ಎಲ್‌ ಅಥ್ಲೆಟಿಕ್‌ ಕೂಟ

ರಾಜ್ಯದ ವಿಕಾಸ್‌ಗೆ ಮತ್ತೊಂದು ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ವಿಕಾಸ್‌ಗೆ ಮತ್ತೊಂದು ಚಿನ್ನ

ಮೈಸೂರು: ಕರ್ನಾಟಕದ ವಿಕಾಸ್‌ ಎಂ.ಪುತ್ರನ್‌ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಬಿಎಸ್‌ಎನ್‌ಎಲ್‌ ಅಥ್ಲೆಟಿಕ್‌ ಕೂಟದಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿದರು.ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದಲ್ಲಿ ಗುರುವಾರ ಪುರುಷರ ವಿಭಾಗದ 400 ಮೀಟರ್ಸ್‌ ಓಟದಲ್ಲಿ ಅವರು ಮೊದಲ ಸ್ಥಾನ ಗಳಿಸಿದರು. 49.9 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ಕೇರಳದ ಸುನಿಲ್‌ ಜೋಸೆಫ್‌ (53.4 ಸೆ.) ಬೆಳ್ಳಿ ಪದಕ ಜಯಿಸಿದರು. ಕಂಚಿನ ಪದಕ ಆಂಧ್ರಪ್ರದೇಶದ ವಿ. ಸುನಿಲ್‌ (56.3 ಸೆ.) ಪಾಲಾಯಿತು. ಮಂಗಳೂರಿನ ವಿಕಾಸ್‌ ಕೂಟದ ಮೊದಲ ದಿನ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಎರಡು ಪದಕ ಗೆದ್ದಂತಾಯಿತು.ಮಹಿಳಾ ವಿಭಾಗದ 4x400 ಮೀ. ರಿಲೇಯಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಮೂರನೇ ಸ್ಥಾನ ಪಡೆದರು. ಮೊದಲ ಸ್ಥಾನ ಮಹಾರಾಷ್ಟ್ರದವರ ಪಾಲಾಯಿತು. ಎರಡನೇ ಸ್ಥಾನವನ್ನು ತಮಿಳುನಾಡು ತಂಡದವರು ಪಡೆದರು.ಫಲಿತಾಂಶ: ಪುರುಷರು: ಪೋಲ್‌ ವಾಲ್ಟ್‌: ಎಂ.ಡಿ. ಯಾದವ್‌ (ಉತ್ತರ ಪ್ರದೇಶ; ಎತ್ತರ: 3.10 ಮೀ.)–1, ಉಪೇಂದ್ರ ಸಿಂಗ್‌ (ರಾಜಸ್ತಾನ)–2, ಅತುಲ್‌ ಕುಮಾರ್ (ಪಶ್ಚಿಮಬಂಗಾಳ)–3; 20 ಕಿ.ಮೀ.ನಡಿಗೆ: ಆರ್‌.ಕೆ. ಪಟೇಲ್‌ (ಉತ್ತರ ಪ್ರದೇಶ)–1, ವಿ.ಸಿ. ಜೋಸೆಫ್‌ (ಕೇರಳ)–2, ಮಲ್‌ಕೀತ್‌ ಸಿಂಗ್‌ (ಉತ್ತರ ಪ್ರದೇಶ); 1500 ಮೀ.: ವಿಶ್ರಮ್‌ ಮೀನಾ (ರಾಜಸ್ತಾನ; ಕಾಲ: 4:19.4 ನಿ.)–1, ಎಜಿಲ್‌ ನಿಲವನ್‌ (ತಮಿಳುನಾಡು)–2, ಸುನಿಲ್‌ ಯಾದವ್‌ (ಪಶ್ಚಿಮಬಂಗಾಳ)–3;110 ಮೀ. ಹರ್ಡಲ್ಸ್‌: ಉಪೇಂದ್ರ ಸಿಂಗ್‌ (ರಾಜಸ್ತಾನ; ಕಾಲ: 19.2 ಸೆ.)–1, ಸಿ. ವೇಲುಮುರುಗನ್‌ (ತಮಿಳುನಾಡು)–2, ಅತುಲ್ ಕುಮಾರ್ (ಪಶ್ಚಿಮ ಬಂಗಾಳ)–3;ಹ್ಯಾಮರ್‌ಥ್ರೋ: ವಿನೋದ್‌ ಕುಮಾರ್‌ (ಉತ್ತರಪ್ರದೇಶ; ದೂರ: 41.94 ಮೀ.)–1, ಪ್ರೇಮ್‌ ಕುಮಾರ್ (ತಮಿಳುನಾಡು)–2, ಮನೋಜ್ ಕುಮಾರ್‌–3.ಮಹಿಳೆಯರು: 1500 ಮೀ.: ಸಂಜು ನಾಯ್ಡು (ಛತ್ತೀಸ್‌ಗಡ; ಕಾಲ: 6:57.6 ನಿ.)–1, ಸ್ವಾತಿ ಸೋನಿ (ಗುಜರಾತ್‌)–2, ವಿದ್ಯಾ ಭುಜಬಲ್‌ (ಮಹಾರಾಷ್ಟ್ರ)–3; 400 ಮೀ.: ಗೀತಾಂಜಲಿ (ಒಡಿಶಾ; ಕಾಲ: 1:19.8 ನಿ.)–1, ಎಲ್‌. ಕಾರ್ತಿಕಾ (ತಮಿಳುನಾಡು)–2, ಎಂ.ಎಂ. ಸಾವಂತ್‌ (ಮಹಾರಾಷ್ಟ್ರ)–3;100 ಮೀ.ಹರ್ಡಲ್ಸ್‌: ಅಮಿತಾ ಸೇಥಿ (ಉತ್ತರಪ್ರದೇಶ; ಕಾಲ: 20.0ಸೆ.)–1, ಪೂರ್ಣಿಮಾ (ಮಹಾರಾಷ್ಟ್ರ)–2, ಎಲ್‌. ಕಾರ್ತಿಕಾ (ತಮಿಳುನಾಡು)–3.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.