ಶುಕ್ರವಾರ, ಫೆಬ್ರವರಿ 26, 2021
19 °C

ರಾಮನವಮಿ ನೃತ್ಯ ನಿನಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನವಮಿ ನೃತ್ಯ ನಿನಾದ

ರಾಮನವಮಿ ಪ್ರಯುಕ್ತ ಶನಿವಾರ ಸಂಜೆ ಯಲಹಂಕದ ವಿನಾಯಕನಗರ ಶ್ರೀ ಸೀತಾರಾಮ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ (ಕೊತ್ತನೂರು) ದೀಪಾಭಟ್ ಮತ್ತು ತಂಡ ನಡೆಸಿಕೊಟ್ಟ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ ತಂಡದ ಪ್ರೌಢ ಪ್ರತಿಭೆಯನ್ನು ಅನಾವರಣಗೊಳಿಸಿತು.ದೀಪಾ ಕಲಾಕ್ಷಿತಿಯ ಗುರು ಪ್ರೊ.ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ, ಜನ ಮನ್ನಣೆ ಗಳಿಸಿದ ಕಲಾವಿದೆ. ಪುರಂದರದಾಸರ ರಚನೆ  `ಗಜವದನಾ ಬೇಡುವೆ~ ಎಂಬ  ಪ್ರಾರ್ಥನಾ ನೃತ್ಯದಿಂದ ಅವರು ಕಾರ್ಯಕ್ರಮ ಪ್ರಾರಂಭಿಸಿದರು.

 

ಅಲರಿಪು, ಸುಬ್ರಹ್ಮಣ್ಯಕೌತ್ವಂ, ಆರಭಿ ಜತಿಸ್ವರ, ಯಮನ್ ಕಲ್ಯಾಣಿ ರಾಗದ ಶ್ರಿ ರಾಮಚಂದ್ರ ಕೃಪಾಳು ಭಜನ್, ದೇವಿ ಮಹಿಮೆಯನ್ನು ಸಾರುವ ಕಲ್ಯಾಣಿ ರಾಗದ ಕೃತಿ ವಾರಿಜಾಕ್ಷಿ ಕಾಮಾಕ್ಷಿ , ಚಂದ್ರಚೂಡ ಶಿವಶಂಕರ ಮೊದಲಾದ ನೃತ್ಯಬಂಧಗಳಿಗೆ ಕಲಾವಿದರು ಅದ್ಭುತವಾಗಿ ನರ್ತಿಸಿದರು.ಪುರಂದರದಾಸರ ಮತ್ತೊಂದು ಜನಪ್ರಿಯ ಕೃತಿ ಕಾಪಿ ರಾಗದ  `ಜಗದೋದ್ಧಾರನ ಆಡಿಸಿದಳೆಶೋದೆ~  ದೇವರನಾಮದಲ್ಲಿ ದೀಪಾ ಭಟ್ ಅಭಿನಯ ಮನಮೋಹಕವಾಗಿತ್ತು.

`ಭಾಗ್ಯದ ಲಕ್ಷ್ಮೀ ಬಾರಮ್ಮೋ~, `ಯಾದವ ನೀ ಬಾ~, `ಆಂಜನೇಯ ರಘುರಾಮದೂತಂ~ ಮತ್ತು ಜಯದೇವ ಕವಿಯ ಗೀತಗೋವಿಂದ ಕಾವ್ಯದಿಂದ ಆಯ್ದ ಅಷ್ಟಪದಿ ಪ್ರಳಯ ಪಯೋಧಿಜಲೇ ದಶಾವತಾರ ಅತ್ಯುತ್ತಮ ನೃತ್ಯ ಸಂಯೊಜನೆಯೊಂದಿಗೆ ಮೂಡಿಬಂತು.

ರಾಮನವಮಿಗೆ ಈ ನೃತ್ಯಾಂಜಲಿ ನೃತ್ಯ ರೂಪಕ ವಿಶೇಷ ಮೆರುಗು ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.