ನವದೆಹಲಿ (ಪಿಟಿಐ): ಚಾರಿತ್ರಿಕ 163 ವರ್ಷಗಳ ಸೇವೆ ಸಲ್ಲಿಸಿದ 'ಟೆಲಿಗ್ರಾಂ' ಭಾನುವಾರ ಮಧ್ಯರಾತ್ರಿ ತನ್ನ ಕೊನೆಯ ಸಂದೇಶವನ್ನು ರಾಹುಲ್ ಗಾಂಧಿ ಅವರಿಗೆ ರವಾನಿಸುವುದರೊಂದಿಗೆ ಇತಿಹಾಸದ ಗರ್ಭವನ್ನು ಸೇರಿತು.

ಟೆಲಿಗಾಂ ಕೌಂಟರ್ ರಾತ್ರಿ 11.45ಕ್ಕೆ ಮುಚ್ಚಿತು. ಇದಕ್ಕೆ ಮುನ್ನ ಜನಪಥದ ಸೆಂಟ್ರಲ್ ಟೆಲಿಗ್ರಾಫ್ ಕಚೇರಿಯಲ್ಲಿ (ಸಿಟಿಒ) ಅಶ್ವನಿ ಮಿಶ್ರಾ ಎಂಬವರು ರಾಹುಲ್ ಗಾಂಧಿ ಮತ್ತು ಡಿಡಿ ನ್ಯೂಸ್ ನ ಎಸ್.ಎಂ, ಖಾನ್ ಅವರಿಗೆ ಸಂದೇಶ ಕಳುಹಿಸಿದರು. ಈ ಸಂದೇಶವೇ ರಾಜಧಾನಿಯಿಂದ ಕಳುಹಿಸಿದ ಕಟ್ಟ ಕಡೆಯ ಟೆಲಿಗ್ರಾಂ ಸಂದೇಶವಾಯಿತು.

ಕಟ್ಟ ಕಡೆಯ ದಿನ ಟೆಲಿಗ್ರಾಂ ಮೂಲಕ 68,837 ರೂಪಾಯಿಗಳ ಆದಾಯ ಸಂಗ್ರಹವಾಯಿತು. ಕಡೆದಿನ ಇಷ್ಟೊಂದು ಪ್ರಮಾಣದ ಆದಾಯ ಬಂತೆನ್ನುವುದು ಉತ್ತಮ ಸುದ್ದಿಯಾದರೆ, ಭಾರತೀಯ ತಲೆಮಾರುಗಳಿಗೆ ಇದರೊಂದಿಗೆ ಟೆಲಿಗ್ರಾಂ ಸೇವೆ ಕೊನೆಯುಸಿರು ಎಳೆಯಿತು ಎಂಬುದು ಕೆಟ್ಟ ಸುದ್ದಿಯಾಗಿ ಉಳಿದುಕೊಂಡಿತು.

ನವದೆಹಲಿಯಲ್ಲಿ ಭಾನುವಾರ ನೇರವಾಗಿ 1,329 ಟೆಲಿಗ್ರಾಂಗಳಿಗಾಗಿ ಮತ್ತು ದೂರವಾಣಿ ಮೂಲಕ ಬಂದ 91 ಬುಕಿಂಗ್ ಗಳಿಗಾಗಿ ಕಂಪ್ಯೂಟರ್ ಮೂಲಕ 2197 ಬಿಲ್ ತಯಾರಿಸಲಾಯಿತು ಎಂದು ಹಿರಿಯ ಟೆಲಿಗ್ರಾಫ್ ಅಧಿಕಾರಿಯೊಬ್ಬರು ತಿಳಿಸಿದರು.

ಭಾರಿ ಸಂಖ್ಯೆಯಲ್ಲಿ ಹಲವಾರು ಮಂದಿ ಅದರಲ್ಲೂ ಹೆಚ್ಚಿನ ಮಂದಿ ಯುವಕ - ಯುವತಿಯರು ಬಹುತೇಕ ಇದೇ ಮೊದಲನೇ ಸಲ ಭಾನುವಾರ ಸಿಟಿಓಗೆ ದೌಡಾಯಿಸಿ ಟೆಲಿಗ್ರಾಂ ಫಾರಂ ಪಡೆದುಕೊಂಡು ಸಂದೇಶಗಳನ್ನು ರವಾನಿಸಿದರು. ಟೆಲಿಗ್ರಾಫ್ ಕಚೇರಿಗೆ ಕಾಲಿಡುವುದನ್ನೂ ಮರೆತಿದ್ದ ಹಲವರು ನಾಲ್ಕು ಟೆಲಿಗ್ರಾಫ್ ಕೇಂದ್ರಗಳಿಗೆ ಬಂದು ತಮ್ಮ ಆತ್ಮೀಯರಿಗೆ ಸಂದೇಶ ರವಾನಿಸಿದರು.

1850ರಲ್ಲಿ ಕೋಲ್ಕತ್ತ (ಆಗಿನ ಕಲ್ಕತ್ತ) ಮತ್ತು ಡೈಮಂಡ್ ಹಾರ್ಬರ್ ಮಧ್ಯೆ ಪ್ರಾಯೋಗಿಕವಾಗಿ ಆರಂಭವಾಗಿದ್ದ ಟೆಲಿಗ್ರಾಂ ಸೇವೆ, ಮರುವರ್ಷ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಬಳಕೆಗಾಗಿ ಅಧಿಕೃತವಾಗಿ ಆರಂಭವಾಗಿತ್ತು. 1854ರಲ್ಲಿ ಈ ಸೇವೆಯನ್ನು ಸಾರ್ವಜನಿಕರಿಗೆ ಲಭಿಸುವಂತೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.