ನವದೆಹಲಿ(ಐಎಎನ್ಎಸ್): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಈ ತಿಂಗಳ ಅಂತ್ಯದಲ್ಲಿ 12 ದಿನಗಳ ಆಫ್ರಿಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಇದು ಅವರ ಅಧಿಕಾರಾವಧಿಯ ಕೊನೆಯ ಭೇಟಿ ಎನ್ನಲಾಗಿದೆ.
ಈ ತಿಂಗಳ 27 ಅಥವಾ 28ರಿಂದ ಮೇ 8ರವರೆಗೆ ಸೀಶೆಲ್ಸ್, ದಕ್ಷಿಣ ಆಫ್ರಿಕಾ ಮತ್ತಿತರ ಆಫ್ರಿಕಾ ದೇಶಗಳಿಗೆ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜುಲೈ ಅಂತ್ಯಕ್ಕೆ ಅವರ 5 ವರ್ಷಗಳ ಅಧಿಕಾರಾವಧಿ ಪೂರ್ಣವಾಗಲಿದ್ದು, ಈ ಅವಧಿಯಲ್ಲಿ 12 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ನಾಲ್ಕು ಖಂಡಗಳ 22 ದೇಶಗಳಿಗೆ ಭೇಟಿ ನೀಡಿದ್ದಾರೆ.

ರಿಸಾಟ್ ಉಪಗ್ರಹ

ಚೆನ್ನೈ(ಐಎಎನ್ಎಸ್): ಶ್ರೀಹರಿಕೋಟಾದಿಂದ ಈ ತಿಂಗಳ ಅಂತ್ಯದಲ್ಲಿ ಉಡಾವಣೆಗೊಳ್ಳಲಿರುವ ರಿಸಾಟ್-1 ಸರ್ವೇಕ್ಷಣಾ ಉಪಗ್ರಹವನ್ನು ಮೂರು ತಿಂಗಳ ಹಿಂದೆ ಆರಂಭಿಸಿರುವ ನಿಯಂತ್ರಣ ಕೇಂದ್ರವು ನಿಯಂತ್ರಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಉನ್ನತ ಮೂಲಗಳು ತಿಳಿಸಿವೆ.

ಶ್ರೀಹರಿಕೋಟಾದಲ್ಲಿ ಜನವರಿ ತಿಂಗಳಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೊಸ ನಿಯಂತ್ರಣ ಘಟಕ ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.