ಭಾನುವಾರ, ಮಾರ್ಚ್ 26, 2023
31 °C

ರಿಯಲ್‌ ಎಸ್ಟೇಟ್‌ ಉದ್ಯಮಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಲ್‌ ಎಸ್ಟೇಟ್‌ ಉದ್ಯಮಿ ಸೆರೆ

ಬೆಂಗಳೂರು: ನಿವೇಶನ ನೀಡು ವುದಾಗಿ ಹೇಳಿ ಮಾಜಿ ಸೈನಿಕ ರಿಂದ ಹಣ ಪಡೆದು ವಂಚಿ ಸಿದ ಆರೋಪದಡಿ ‘ದುರ್ಗಾ ಪ್ರಾಪರ್ಟಿಸ್‌ ಲ್ಯಾಂಡ್‌ ಡೆವಲಪರ್ಸ್‌ ಅಂಡ್‌ ಪ್ರಮೋಟರ್ಸ್‌ ಸಂಸ್ಥೆ’ ಮಾಲೀಕ ಶ್ರೀನಿವಾಸ್‌ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.



‘ನಿವೃತ್ತ ಸೈನಿಕರು ನೀಡಿದ ದೂರಿನ ಮೇರೆಗೆ ಸಹಕಾರನಗರದಲ್ಲಿ ವಾಸವಿದ್ದ ಆರೋಪಿ ಶ್ರೀನಿವಾಸ್‌ಗೌಡನನ್ನು ಬಂಧಿ ಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಬಾಗಲೂರು ಪೊಲೀಸರು ತಿಳಿಸಿದರು.



‘ಸೈನಿಕ್‌ ವೆಲ್‌ಫೇರ್‌್ ಆರ್ಗನೈ ಜೇಷನ್‌ ಇಂಡಿಯಾ ಕಂಪೆನಿಯು ನಿವೇ ಶನ ಹಾಗೂ ಮನೆ ಕೊಡಿಸುವುದಾಗಿ ಹೇಳಿ  ನಿವೃತ್ತ ಸೈನಿಕರಿಂದ ₹1.9 ಕೋಟಿ ಪಡೆದು, ಅದೇ ಹಣವನ್ನು ಶ್ರೀನಿವಾಸ್‌ ಗೌಡನಿಗೆ  ನೀಡಿತ್ತು’ ಎಂದು ಮಾಹಿತಿ ನೀಡಿದರು.



‘ಹಣ ಪಡೆದಿದ್ದ ಆರೋಪಿಯು ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ದುರ್ಗಾ ನಾರ್ತ್‌ ಸಿಟಿ ಫೇಸ್‌–1 ಬಡಾವಣೆ ನಿರ್ಮಿಸಿ ಅಲ್ಲಿಯೇ ನಿವೇಶನ ನೀಡುವುದಾಗಿ ಹೇಳಿದ್ದ. ಆದರೆ ಕೆಲ ತಿಂಗಳ ಬಳಿಕ ನಿವೇಶನ ನೀಡಲು ಶ್ರೀನಿವಾಸ್‌ಗೌಡ ನಿರಾಕರಿಸಿದ್ದ’ ಎಂದು    ಪೊಲೀಸರು ವಿವರಿಸಿದರು.



ಸುನೀಲ್‌ಕುಮಾರ್‌ ಸಾಹು ಎಂಬು ವರಿಂದಲೂ ₹30 ಲಕ್ಷ ಪಡೆದು ಆರೋ ಪಿಯು ವಂಚಿಸಿದ್ದ ಬಗ್ಗೆ  ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.