ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಮತ್ತು ರಾಮದೇವ್ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಗಳು ಸಂಘದ ~ಭಯೋತ್ಪಾದಕ~ ಸಂಪರ್ಕಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಸಲುವಾಗಿ ಆರೆಸ್ಸೆಸ್ - ಬಿಜೆಪಿ ಹಮ್ಮಿಕೊಂಡಿರುವ ವ್ಯಾಪಕ ಯೋಜನೆಯ ಭಾಗಗಳಾಗಿದ್ದು, ~ನಿಮ್ಮನ್ನೂ ಅವರು ಈ ಯೋಜನೆಯ ವ್ಯಾಪ್ತಿಗೆ ತರಬಹುದು~ ಎಂದು ಕಾಂಗ್ರೆಸ್ ಧುರೀಣ ದಿಗ್ವಿಜಯ ಸಿಂಗ್ ಗುರುವಾರ ಶ್ರೀ ಶ್ರೀ ರವಿಶಂಕರ ಗುರೂಜಿ ಅವರನ್ನು ಎಚ್ಚರಿಸಿದ್ದಾರೆ.

ರಾಮದೇವ್ ಮತ್ತು ಅಣ್ಣಾ ಹಜಾರೆ ಅವರು ಆರೆಸ್ಸೆಸ್- ಬಿಜೆಪಿಯ ~ಎ~ ಮತ್ತು ~ಬಿ~ ಭಾಗವಾಗಿದ್ದು, ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ~ಸಿ~ ಭಾಗವಾಗಬಹುದು ಎಂದು ಹೇಳಿರುವ ಏಐಸಿಸಿ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಈ ಎರಡು ಸಂಘಟನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದಾರೆ.

ಟ್ವಿಟರ್ ಸಂದೇಶದಲ್ಲಿ ತಮ್ಮ ಈ ಎಚ್ಚರಿಕೆಯನ್ನು ನೀಡಿರುವ ಕಾಂಗ್ರೆಸ್ ಧುರೀಣ, ~ಯೋಜನೆ ಎ, ಬಿ ಮತ್ತು ಸಿ - ಇವು ತಾವು ಶಾಮೀಲಾಗಿರುವ ಭಯೋತ್ಪಾದಕ ಚಟುವಟಿಕೆಗಳಿಂದ ಜನರ ಮನಸ್ಸನ್ನು ಭ್ರಷ್ಟಾಚಾರದತ್ತ ತಿರುಗಿಸಲು ಸಂಘ- ಬಿಜೆಪಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಎಂದು ಹೇಳಿದ್ದಾರೆ.

ನಂತರ ಸುದ್ದಿಗಾರ ಜೊತೆ ಮಾತನಾಡುತ್ತಿದ್ದ ದಿಗ್ವಿಜಯ ಸಿಂಗ್ ಅವರು ~ಯೋಜನೆ ಎ ಅಂದರೆ ರಾಮದೇವ್, ಯೋಜನೆ ಬಿ ಅಂದರೆ ಅಣ್ಣಾ ಹಜಾರೆ ಮತ್ತು ಯೋಜನೆ ಸಿ ಅಂದರೆ ಶ್ರೀ ಶ್ರೀ ರವಿಶಂಕರ ಎಂದು ನುಡಿದರು.
~ರವಿ ಶಂಕರ ಗುರೂಜಿ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ಜೀವನ ಕಲೆ ಶಿಬಿರದಲ್ಲಿ 2001ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾನೂ ಪಾಲ್ಗೊಂಡಿದ್ದೆ. ಸಂಘ- ಬಿಜೆಪಿ ಬಗ್ಗೆ ಅವರು ಎಚ್ಚರ ವಹಿಸಬೇಕು ಎಂದೂ ಇನ್ನೊಂದು ಟ್ವಿಟರ್ ಸಂದೇಶದಲ್ಲಿ ಸಿಂಗ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರವಿಶಂಕರ ಗುರೂಜಿ ಅವರು ~ಜನರು ಹಲವಾರು ವಿಷಯಗಳನ್ನು ಬರೆಯುತ್ತಾರೆ. ಪ್ರತಿಯೊಂದು ಟೀಕೆಗೂ ನಾನು ಉತ್ತರ ಬರೆಯುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರ್ಯ ಇದೆ~ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.