ಬೆಂಗಳೂರು: ಸುಮಾರು ಎರಡು ವರ್ಷಗಳಿಂದ ಪರಿಹಾರವಾಗದೆ ಉಳಿದಿದ್ದ ಬಿಬಿಎಂಪಿಗೆ ಸಂಬಂಧಿಸಿದ ನೂರಾರು ವ್ಯಾಜ್ಯಗಳನ್ನು ಶನಿವಾರ ಪುರಭವನದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪರಿಹರಿಸಲಾಯಿತು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಅನೇಕರ ಪ್ರಕರಣಗಳು ಇತ್ಯರ್ಥವಾದರೆ, ಇನ್ನು ಕೆಲವರು ಭರವಸೆಯನ್ನು ಪಡೆದರು. ಇಲ್ಲಿ ಪೂರ್ವ ಮತ್ತು ಪಶ್ಚಿಮ ವಲಯದ ಕೋರ್ಟ್ಗೆ ಹೋಗುವ ಮೊದಲಿನ ವ್ಯಾಜ್ಯಗಳನ್ನು ಪರಿಹರಿಸಲಾಯಿತು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ, ‘ಬಿಬಿಎಂಪಿಯು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ನಿಧಾನಗತಿಯ ಕಾರ್ಯ ನಿರ್ವಹಣೆ, ಅಧಿಕಾರಿಗಳು ವಿಳಂಬ ನೀತಿಯನ್ನು ಅನುಸರಿಸುತ್ತಾರೆ ಎಂಬ ಭಾವನೆ ಜನರಲ್ಲಿದೆ. ಇದರಿಂದ, ಎಲ್ಲ ವ್ಯಾಜ್ಯಗಳ ತ್ವರಿತ ನಿರ್ವಹಣೆಗೆ ಲೋಕ ಅದಾಲತ್ ಆಯೋಜಿಸಲಾಗಿದೆ’ ಎಂದು ಹೇಳಿದರು.
‘ಸಂಜೆ 5 ಗಂಟೆಯ ವೇಳೆಗೆ ಆರೋಗ್ಯ, ಶಿಕ್ಷಣ, ನಕ್ಷೆ ಮಂಜೂರಾತಿ, ವ್ಯಾಪಾರ ಪರವಾನಗಿ ಸೇರಿದಂತೆ, ಪೂರ್ವ ಮತ್ತು ಪಶ್ಚಿಮ ವಲಯದಲ್ಲಿನ ಬಾಕಿ ಉಳಿದಿರುವ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು’ ಎಂದರು.

‘ಕೆಲ ಅಧಿಕಾರಿಗಳು ಪ್ರಕರಣಗಳ ಇತ್ಯರ್ಥಕ್ಕೆ ವಿನಾಕಾರಣ ವಿಳಂಬವನ್ನು ಮಾಡುತ್ತಾರೆ. ಇದರಿಂದ, ವಿವಾದಗಳು ಏರ್ಪಡುತ್ತವೆ. ಜನರ ಸೇವೆಗಾಗಿಯೇ ಬಿಬಿಎಂಪಿ ಇದೆ’ ಎಂದರು.ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ನಿಜಗಣ್ಣನವರ್ ಮಾತನಾಡಿ, ‘ರಾಷ್ಟ್ರೀಯ ಲೋಕ ಅದಾಲತ್ ಒಂದು ವಿನೂತನ ಕಾರ್ಯಕ್ರಮವಾಗಿದೆ. ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಅಧಿಕಾರಿಗಳಿಲ್ಲ. ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆಯಿದೆ’ ಎಂದರು.

‘ಸಿಬ್ಬಂದಿಯ ಕೊರತೆಯಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡಿದರೂ ಕಡತಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಇದರಿಂದ, ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದರೂ ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸಬಾರದು’ ಎಂದು ಹೇಳಿದರು.

ಬಿಬಿಎಂಪಿ ಕಾನೂನು ಕೋಶದ ಮುಖ್ಯಸ್ಥ ಕೆ.ಡಿ.ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ಇಲ್ಲಿ ನಡೆದಿರುವ ಲೋಕ ಅದಾಲತ್ ಹಾಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಬಿಬಿಎಂಪಿ ಅಧಿಕಾರಿಗಳು ಅದಾಲತ್ನಲ್ಲಿ ಭಾಗವಹಿಸಿದ್ದರೂ ಚುನಾವಣಾ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ. ರಾಷ್ಟ್ರೀಯ ಲೋಕ ಅದಾಲತ್ ಅನ್ವಯ ಏಪ್ರಿಲ್ 12 ರೊಳಗೆ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾಗಿದೆ’ ಎಂದರು.

ಕಾಕ್ಸಟೌನ್ನ ಪಾಲಿಕೆ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಯರಾಮ್ ಅವರು ಎರಡು ವರ್ಷಗಳ ಹಿಂದೆ ಮರಣ ಹೊಂದಿದ್ದರು. ಅವರ ಪತ್ನಿ ಲಕ್ಷ್ಮಿಶ್ರೀ ಅವರಿಗೆ ಅವರ ಪತಿಯ ಕೆಲಸ ದೊರೆಯಿತು. ಆದರೆ, ಎರಡು ವರ್ಷದ ಪಿಂಚಣಿಗಾಗಿ ಬಿಬಿಎಂಪಿಗೆ ಅಲೆದರೂ ಪಿಂಚಣಿ ದೊರೆತಿರಲಿಲ್ಲ.

‘ಲೋಕ ಅದಾಲತ್ನಲ್ಲಿ ಎರಡು ವರ್ಷದ ಪಿಂಚಣಿ ಒಟ್ಟಿಗೆ ಬಂದಿದ್ದು ಸಂತಸ ನೀಡಿದೆ. ಇದರಿಂದ, ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ’ ಎಂದು ಲಕ್ಷ್ಮಿಶ್ರೀ ಅವರು ಹರ್ಷ ವ್ಯಕ್ತಪಡಿಸಿದರು.

ಪರವಾನಗಿಯಿಂದ ಸಂತಸ
ಮಾಗಡಿ ರಸ್ತೆಯ ಅಗ್ರಹಾರದಲ್ಲಿ ಪ್ರಗತಿ ರಾ ಸಿಲ್ಕ್ ಘಟಕವನ್ನು ಸ್ಥಾಪನೆ ಮಾಡಿದ್ದೆವು. ಆದರೆ, ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ನೆರೆಮನೆಯವರು ದೂರು ನೀಡಿದ್ದರಿಂದ, ಬಿಬಿಎಂಪಿ ಅವರು ಪರವಾನಗಿ ರದ್ದುಗೊಳಿಸಿದ್ದರು. ನಂತರ ಶಬ್ದ ನಿರೋಧಕ ಅಳವಡಿಸಿದ್ದರೂ, ಬಿಬಿಎಂಪಿ ಪರವಾನಗಿ ನೀಡಿರಲಿಲ್ಲ. ಆದರೆ, ಪ್ರಾಧಿಕಾರ ಸ್ಥಳದಲ್ಲೇ ಪರವಾನಗಿ ನೀಡುವಂತೆ ಆದೇಶ ನೀಡಿರುವುದು ಸಂತಸ ತಂದಿದೆ.
– ಪ್ರಗತಿ, ಪ್ರಗತಿ ರಾ ಸಿಲ್ಕ್ ಘಟಕದ ಮಾಲೀಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.