ಮರಿಯಮ್ಮನಹಳ್ಳಿ: ಪಟ್ಟಣದ ಶ್ರೀ ವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಇದೇ 16ರಂದು ಆರಂಭವಾಗಲಿರುವ 14 ವರ್ಷ ವಯೋಮಿತಿಯೊಳಗಿನ ಶಾಲಾ ಮಕ್ಕಳ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಗೆ ನಾಲ್ಕು ಅಂಕಣಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ಅಂತಿಮಗೊಂಡಿವೆ. ಐದು ದಿನಗಳ ಕಾಲ ಪಟ್ಟಣದಲ್ಲಿ ವಾಲಿಬಾಲ್ ಹಬ್ಬ ನಡೆಯಲಿದೆ.

ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ ಪಿ.ಎಸ್. ಮಂಜುನಾಥ ಸಕಲ ಸಿದ್ದತೆಗಳು ಅಂತಿಮಗೊಂಡಿವೆ. ಸರ್ಕಾರ, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿಯ ಸಹಯೋಗದಲ್ಲಿ ಪಂದ್ಯಾವಳಿಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಆಟಗಾರರ ಸುರಕ್ಷತೆ, ಮೂಲ ಸೌಕರ್ಯ, ಕುಡಿಯುವ ನೀರು, ಪೊಲೀಸ್ ಭದ್ರತೆ, ನೈರ್ಮಲ್ಯ ಕಾಪಾಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು.

ಒಟ್ಟು ನಾಲ್ಕು ಕಡೆಗಳಲ್ಲಿ ಆರೋಗ್ಯ ಕೇಂದ್ರಗಳನ್ನು ತೆರಯಲಾಗಿದ್ದು, ಮಕ್ಕಳ ವಯಸ್ಸನ್ನು ದೃಢಪಡಿಸಲು ಸರ್ಜನ್, ಆರ್ಥೋಪಿಡಿಕ್, ದಂತ ವೈದ್ಯರ ತಪಾಸಣಾ ಕಾರ್ಯ ಸಹ ನಡೆಸಲಾಗಿದೆ. ಕ್ರೀಡಾಪಟುಗಳು ವಾಸದ ಸ್ಥಳದಿಂದ ಕ್ರೀಡಾಂಗಣಕ್ಕೆ ಕರೆತರಲು ಈಗಾಗಲೇ 9 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸುಮಾರು 150 ಜನ ಸಿಬ್ಬಂದಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ವಿವರಿಸಿದರು.

ಡಿಡಿಪಿಐ ಡಾ.ಎಚ್. ಬಾಲರಾಜ್ ಮಾತನಾಡಿ, ವಿವಿಧ ರಾಜ್ಯಗಳ ತಂಡಗಳನ್ನು ಕರೆ ತರಲು ಹೊಸಪೇಟೆ ರೈಲ್ವೆ ನಿಲ್ದಾಣದಿಂದ ಹಾಗೂ ಬಸ್ ನಿಲ್ದಾಣದಲ್ಲಿ ಕೌಂಟರ್ಗಳನ್ನು ತೆರೆಯಲಾಗಿದೆ. ಅಲ್ಲಿಂದ ನೇರವಾಗಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜರುಗುತ್ತಿದ್ದು, ಅನಾನುಕೂಲ ಆಗದಂತೆ ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಹಂಪಿ ಪುನಶ್ಚೇತನ ಪ್ರಾಧಿಕಾರದ ಅಧಿಕಾರಿ ಎಲ್.ಡಿ. ಜೋಷಿ, ಕೂಡ್ಲಿಗಿ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಅಶೋಕ್, ಡಾ. ಬಸವರಾಜ ಬೆಣ್ಣಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ದೈಹಿಕ ಶಿಕ್ಷಕರಾದ ಜಾಕೀರ್ ಹುಸೇನ್, ದುರುಗಪ್ಪ, ಕಾಶಪ್ಪ, ಚಂದ್ರಪ್ಪ, ಗುತ್ತಿಗೆದಾರ ಅಪ್ಪಣ್ಣ ಉಪಸ್ಥಿತರಿದ್ದರು.

ಗುಣಮಟ್ಟದ ಅಂಕಣ
ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗಳ ಸಿದ್ಧತೆಗಳು ಪೂರ್ಣಗೊಂಡಿದ್ದು, ಪಂದ್ಯಾವಳಿಗಾಗಿ ಸಿದ್ದಪಡಿಸಿರುವ ಕ್ರೀಡಾಂಗಣ ಅಂತರರಾಷ್ಟ್ರೀಯ ಪಂದ್ಯಾವಳಿಯ ಗುಣಮಟ್ಟವನ್ನು ಹೊಂದಿವೆ ಎಂದು ಬೆಂಗಳೂರು ಆಯುಕ್ತರ ಕಚೇರಿಯ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಅನಂತನಾಯಕ ತಿಳಿಸಿದರು.

ಅವರು ರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ಸಿದ್ದಪಡಿಸಿದ ಅಂಕಣಗಳನ್ನು ಭಾನುವಾರ ವೀಕ್ಷಿಸಿದ ನಂತರ ಮಾತನಾಡಿ, ಬೇರೆಡೆ ನಡೆದ ರಾಷ್ಟ್ರೀಯ ಕ್ರೀಡಾಕೂಟಗಳಿಗಿಂತ ಇಲ್ಲಿಯ ಸಿದ್ಧತೆಗಳು ವಿಶೇಷವಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವ ವಾಲಿಬಾಲ್ ಟೂರ್ನಿಗೆ ಸಿದ್ಧಪಡಿಸಿದ ಅಂಕಣಗಳು ಉತ್ತಮ ದರ್ಜೆಯಿಂದ ಕೂಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.