ಡಾ.ದೆವೇಂದ್ರಕುಮಾರ ಹಕಾರಿ ವೇದಿಕೆ(ಕುಷ್ಟಗಿ): ಕೃಷಿಯಲ್ಲಿ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯ ಅತಿರೇಕದಿಂದಾಗಿ ಉತ್ತರ ಕರ್ನಾಟಕದ ಜಮೀನುಗಳು ಭಾರತದಲ್ಲಿ ಎರಡನೇ ಅತಿದೊಡ್ಡ ಮರುಭೂಮಿಯಾಗಿ ಪರಿವರ್ತನೆಗೊಳ್ಳಲಿವೆ ಎಂಬ ಆತಂಕವನ್ನು ಧಾರವಾಡದ ಡಾ.ಸಂಜೀವ ಕುಲಕರ್ಣಿ ಶನಿವಾರ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ‘ಸಾವಯವ ಕೃಷಿಯ ಇಂದಿನ ಅಗತ್ಯಗಳು’ ವಿಷಯ ಕುರಿತು ಮಾತನಾಡಿದ ಅವರು, ಹಿಂದಿನ ಜನ ಸಾವಯವ ಎಂಬ ಬದುಕಿನ ಹಾದಿ ತೋರಿಸಿದ್ದರು. ಆದರೆ 60ರ ದಶಕದಲ್ಲಿ ಬಂದ ಹಸಿರು ಕ್ರಾಂತಿ ರೈತರ ಬದುಕನ್ನೇ ಕಸಿದುಕೊಂಡಿತು. ಕಳೆದ ಎರಡೂವರೆ ದಶಕದಲ್ಲಿ ಭಾರತದಲ್ಲಿ 2.70 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಕ್ರಿಮಿನಾಶಕ ಸಿಂಪರಣೆಯಿಂದ ತರಕಾರಿ ಹಾಗೂ ಹಣ್ಣು ಹಂಪಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷ ಶೇಖರಣೆಗೊಳ್ಳುತ್ತದೆ. ಇಂತಹ ವಿಷಯುಕ್ತ ಆಹಾರ ಸೇವನೆ ಮಾಡುವ ನಮ್ಮ ಮಕ್ಕಳಿಗೆ ನಾವು ಎಂಥಹ ಆರೋಗ್ಯ ಶಿಕ್ಷಣ ನೀಡಬಹುದು ಎಂದು ಪ್ರಶ್ನಿಸಿದರು. ಡಿಡಿಟಿ ಬಳಕೆ ನಂತರ ಜನ ಅನಾರೋಗಕ್ಕೀಡಾಗುತ್ತಿರುವುದನ್ನು ಕಂಡು ಅದನ್ನು ನಿಷೇಧಿಸಿದ ಸರ್ಕಾರ ಗೋಡಂಬಿ ಬೆಳೆಗೆ ಉತ್ತೇಜನಕೊಡುವ ದೃಷ್ಟಿಯಿಂದ ಎಂಡೋಸಲ್ಫಾನ್ ಸಿಂಪರಣೆಗೆ ಅನುಮತಿ ನೀಡಿತು. ಅದರಿಂದ ಎಂಥ ಅನಾಹುತವಾಯಿತು; ಎಷ್ಟು ಜನ ಜೀವಂತ ಶವವಾಗಿ ನರಳುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಎಂದರು.

ಪೋಷಕಾಂಶರಹಿತ ಆಹಾರ ಸೇವನೆಯಿಂದ ಮುಂಬೈಯಲ್ಲಿ ಶೇ 3 ರಿಂದ 5 ರಷ್ಟು ಜನ ಸಕ್ಕರೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ನಮ್ಮ ಸರ್ಕಾರ ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಒತ್ತು ನೀಡುತ್ತದೆ. ಆದರೆ ಅದಕ್ಕೆ ಬದಲು ಸಾವಯವ ಕೃಷಿಯನ್ನೇ ನೆಚ್ಚಿಕೊಂಡಿರುವ ಕ್ಯೂಬಾ ದೇಶವನ್ನು ನಾವೇಕೆ ಮಾದರಿಯನ್ನಾಗಿಸಿಕೊಳ್ಳಬಾರದು? ಎಂದರು.

ಹಸಿರು ಮನೆಗಳ ಹೆಚ್ಚಳದಿಂದ ಪರಿಸರವೇ ಹಾಳಾಗುತ್ತದೆ. ಅದರ ಬಳಕೆ ಕಡಿಮೆಯಾಗದಿದ್ದರೆ ಭವಿಷ್ಯದಲ್ಲಿ ಮಾನವರು ವಿವಿಧ ರೋಗಗಳಿಂದ ಪ್ರಾಣ ಬಿಡುವಂಥ ಸ್ಥಿತಿ ಎದುರಾದರೂ ಅಚ್ಚರಿಪಡಬೇಕಿಲ್ಲ ಎಂದು ಡಾ.ಸಂಜೀವ ಪರೋಕ್ಷ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ಕೃಷಿ ಬಜೆಟ್ ಕುರಿತು ಮಾತನಾಡಿದ ಅವರು, ಸಾವಯವ ಕೃಷಿಗೆ ಅಧಿಕ ಕೊಡುಗೆ ಪ್ರಕಟವಾಗಿದೆ. ಆದರೆ ಬಿಡುಗಡೆಯಾದ ಅನುದಾನ ನಿರೀಕ್ಷಿತ ರೀತಿಯಲ್ಲಿ ಬಳಕೆಯಾಗದಿದ್ದರೆ ಪ್ರಯೋನವಿಲ್ಲದೆ ಅದೂ ಒಂದು ‘ದುಡ್ಡಿನ ದಂಧೆ’ಯಾಗುತ್ತದೆ ಎಂದು ಹೇಳಿದರು. ಸಮ್ಮೇಳನಾಧ್ಯಕ್ಷ ಡಾ.ಬಸವರಾಜ ಸಬರದ, ಮಾಜಿ ಸಂಸದ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕರಾದ ಕೆ.ಶರಣಪ್ಪ, ಹಸನಸಾಬ ದೋಟಿಹಾಳ, ಪತ್ರಕರ್ತ ಗಂಗಾಧರ ಕುಷ್ಟಗಿ. ರೈತ ಮುಖಂಡ ಹನುಗೌಡ ಬೆಳಕುರ್ಕಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.