ಬುಧವಾರ, ಮೇ 18, 2022
23 °C

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾವಣಗೆರೆಯ ಯಕ್ಷರಂಗ ಸಂಸ್ಥೆ ತನ್ನ 19ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. `ಯಕ್ಷಗಾನದಲ್ಲಿ ದುಡಿದು ಸಾಧನೆ ಮಾಡಿ ಮಡಿದ ಮಹನೀಯರು~ ಎಂಬುದು ಪ್ರಬಂಧ ಸ್ಪರ್ಧೆಯ ವಿಷಯ.

ಫುಲ್ ಸ್ಕೇಪ್ ಹಾಳೆಯ ಒಂದೇ ಮಗ್ಗುಲಲ್ಲಿ ಐದು ಪುಟಗಳಿಗೆ ಮೀರದಂತೆ ಕೈಬರಹದಲ್ಲಿ ಪ್ರಬಂಧ ಬರೆಯಬೇಕು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಥಮ, ದ್ವಿತೀಯ, ತೃತೀಯ ಹಾಗೂ ಎರಡು ಸಮಾಧಾನಕರ ಬಹುಮಾನಗಳು ಇವೆ. ಪ್ರಮಾಣಪತ್ರ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ. ಒಬ್ಬರಿಗೆ ಒಂದು ಪ್ರಬಂಧ ಬರೆಯಲು ಮಾತ್ರ ಅವಕಾಶ. ಪ್ರಬಂಧ ಕಳುಹಿಸಲು ಇದೇ 15 ಕಡೆಯ ದಿನ. ವಿಳಾಸ: ಯಕ್ಷರಂಗ ಯಕ್ಷಗಾನ ಸಂಸ್ಥೆ, 431, `ಕನ್ನಡ ಕೃಪಾ~, ಕುವೆಂಪು ರಸ್ತೆ, ಕಸ್ತೂರಬಾ ಬಡಾವಣೆ, ದಾವಣಗೆರೆ - 577 002. ಹೆಚ್ಚಿನ ಮಾಹಿತಿಗೆ 94493 74300 ಅಥವಾ 99011 22728 ಮೊಬೈಲ್ ದೂರವಾಣಿಗೆ ಕರೆ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.