ಗುರುವಾರ , ಮೇ 13, 2021
16 °C

ರಾಜ್ಯಮಟ್ಟದ ಕೌಂಟಿ ಕ್ರಿಕೆಟ್ ಟೂರ್ನಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ  ಪ್ರತಿಭಾನ್ವಿತ ಕ್ರಿಕೆಟ್ ಪಟುಗಳಿದ್ದರೂ ರಾಜ್ಯ ಮತ್ತು ರಾಷ್ಟ್ರ ತಂಡಕ್ಕೆ ಆಯ್ಕೆಯಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ರೋಣದ ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೈದಾನದಲ್ಲಿ  ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕೌಂಟಿ ಕ್ರಿಕೆಟ್ ಟೂರ್ನಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಕ್ರಿಕೆಟ್ ಅಸೋಸಿಯೇಶನ್‌ಗಳು ತಂಡದ ಆಯ್ಕೆ ವಿಧಾನದಲ್ಲಿ ವಿಫಲವಾಗುತ್ತಿದ್ದ ಕಾರಣ ಉತ್ತರ ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಂಡದಲ್ಲಿ ಜಾಗ ಸಿಗುತ್ತಿರಲಿಲ್ಲ ಎಂದರು.ಕ್ರಿಡಾಪಟುಗಳನ್ನು ಆಯ್ಕೆ ಮಾಡಬೇಕಾದರೆ ಬೆಂಗಳೂರಿಗೆ ಹೋಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿ ಕಷ್ಟಪಟ್ಟು ಆಯ್ಕೆ ಮಾಡಬೇಕಾಗಿತ್ತು.ಈ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಡೆದಿರುವ ಕೌಂಟಿ ಪಂದ್ಯಾವಳಿ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.ರಾಷ್ಟ್ರಮಟ್ಟದಲ್ಲಿರುವ ಅನೇಕ ಕ್ರೀಡಾ ಸಂಸ್ಥೆಗಳು ತೊಂದರೆ ನೀಡುವುದಕ್ಕೆ ಸದಾ ಸಿದ್ಧ ಇರುತ್ತವೆ. ಇದಕ್ಕೆ ಪ್ರತಿಯಾಗಿ ಉತ್ತರ ಕರ್ನಾಟಕದ ಕ್ರೀಡಾಪಟುಗಳು ಎದೆಯೊಡ್ಡಿ ನಿಲ್ಲಬೇಕು ಎಂದರು.ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇಂತಹ ಸಂಸ್ಥೆಗಳು  ಹುಟ್ಟಿ ಒಳ್ಳೆಯ ಕ್ರೀಡಾಪಟುಗಳನ್ನು ಬೆಳಕಿಗೆ ತರಬೇಕು.

 

ಗ್ರಾಮೀಣ ಭಾಗದಿಂದ ಹಿಡಿದು ರಾಜ್ಯಮಟ್ಟದ ಎಲ್ಲ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ಮುಂದೆ ಬಂದು, ಇಡೀ ರಾಜ್ಯವನ್ನು ಮಾದರಿಯನ್ನಾಗಿ ಮಾಡಬೇಕು ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲಾ ಕೌಂಟಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಲಿಂಗರಾಜ ವಾಲಿ ಮಾತನಾಡಿ, ಹಿಂದೆ ಕ್ರಿಕೆಟ್ ವೀಕ್ಷಣಾ ವರದಿ ಕೇಳುವುದಕ್ಕೆ ರೇಡಿಯೊ ಮಾತ್ರ ಇರುತ್ತಿತ್ತು. ಆದರೆ ಇಂದು ಟಿವಿಗಳ ಮುಖಾಂತರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಬಹುದು ಎಂದರು. ಕ್ರಿಕೆಟ್ ಜನಪ್ರಿಯಿ ಕ್ರೀಡೆಯಾದರೂ ಇಂದು ಕ್ರಿಕೆಟ್ ಹೆಸರಲ್ಲಿ ನಡೆಯುತ್ತಿರುವ ಬೆಟ್ಟಿಂಗ್‌ನಿಂದಾಗಿ ಅದರ ಪ್ರಸಿದ್ಧಿಗೆ ಮಸಿ ಬಳಿದಿದೆ,  ಜೂಜಿಗಾಗಿ ಕ್ರಿಕೆಟ್ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಬಾಗಲಕೋಟೆಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು  ಕ್ರಿಕೆಟ್‌ಪಟುಗಳು ಇದ್ದಾರೆ. ಕೌಂಟಿ ಕ್ರಿಕೆಟ್ ಅಸೋಸಿಯೇಶನ್ ಇನ್ನೂ ಹೆಚ್ಚಿನ ಪರಿಶ್ರಮ ವಹಿಸುವ ಮೂಲಕ ಜಿಲ್ಲೆಯ ಕ್ರಿಕೆಟ್ ಪಟುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿದೆ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ, ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಆರ್.ಎನ್. ಹೆರಕಲ್, ಬಿಟಿಡಿಎ ಸದಸ್ಯ ಸಂತೋಷ್ ಹೊಕ್ರಾಣಿ, ಜಮಖಾನಾ ಅಧ್ಯಕ್ಷ ಡಾ. ಸರಗಣಾಚಾರಿ, ಅಷ್ಪಾಕ್ ಮುದ್ದೇಬಿಹಾಳ, ಅಶೋಕ ವೊಕಾಶಿ, ಇಷ್ಟಲಿಂಗ ಶಿರಸಿ ಮತ್ತಿತರರು ಇದ್ದರು.

ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಬಳ್ಳಾರಿ ಜಿಲ್ಲೆಗಳ ತಂಡಗಳು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿವೆ.

 

ಗದಗ ಮತ್ತು ಬಾಗಲಕೋಟೆ ತಂಡದ ನಡುವೆ ಮೊದಲನೇ ಪಂದ್ಯ ನಡೆಯಿತು. ಟಾಸ್ ಗೆದ್ದ ಗದಗ ತಂಡ ಮೊದಲು ಬ್ಯಾಟಿಂಗ್ ಮಾಡಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.