ಮಂಗಳವಾರ, ಮಾರ್ಚ್ 2, 2021
23 °C

ರಿಜ್ವಾನ್‌ ಬಳಿ ವಾಹನವೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಜ್ವಾನ್‌ ಬಳಿ ವಾಹನವೇ ಇಲ್ಲ!

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರೂ ಆಗಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರ ಕುಟುಂಬ ಸ್ವಂತ ವಾಹನವನ್ನೇ ಹೊಂದಿಲ್ಲ.ಲೋಕಸಭಾ ಚುನಾವಣೆಗೆ ಗುರು­ವಾರ ಸಲ್ಲಿಸಿರುವ ನಾಮಪತ್ರದ ಜೊತೆಗೆ ನೀಡಿರುವ ಪ್ರಮಾಣ ಪತ್ರ­ದಲ್ಲಿ ರಿಜ್ವಾನ್‌ ಈ ಮಾಹಿತಿ ಒದ­ಗಿ­ಸಿದ್ದಾರೆ. ಅವರಾಗಲೀ, ಪತ್ನಿ ನಜೀಹಾ ಬಾನು ಅವರಾಗಲೀ ಯಾರಿಂದಲೂ ಸಾಲ ಪಡೆದಿಲ್ಲ, ಯಾರಿಗೂ ಸಾಲ ಕೊಟ್ಟಿಲ್ಲ ಎಂಬ ಮಾಹಿತಿಯೂ ಪ್ರಮಾಣ ಪತ್ರದಲ್ಲಿದೆ.ಬ್ಯಾಂಕ್‌ ಖಾತೆಗಳಲ್ಲೂ ಹಣ ಇಟ್ಟಿಲ್ಲ. ಸರ್ಕಾರಿ ಅಥವಾ ಖಾಸಗಿ ಸಂಸ್ಥೆ­ಗಳಲ್ಲಿ ಹೂಡಿಕೆಯನ್ನೂ ಮಾಡಿಲ್ಲ. ಅಭ್ಯರ್ಥಿ ಬಳಿ ₨ 46 ಲಕ್ಷ ಮತ್ತು ಅವರ ಪತ್ನಿ ಬಳಿ ₨ 6 ಲಕ್ಷ ನಗದು ಇದೆ. ರಿಜ್ವಾನ್ ₨ 2.14 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ನಜೀಹಾ ಬಳಿ ₨ 1 ಕೋಟಿ ಬೆಲೆಬಾಳುವ ಆಸ್ತಿ ಇದೆ.ಅಭ್ಯರ್ಥಿ ವಿರುದ್ಧ ಮೈಸೂರಿನ ನರಸಿಂಹರಾಜ ಪೊಲೀಸ್‌ ಠಾಣೆಯಲ್ಲಿ 2008ರಲ್ಲಿ ದಾಖಲಾಗಿರುವ ಒಂದು ಮೊಕದ್ದಮೆ ವಿಚಾರಣೆಗೆ ಬಾಕಿ ಇದೆ. ರಾಜಧಾನಿಯ ವಿಧಾನಸೌಧ  ಪೊಲೀಸ್‌ ಠಾಣೆಯಲ್ಲಿ ದಾಖಲಾ­ಗಿರುವ ಒಂದು ಮೊಕದ್ದಮೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.