ಶನಿವಾರ, ಮೇ 8, 2021
25 °C

ರಾಸಾಯನಿಕ ಮುಕ್ತ ದಾಕ್ಷಿ

-ದೇವರಾಜ್ ಮ್ಯಾದನೇರಿ ಹೊನಗಡ್ಡಿ Updated:

ಅಕ್ಷರ ಗಾತ್ರ : | |

ರಾಸಾಯನಿಕ ಬಳಸದೇ ಮನೆಯ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ದ್ರಾಕ್ಷಿ ಬೆಳೆಗೆ ಬಳಸಿ ಯಶ ಕಂಡಿದ್ದಾರೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸೋಮಸಾಗರದ ಶೇಖರಪ್ಪ ಸೋಮನಾಳ.

ಸತತ ಪ್ರಯತ್ನ ಮತ್ತು ಪ್ರಯೋಗಶೀಲತೆಯ ಮೂಲಕ 2.5 ಎಕರೆಯಲ್ಲಿ ದ್ರಾಕ್ಷಿ ಬೆಳೆದು ವರ್ಷಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಇವರು.ತೋಟಗಾರಿಕೆ ಇಲಾಖೆಯ ಸಲಹೆಯೊಂದಿಗೆ ಥಾಮ್ಸನ್ ನಂ 1 ತಳಿಯನ್ನು ನಾಟಿ ಮಾಡಿ ಯಶ ಪಡೆದಿರುವ ಇವರು, ದ್ರಾಕ್ಷಿಯನ್ನು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಗಂಗಾವತಿ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಮಾರಾಟ ಮಾಡುತ್ತಾರೆ.ನಾಟಿ ವಿಧಾನ

`ಸಸಿನೆಟ್ಟು ಮೇಲೆ ಅದು ದೊಡ್ಡದಾಗುವವರೆಗೆ ಬಿಡಬೇಕು. ಮುಂದಿನ ವರ್ಷದಲ್ಲಿ 2 ಬಾರಿ ಕಟಾವು ಮಾಡಬೇಕು. ದ್ರಾಕ್ಷಿ ಬಳ್ಳಿ ಹಣ್ಣು ಬಿಡುವ ವೇಳೆ 10 ರಿಂದ 15 ದಿನಕ್ಕೊಮ್ಮೆ ಚಾಟ್ನಿ ಸಿಂಪರಣೆ ಮಾಡಬೇಕು.

ಅಕ್ಟೋಬರ್‌ನಲ್ಲಿ ದ್ರಾಕ್ಷಿ ಹಸಿರು ಬಣ್ಣಕ್ಕೆ ಬರುತ್ತದೆ. ಅದಾದ ನಂತರ 120 ದಿನಗಳಲ್ಲಿ ಹಣ್ಣು ಕಟಾವು ಮಾಡುವ ಹಂತಕ್ಕೆ ಬರುತ್ತದೆ ಎಂದು ತಮ್ಮ ಯಶಸ್ವಿನ ಗುಟ್ಟು ಹೇಳುತ್ತಾರೆ ಶೇಖರಪ್ಪ.

`ಒಂದು ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 5 ಅಡಿ ಅಂತರ ಇರಬೇಕು. ಪೆಂಡಾಲ್ ಪದ್ಧತಿ ಅಥವಾ ಹ್ಯಾಂಗಿಂಗ್ ರೀತಿಯಲ್ಲಿ ಬೆಳೆಯಬಹುದು.

ಹ್ಯಾಂಗಿಂಗ್ ವ್ಯವಸ್ಥೆಯಲ್ಲಿ ಬೆಳೆದರೆ ದ್ರಾಕ್ಷಿ  ಹೆಚ್ಚು ಹಾಳಾಗದು. ಇದರಿಂದ ಕೆಲಸವೂ ಸರಳ. ತೋಟಕ್ಕೆ ಗೊಬ್ಬರ ಸುಲಭವಾಗಿ ಹಾಕಬಹುದು ಎನ್ನುತ್ತಾರೆ ಅವರು. ಸಂಪರ್ಕಕ್ಕೆ 9880974520.

-ದೇವರಾಜ್ ಮ್ಯಾದನೇರಿ ಹೊನಗಡ್ಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.