ಬೆಂಗಳೂರು: ಎ.ಆರ್. ನವನೀತ್ ಮತ್ತು ಆರ್. ರಕ್ಷಾ ಇಲ್ಲಿ ನಡೆಯುತ್ತಿರುವ ಟಿವಿಎಸ್ ವೇಗೊ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಯೂತ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ನ ಡಾ. ರಾಜೇಂದ್ರ ಪ್ರಸಾದ್ ಅಡಿಟೋರಿಯಂನಲ್ಲಿ ಸೋಮವಾರ ನಡೆದ ಯೂತ್ ಬಾಲಕರ ವಿಭಾಗದ ಫೈನಲ್ನಲ್ಲಿ ನವನೀತ್ 11-5, 11-3, 11-8, 11-9 ರಲ್ಲಿ ವೇದಾಂತ್ ಎಂ. ಅರಸ್ ವಿರುದ್ಧ ಜಯ ಪಡೆದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ನವನೀತ್ 11-9, 14-12, 11-4, 9-11, 11-9 ರಲ್ಲಿ ವಿ.ಪಿ. ಚರಣ್ ವಿರುದ್ಧವೂ, ವೇದಾಂತ್ 11-6, 11-4, 10-12, 9-11, 11-8, 11-8 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ಎದುರೂ ಜಯ ಪಡೆದಿದ್ದರು.

ಯೂತ್ ಬಾಲಕಿಯರ ವಿಭಾಗದ ಫೈನಲ್ನಲ್ಲಿ ರಕ್ಷಾ 12-10, 11-7, 11-6, 11-8 ರಲ್ಲಿ ಐಶ್ವರ್ಯ ಆರ್ ಬಿದರಿ ಅವರನ್ನು ಮಣಿಸಿದರು. ಪ್ರಭಾವಿ ಪ್ರದರ್ಶನ ನೀಡಿದ ರಕ್ಷಾ ನೇರ ಸೆಟ್ಗಳ ಗೆಲುವು ತಮ್ಮದಾಗಿಸಿಕೊಂಡರು.

ನಾಲ್ಕರಘಟ್ಟದ ಪಂದ್ಯದಲ್ಲಿ ರಕ್ಷಾ 11-8, 12-10, 11-7, 12-10 ರಲ್ಲಿ ರಿಧಿ ರೋಹಿತ್ ಅವರನ್ನು ಮಣಿಸಿದ್ದರೆ, ಐಶ್ವರ್ಯ 6-11, 7-11, 11-4, 15-13, 11-9, 7-10, 11-6 ರಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು.

ಸಹನಾ, ಶ್ರೇಯಲ್ಗೆ ಕಿರೀಟ: ಸಹನಾ ಕುಲಕರ್ಣಿ ಮತ್ತು ಶ್ರೇಯಲ್ ಕೆ. ತೆಲಾಂಗ್ ಇದೇ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಫೈನಲ್ ಪಂದ್ಯದಲ್ಲಿ ಸಹನಾ 11-9, 12-14, 12-10, 7-11, 11-8, 11-4 ರಲ್ಲಿ ಎನ್. ಐಶ್ವರ್ಯ ವಿರುದ್ಧ ಗೆಲುವು ಪಡೆದರು. ಸೆಮಿಫೈನಲ್ ಪಂದ್ಯಗಳಲ್ಲಿ ಸಹನಾ 5-11, 11-8, 11-4, 11-5, 11-7 ರಲ್ಲಿ ವಿ. ಖುಷಿ ಎದುರೂ, ಐಶ್ವರ್ಯ 11-7, 8-11, 5-11, 11-8, 11-9, 11-9 ರಲ್ಲಿ ರಿಧಿ ಮೇಲೂ ಜಯ ಸಾಧಿಸಿದ್ದರು.

ಜೂನಿಯರ್ ಬಾಲಕರ ವಿಭಾಗದ ಫೈನಲ್ನಲ್ಲಿ ಶ್ರೇಯಲ್ 11-2, 11-7, 5-11, 11-8, 11-4 ರಲ್ಲಿ ಸುನಂದ್ ವಾಸನ್ ಅವರನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು. ಚುರುಕಿನ ಆಟವಾಡಿದ ಶ್ರೇಯಲ್ ಕೇವಲ ಒಂದು ಗೇಮ್ನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.

ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಲ್ 13-11, 11-13, 11-8, 11-3, 11-5 ರಲ್ಲಿ ವಿ.ಪಿ. ಚರಣ್ ಅವರನ್ನು ಸೋಲಿಸಿದ್ದರು. ಸುನಂದ್ 12-10, 11-8, 8-11, 14-16, 1-11, 11-5, 11-3 ರಲ್ಲಿ ವೇದಾಂತ್ ಎಂ. ಅರಸ್ ವಿರುದ್ಧ ಗೆಲುವು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.