ಭಾನುವಾರ, ಮೇ 16, 2021
22 °C

ರಿಸ್ಯಾಟ್ 1 ಯಶಸ್ವಿ ಉಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಹರಿಕೋಟಾ (ಪಿಟಿಐ): ಭಾರತದ ಮಹತ್ವಾಕಾಂಕ್ಷೆಯ ಎಲ್ಲಾ ಹವಾಮಾನದಲ್ಲೂ ರಡಾರ್ ಚಿತ್ರಗಳನ್ನು ತೆಗೆಯಬಲ್ಲ ದೇಶೀಯ ನಿರ್ಮಿತ  ರಿಸ್ಯಾಟ್ 1 ಉಪಗ್ರಹವನ್ನು ಯಶಸ್ವಿಯಾಗಿ ಗುರುವಾರ ಬೆಳಿಗ್ಗೆ ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡು ಕಕ್ಷೆ ಸೇರಿದೆ.

ಇದು ದೇಶದ ಮೊದಲ ಮೈಕ್ರೋವೇವ್ ದೂರ ಸಂವೇದಿ ಉಪಗ್ರಹವಾಗಿದೆ.1858 ಕೆಜಿ ತೂಕದ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ಬಾಹ್ಯಾಕಾಶ ನೌಕೆಯು ಮುಂಜಾನೆ 5.47ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿತು.ಕಳೆದ 10 ವರ್ಷಗಳಿಂದ ಇಸ್ರೊ ಸಾಕಷ್ಟು ಶ್ರಮಪಟ್ಟು ತಯಾರಿಸಿದ್ದ ರಿಸ್ಯಾಟ್ 1 ಉಪಗ್ರಹ ದೇಶದ ಬಾಹ್ಯಾಕಾಶ ಜಗತ್ತಿನ ಹೆಗ್ಗುರುತು ಎನಿಸಿದೆ. ಇದು ಹಗಲು-ರಾತ್ರಿ ಎನ್ನದೆ ಮೋಡ ಮುಸುಕಿದ ವಾತಾವರಣದಲ್ಲೂ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ತೆಗೆಯಬಲ್ಲದ್ದಾಗಿದ್ದು, ಇಲ್ಲಿಯವರೆಗೂ ಈ ತರಹದ ಚಿತ್ರಗಳಿಗಾಗಿ ಕೆನಡಾದ ಉಪಗ್ರಹದ ಮೇಲೆ ಭಾರತ ಅವಲಂಬನೆಯಾಗಿತ್ತು.ಇದರಿಂದ ಕೃಷಿಗೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಹಕಾರಿಯಾಗಲಿದೆ.ಇದನ್ನು ಅತ್ಯಂತ ಯಶಸ್ವಿ ಉಡಾವಣೆ ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ಬಣ್ಣಿಸಿದ್ದಾರೆ.

ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ಉಪಗ್ರಹದ ಯಶಸ್ಸಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.