ಮುಂಬೈ(ಐಎಎನ್ಎಸ್): ಮಹಾರಾಷ್ಟ್ರದಲ್ಲಿ ರಾಜ್ಯಸಭಾ ಚುನಾವಣಾ ಕಣ ರಂಗೇರತೊಡಗಿದ್ದು, ಇದೇ 30 ರಂದು ನಡೆಯುವ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದೆ.

ಕೇಂದ್ರ ಚುನಾವಣಾ ಆಯೋಗ ಇದೇ 12ರಂದು 15 ರಾಜ್ಯಗಳಿಗೆ ಅನ್ವಯಿಸುವಂತೆ ಅಧಿಸೂಚನೆ ಹೊರಡಿಸಲಿದೆ. ಒಟ್ಟು 58 ಸದಸ್ಯರು ನಿವೃತ್ತರಾಗಲಿದ್ದಾರೆ. ಮಹಾರಾಷ್ಟ್ರದಲ್ಲಿ 6 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಿಲಾಸ್ರಾವ್ ದೇಶ್ಮುಖ್, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್ನ (ಎನ್ಸಿಪಿ)ಇಬ್ಬರು ಸದಸ್ಯರು, ಬಿಜೆಪಿ ಮತ್ತು ಶಿವಸೇನೆಯ ತಲಾ ಒಬ್ಬರು ಸದಸ್ಯರ ಸ್ಥಾನಗಳು ತೆರವಾಗಲಿವೆ.

ನಿವೃತ್ತರಾಗಲಿರುವ ಪ್ರಮುಖ ಸದಸ್ಯರು:
ಬಿಜೆಪಿ: ಅರುಣ್ ಜೇಟ್ಲಿ(ಗುಜರಾತ್), ರವಿಶಂಕರ್ ಪ್ರಸಾದ್(ಬಿಹಾರ್), ಹೇಮಾ ಮಾಲಿನಿ(ಕರ್ನಾಟಕ), ಕಲ್ರಾಜ್ ಮಿಶ್ರಾ, ವಿನಯ್ ಕಟಿಯಾರ್(ಉತ್ತರ ಪ್ರದೇಶ),

ಕಾಂಗ್ರೆಸ್: ರಶೀದ್ ಅಲ್ವಿ(ಆಂಧ್ರ), ರೆಹಮಾನ್ ಖಾನ್(ಕರ್ನಾಟಕ), ಅಭಿಷೇಕ್ ಸಿಂಘ್ವಿ (ರಾಜಸ್ತಾನ),

ಇತರರು: ನರೇಶ್ ಚಂದ್ರ(ಬಿಎಸ್ಪಿ-ಉತ್ತರ ಪ್ರದೇಶ), ಕೇಂದ್ರ ಸಚಿವ ಮುಖುಲ್ ರಾಯ್(ತೃಣ ಮೂಲ ಕಾಂಗ್ರೆಸ್- ಪಶ್ಚಿಮ ಬಂಗಾಳ), ರಾಜನೀತಿ ಪ್ರಸಾದ್(ಆರ್ಜೆಡಿ-ಬಿಹಾರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.