ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸೂಚನೆಯನ್ನೇನೂ ನೀಡುವುದಿಲ್ಲ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ನೇತೃತ್ವ ವಹಿಸಿದ ಕಾಂಗ್ರೆಸ್ ಆಗಲೀ, ಬರುವ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯಾಗಲೀ ಸಂಭ್ರಮ ಪಡುವಂತಹ ಫಲಿತಾಂಶವನ್ನು ಮತದಾರರು ನೀಡಿಲ್ಲ. ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಿವೆ.

ಅದರಲ್ಲೂ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಸ್ಥಾನ ಗಳಿಸಿದ ಸಮಾಜವಾದಿ ಪಕ್ಷದ ಸಾಧನೆ ಗಮನಾರ್ಹವಾದದ್ದು. ವಿಧಾನಸಭೆ ಚುನಾವಣೆಯಲ್ಲಿ ಈಚಿನ ವರ್ಷಗಳಲ್ಲಿ ವ್ಯಕ್ತವಾಗುತ್ತಿರುವ ಆಡಳಿತ ವಿರೋಧಿ ಅಲೆ ಉತ್ತರ ಪ್ರದೇಶ ಮತ್ತು ಗೋವಾದಲ್ಲಿ ಪರಿಣಾಮ ಬೀರಿದೆ. ಆದರೆ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಮತದಾರರು ಈಗಿನ ಆಡಳಿತಗಳನ್ನೇ ಬೆಂಬಲಿಸಿದ್ದಾರೆ.

ಈಚಿನ ವರ್ಷಗಳಲ್ಲಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಸಹಸ್ರ ಸಹಸ್ರ ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಪ್ರಕರಣಗಳು ಈ ಚುನಾವಣೆಯಲ್ಲಿ ವಿಷಯಗಳೇ ಆಗಿರಲಿಲ್ಲವೆಂಬುದು ಕುತೂಹಲದ ಅಂಶ.

ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಗಮನಿಸುವ ಸಂಗತಿಗಳಿಗೂ, ಲೋಕಸಭೆ ಚುನಾವಣೆಯನ್ನು ನೋಡುವ ದೃಷ್ಟಿಗೂ ಅಂತರ ಇರುವುದನ್ನು ಈ ಚುನಾವಣೆ ಫಲಿತಾಂಶಗಳು ತೋರಿಸಿವೆ. ಆದ್ದರಿಂದ ಈಗಿನ ಫಲಿತಾಂಶವನ್ನು ಆಧರಿಸಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರ ಒಲವನ್ನು ಊಹಿಸಿ ಲೆಕ್ಕಹಾಕಲಾಗದು.

ಆದರೆ, ಪ್ರಾದೇಶಿಕ ಪಕ್ಷಗಳ ಸಹಕಾರವಿಲ್ಲದೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಈ ಚುನಾವಣೆ ಫಲಿತಾಂಶ ಸ್ಪಷ್ಟವಾಗಿ ಹೇಳಿದೆ.

ಎರಡು ದಶಕಗಳಿಂದ ಶೋಷಿತ ಸಮುದಾಯಗಳ ಬೆಂಬಲವನ್ನಷ್ಟೆ ನಂಬಿಕೊಂಡಿದ್ದ ಮಾಯಾವತಿ, ಕಳೆದ ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷದ ತೆಕ್ಕೆಗೆ ಬ್ರಾಹ್ಮಣರು ಮತ್ತು ಇತರ ವರ್ಗಗಳನ್ನು ಸೇರಿಸಿಕೊಂಡು ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರಿಂದ ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಆದರೆ, ಸಿಕ್ಕಿದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅವರೀಗ ಜನರಿಂದ ತಿರಸ್ಕೃತರಾಗಿದ್ದಾರೆ. ದೇಶದ ನಾಯಕತ್ವ ಹಿಡಿಯಬಲ್ಲ ವರ್ಚಸ್ಸನ್ನು ಗಳಿಸಿದ್ದ ಮಾಯಾವತಿ ಐದೇ ವರ್ಷದಲ್ಲಿ ಇತಿಹಾಸಕ್ಕೆ ಸೇರಿರುವುದು ಶೋಷಿತ ಸಮುದಾಯದ ಸಂಘಟನೆಗೆ ಹಿನ್ನಡೆ.

ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಗೆ ಗುರಿ ಇಟ್ಟಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಈ ಚುನಾವಣೆ ಫಲಿತಾಂಶ ಸೃಷ್ಟಿಸಿದೆ.

ಆಕರ್ಷಕ ಭರವಸೆಗಳು, ಪ್ರಚಾರದಲ್ಲಿ ನಾವೀನ್ಯತೆ, ತಾರಾ ಆಕರ್ಷಣೆಯ ವರ್ಚಸ್ವೀ ವ್ಯಕ್ತಿಗಳಿಂದ ಭಾಷಣ, ರಸ್ತೆ ಪ್ರದರ್ಶನ ಮೊದಲಾದ ತಂತ್ರಗಳು ಜನರಲ್ಲಿ ಕುತೂಹಲವನ್ನು ಮೂಡಿಸುತ್ತವೆಯೇ ಹೊರತು ಮತಗಳನ್ನು ತರುವುದಿಲ್ಲ ಎಂಬುದನ್ನು ಈ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಜನರೊಂದಿಗೆ ಬೆರೆತು ಬೇರುಮಟ್ಟದ ಸಂಘಟನೆ, ಸ್ಥಳೀಯರಲ್ಲಿ ನಾಯಕತ್ವ ಬೆಳೆಯಲು ಉತ್ತೇಜನ, ನಂಬಿಕೆ ಮೂಡಿಸುವ ನಾಯಕತ್ವದಿಂದ ಜನ ಬೆಂಬಲ ಗಳಿಸುವುದು ಸಾಧ್ಯವೇ ಹೊರತು ಭದ್ರತಾ ಪಡೆಗಳ ಕೋಟೆಯಿಂದ ಉದುರಿಸುವ ಆಣಿಮುತ್ತುಗಳಿಂದಲ್ಲ ಎಂಬುದನ್ನು ರಾಷ್ಟ್ರೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.