ನಮ್ಮ ರಾಷ್ಟ್ರದಲ್ಲಿ ಮಹಿಳೆಯರದು ಶ್ರಮ ಜೀವನ. ಬಹುತೇಕರಿಗೆ ಮನೆಯ ಹೊರಗಿನ ಕೆಲಸಗಳ ಜತೆಗೆ ಮನೆಯೊಳಗಿನ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾದ ಅನಿವಾರ್ಯತೆ. ಇಂತಹ ಮಹಿಳೆಯರ ಶ್ರಮವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲೆಂದು ರೂಪಿತವಾದ ಸಾಧನ ದೋಸೆ, ಇಡ್ಲಿ ಹಿಟ್ಟುಗಳನ್ನು ರುಬ್ಬುವ ವೆಟ್ ಗ್ರೈಂಡರ್. ಇದನ್ನು ಆವಿಷ್ಕರಿಸಿದ ಶ್ರೇಯ ಕೊಯಮತ್ತೂರಿನ ಸಭಾಪತಿ ಎಂಬುವವರಿಗೆ ಸಲ್ಲಬೇಕು.

ಸಾಮಾನ್ಯವಾಗಿ ಈ ಗ್ರೈಂಡರ್ಗಳಿಗೆ ಗ್ರಾನೈಟ್ನ ರುಬ್ಬು ಕಲ್ಲು ಅಳವಡಿಸಲಾಗಿರುತ್ತದೆ. ಅದರ ಅತ್ಯಂತ ಕಡಿಮೆ ಸವಕಳಿ, ಘರ್ಷಣೆಯಾದರೂ ಸಣ್ಣ ಹುಡಿಗಳಾಗದ ಅದರ ಕಠಿಣತೆ ಹಾಗೂ ನಿಂಬೆ ರಸ, ಹುಳಿಯಂತಹ ಆಮ್ಲೀಯ ದ್ರವಗಳ ಸ್ಪರ್ಶವಾದರೂ ಕುಂದದೆ ಇರುವ ಅದರ ಗುಣ ಇದಕ್ಕೆ ಕಾರಣ.

ಕೆಲವು ಸಂದರ್ಭಗಳಲ್ಲಿ ಗ್ರಾನೈಟ್ ಹೊರತುಪಡಿಸಿ ಬೇರೆ ಮಾದರಿಯ ಕಲ್ಲುಗಳನ್ನು ರುಬ್ಬುವ ಕಲ್ಲಾಗಿ ಬಳಸುವುದೂ ಉಂಟು. ಕಚ್ಚಾವಸ್ತುವಾದ ಗ್ರಾನೈಟ್, ಕೊಯಮತ್ತೂರಿನಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಬಹುಪಾಲು ವೆಟ್ ಗ್ರೈಂಡರ್ ತಯಾರಿಕಾ ಘಟಕಗಳು ಈ ನಗರದಲ್ಲೇ ನೆಲೆ ಕಂಡಿವೆ.

7 ಉತ್ಪನ್ನ- 3 ಸೇವೆಗಳ ಪರೀಕ್ಷೆ

ಇದು ಮಾರುಕಟ್ಟೆ ಯುಗ. ಹಣ ಕೊಟ್ಟರೆ ಬೇಕಾದ್ದನ್ನು ಕೊಳ್ಳಬಹುದು. ಆದರೆ ಹೆಚ್ಚು ಹಣ ಕೊಟ್ಟ ಮಾತ್ರಕ್ಕೆ ಗುಣಮಟ್ಟವೂ ಖಾತ್ರಿ ಎನ್ನಲಾಗದು. ಯಾವುದೇ ಉತ್ಪನ್ನದ ಬಗ್ಗೆ ಹಲವಾರು ಮಾಹಿತಿಗಳು ಪ್ರಚಾರದಲ್ಲಿದ್ದರೂ ಗ್ರಾಹಕರಿಗೆ ಗೊಂದಲಗಳೂ ಸಾಕಷ್ಟಿವೆ.

ಭಾರತೀಯ ಗ್ರಾಹಕರ ಸಂಘಟನಾ ಬಳಗದ ಸಾರ್ವಜನಿಕ ದತ್ತಿ ಟ್ರಸ್ಟ್ ಆದ `ಕಾನ್ಸರ್ಟ್~ (ಎ ಸೆಂಟರ್ ಫಾರ್ ಕನ್ಸೂಮರ್ ಎಜುಕೇಷನ್, ರೀಸರ್ಚ್, ಟೀಚಿಂಗ್, ಟ್ರೇನಿಂಗ್ ಅಂಡ್ ಟೆಸ್ಟಿಂಗ್) ಗ್ರಾಹಕರ ಗೊಂದಲ ನಿವಾರಿಸಿ, ಅವರ ಅರಿವು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ.

ಸಂಸ್ಥೆಯು ದಕ್ಷಿಣ ಭಾರತದಲ್ಲಿ ಇದೇ ಮೊತ್ತಮೊದಲ ಬಾರಿಗೆ ಏಳು ಉತ್ಪನ್ನಗಳ ಹಾಗೂ ಮೂರು ಸೇವೆಗಳ ಸಮೀಕ್ಷೆ ನಡೆಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಅನುದಾನದ ನೆರವಿನಿಂದ ಕೈಗೊಂಡ ಸಮೀಕ್ಷೆಯು ಉತ್ಪನ್ನಗಳ ಪ್ರಯೋಗಾಲಯ ಪರೀಕ್ಷೆಯನ್ನೂ ಒಳಗೊಂಡಿದೆ.

ಅಡುಗೆ ಎಣ್ಣೆ, ಹಾಲು, ನೋವು ನಿವಾರಕ ಕ್ರೀಮ್, ಸೊಳ್ಳೆ ನಿವಾರಕ ಮ್ಯಾಟ್ ಮತ್ತು ಕಾಯಿಲ್, ವಾಟರ್ ಪ್ಯೂರಿಫೈಯರ್, ಹಲ್ಲುಜ್ಜುವ ಪೇಸ್ಟ್ ಹಾಗೂ ದೋಸೆ/ ಇಡ್ಲಿ ಹಿಟ್ಟು ರುಬ್ಬುವ ಗ್ರೈಂಡರ್ ಇವು ಪರೀಕ್ಷೆಗೊಂಡ ಏಳು ಉತ್ಪನ್ನಗಳು. ಜೀವ ವಿಮೆ, ಬ್ಯಾಂಕಿಂಗ್ ಮತ್ತು ಮೊಬೈಲ್ ಸಮೀಕ್ಷೆಗೊಂಡ ಸೇವಾ ಕ್ಷೇತ್ರಗಳು.

ಸಮೀಕ್ಷೆಯಿಂದ ವ್ಯಕ್ತವಾದ ಫಲಿತಾಂಶಗಳನ್ನು ಜನರ ಮುಂದಿಡುತ್ತಿದ್ದೇವೆ. ಈ ಮಾಹಿತಿಗಳು ಒಬ್ಬರಿಂದ ಇನ್ನೊಬ್ಬರಿಗೆ ತಿಳಿದು ತಾವು ಬಳಸುವ ವಸ್ತುಗಳ ಬಗ್ಗೆ ಗ್ರಾಹಕರಲ್ಲಿ ತಿಳಿವಳಿಕೆ ಹೆಚ್ಚಾಗಬೇಕೆಂಬುದೇ ಇದರ ಉದ್ದೇಶ.

ಈ ಸಮೀಕ್ಷಾ ಸರಣಿಯಲ್ಲಿ ಈ ಮುನ್ನ ಅಡುಗೆ ಎಣ್ಣೆ ಹಾಗೂ ಹಾಲಿನ ಕುರಿತಾದ ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದೆವು. ಇದೀಗ ಅಡುಗೆ ಮನೆಯ ಉಪಕರಣವಾದ ವೆಟ್ ಗ್ರೈಂಡರ್ ಬಗೆಗಿನ ಸಮೀಕ್ಷೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಇಂದು ಮಾರುಕಟ್ಟೆಯಲ್ಲಿ ವೆಟ್ ಗ್ರೈಂಡರ್ಗಳಿಗೆ ಸಂಸ್ಕರಿತ ರೆಡಿಮೇಡ್ ಹಿಟ್ಟು ಪೈಪೋಟಿ ಒಡ್ಡಿದೆ. ಆದರೆ ರೆಡಿಮೇಡ್ ಹಿಟ್ಟುಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಇತ್ತೀಚೆಗೆ ಕಾನ್ಸರ್ಟ್ ಸಂಸ್ಥೆಯು ಚೆನ್ನೈನಲ್ಲಿ 20 ಸ್ಥಳೀಯ ರೆಡಿಮೇಡ್ ದೋಸೆ/ ಇಡ್ಲಿ ಹಿಟ್ಟುಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾಗ ಶೇ 55ರಷ್ಟು ಬ್ರ್ಯಾಂಡ್ಗಳು ಕಲಬೆರಕೆಯಾಗಿರುವುದು ಪತ್ತೆಯಾಯಿತು.

ಇನ್ನು ಕೆಲವರು ಹಿಟ್ಟು ರುಬ್ಬಲು ಮಿಕ್ಸಿಯನ್ನೇ ಉಪಯೋಗಿಸುತ್ತಾರೆ. ಆದರೆ ಇದರಿಂದ ರುಬ್ಬಿದ ಹಿಟ್ಟಿನ ಗುಣಮಟ್ಟ ವೆಟ್ ಗ್ರೈಂಡರ್ನಲ್ಲಿ ರುಬ್ಬಿದ ಹಿಟ್ಟಿಗೆ ಹೋಲಿಸಿದರೆ ಕಳಪೆ ಎಂಬುದು ಎಲ್ಲ ಗೃಹಿಣಿಯರ ಅನುಭವವಾಗಿದೆ.

ರುಬ್ಬುವ ಯಂತ್ರಗಳಲ್ಲಿ ಫ್ಲೋರ್, ಟೇಬಲ್ ಟಾಪ್ ಮಾದರಿಗಳಿದ್ದು ಇದರಲ್ಲಿ ಟಿಲ್ಟಿಂಗ್, ನಾನ್ ಟಿಲ್ಟಿಂಗ್ ಶ್ರೇಣಿಗಳಿವೆ. ಕುಟುಂಬದ ಗಾತ್ರ, ವಾಸವಿರುವ ಸ್ಥಳ ಇತ್ಯಾದಿಗಳನ್ನು ಗಮನದಲ್ಲಿ ಇರಿಸಿಕೊಂಡು ಮಾದರಿಯ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಹೆಚ್ಚು ಹಿಟ್ಟು ರುಬ್ಬುವ ಅಗತ್ಯವಿದ್ದರೆ ಫ್ಲೋರ್ ನಮೂನೆ ಕೊಳ್ಳುವುದು ಸಾಮಾನ್ಯ. ಹಾಗೆಯೇ ಇಡಲು ಕಡಿಮೆ ಜಾಗ ಸಾಕಾಗುವುದರಿಂದ ನಗರ, ಪಟ್ಟಣ ತಾಣಗಳಲ್ಲಿ ಟೇಬಲ್ ಟಾಪ್ ಮೊರೆಹೋಗಲಾಗುತ್ತದೆ; ಚಿಕ್ಕ ಕುಟುಂಬದ ಅಗತ್ಯಕ್ಕೆ ಇದು ಸೂಕ್ತ; ಬೆನ್ನು, ಸೊಂಟ ಇತ್ಯಾದಿ ನೋವುಗಳಿದ್ದು ಬಾಗುವಿಕೆ ಯಾತನಾದಾಯಕ ಅನ್ನಿಸುವವರಿಗೂ ಟೇಬಲ್ ಟಾಪ್ ಅನುಕೂಲಕರ.

ಇಡ್ಲಿ ಮತ್ತು ದೋಸೆ ದಕ್ಷಿಣ ಭಾರತದ ಜನಪ್ರಿಯ ಆಹಾರಗಳಾಗಿದ್ದು, ನಗರ- ಪಟ್ಟಣ ಪ್ರದೇಶಗಳ ಮನೆಗಳಲ್ಲಿ ವೆಟ್ ಗ್ರೈಂಡರ್ ಹೆಚ್ಚೂ ಕಡಿಮೆ ಅವಿಭಾಜ್ಯ ಅಂಗವಾಗಿದೆ. ಇಂತಹ ಅತ್ಯುಪಯುಕ್ತ ಅಡುಗೆ ಮನೆ ಉಪಕರಣದ ತಯಾರಿಕೆ ಸಂಬಂಧ ಭಾರತೀಯ ಮಾನಕ ಬ್ಯೂರೊದ (ಬಿಐಎಸ್) ಮಾನದಂಡ ಇಲ್ಲ ಎನ್ನುವುದು ಕಳವಳಕಾರಿ ವಾಸ್ತವವಾಗಿದೆ.

ಹೀಗಾಗಿ ಪ್ರತಿಯೊಬ್ಬ ತಯಾರಕರೂ ತಮಗೆ ತೋಚಿದ ಪರೀಕ್ಷಾ ವಿಧಾನ ಹಾಗೂ ಗುಣಮಟ್ಟ ಮಾನದಂಡವನ್ನು ಅನುಸರಿಸುತ್ತಿದ್ದಾರೆ.

ಪ್ರಸ್ತುತ ಸಿಎಫ್ಎಲ್ ಬಲ್ಬ್ ತಯಾರಿಕೆಯಿಂದ ಹಿಡಿದು ಹವಾನಿಯಂತ್ರಿತ ಸಾಧನಗಳವರೆಗೆ ಪ್ರತಿಯೊಂದು ಉತ್ಪನ್ನದ ತಯಾರಿಕೆ ವೇಳೆಯೂ ಇಂಧನ ದಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ವೆಟ್ ಗ್ರೈಂಡರ್ಗಳ ತಯಾರಿಕೆಯಲ್ಲಿ ಯಾರೂ ಇದಕ್ಕೆ ಗಮನವನ್ನೇ ನೀಡುತ್ತಿಲ್ಲ.

ಬಿಐಎಸ್, 1975ರಲ್ಲಿ ಒಂದು ಲೀಟರ್ ಸಾಮರ್ಥ್ಯದ ರುಬ್ಬುವ ಯಂತ್ರಗಳಿಗೆ ಮಾನದಂಡ ನಿಗದಿ ಮಾಡಿತ್ತು. ಆನಂತರ, ಅದು ತಿದ್ದುಪಡಿಯಾಗಿಯೇ ಇಲ್ಲ. ಹೀಗಾಗಿ ಕಾನ್ಸರ್ಟ್, ಪರೀಕ್ಷೆ ಕೈಗೊಳ್ಳುವ ಮುನ್ನ ಅಂದಿನ ಬಿಐಎಸ್ ಮಾನದಂಡಗಳನ್ನೇ ಲೆಕ್ಕಾಚಾರ ಹಾಕಿ ಎರಡು ಲೀಟರ್ ಸಾಮರ್ಥ್ಯದ ಗ್ರೈಂಡರ್ಗಳಿಗೆ ಮಾನದಂಡಗಳನ್ನು ನಿಗದಿಪಡಿಸಿತು. ಎಲೆಕ್ಟ್ರಿಕಲ್ ಮೋಟಾರ್, ಕೇಬಲ್, ಬೆಲ್ಟ್, ಡ್ರಮ್ ಮಟೀರಿಯಲ್, ರುಬ್ಬು ಕಲ್ಲು ಇತ್ಯಾದಿಗಳಿಗೆ ಬಿಐಎಸ್ ಪ್ರತ್ಯೇಕವಾಗಿ ನಿಗದಿಗೊಳಿಸಿರುವ ಮಾನದಂಡಗಳನ್ನು ಕಲೆಹಾಕಿ ಪರೀಕ್ಷಾ ಪಟ್ಟಿ ಸಿದ್ಧಪಡಿಸಲಾಗಿತ್ತು.ಉತ್ಪನ್ನ ಪರೀಕ್ಷಾ ಸ್ವರೂಪವನ್ನು, ಪರೀಕ್ಷೆಗೆ ಒಳಪಡಿಸುವ ಮುನ್ನ ತಯಾರಿಕರಿಗೆ ಕಳುಹಿಸಿ ಅವರ ಅಭಿಪ್ರಾಯ, ಸಲಹೆ, ಸೂಚನೆಗಳನ್ನೂ ಆಹ್ವಾನಿಸಲಾಗಿತ್ತು.

ಪ್ರತಿ ವೆಟ್ ಗ್ರೈಂಡರ್ನ್ನು ಅದರ ಆರೋಗ್ಯ ಮತ್ತು ಸುರಕ್ಷೆ, ಗ್ರೈಂಡರ್ ನಿರ್ಮಾಣ ವಿಧಾನ, ಕಾರ್ಯ ನಿರ್ವಹಣಾ ವೈಖರಿ, ಉತ್ಪನ್ನ ಮಾರಾಟ ಮಾಡಿದ ನಂತರ ಕಂಪೆನಿ ಗ್ರಾಹಕರಿಗೆ ಒದಗಿಸುವ ಸೇವೆಯ ಗುಣಮಟ್ಟ, ಈಗಾಗಲೇ ಉತ್ಪನ್ನ ಬಳಸುತ್ತಿರುವವರ ಅನುಭವ ಹಾಗೂ ಗರಿಷ್ಠ ಗ್ರಾಹಕ ಬೆಲೆ ವಿಭಾಗಗಳಡಿ ಪರೀಕ್ಷಿಸಲಾಯಿತು.

ಖರೀದಿದಾರರಿಗೆ ಕಾನ್ಸರ್ಟ್ ಸಲಹೆಗಳು: ತಮ್ಮ ಕುಟುಂಬದ ಗಾತ್ರ ಹಾಗೂ ಜೀವನಶೈಲಿಗೆ ಅನುಗುಣವಾಗಿ ಗ್ರಾಹಕರು ನಮೂನೆ ಆಯ್ದುಕೊಳ್ಳಬೇಕು. ಗ್ರೈಂಡರ್ನ್ನು ಬಿಡಿಭಾಗಗಳು ಶೀಘ್ರ ಕಳಚಲು ಸಾಧ್ಯವಾಗುವಂತೆ ಜೋಡಣೆಯಾಗಿವೆಯೇ, ಬಿಡಿ ಭಾಗಗಳು ಅಧಿಕ ಭಾರವಿಲ್ಲದೆ ನಿರ್ವಹಣೆಗೆ ಸುಲಭವಾಗಿವೆಯೇ ಎಂಬುದನ್ನು ಗಮನಿಸಬೇಕು.

ಗ್ರೈಂಡರ್ಗೆ ಹೈ ಟಾರ್ಕ್ ಇಂಡಕ್ಷನ್ ಮೋಟಾರ್ ಅಳವಡಿಸಲಾಗಿದೆಯೇ ಎಂಬುದನ್ನು ನೋಡಬೇಕು. ಈ ಮೋಟಾರ್ಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಜತೆಗೆ ಯಾವುದೇ ತೊಂದರೆ ನೀಡದೆ ಸರಾಗವಾಗಿ ತಿರುಗುವುದರಿಂದ ದೀರ್ಘ ಬಾಳಿಕೆ ಬರುತ್ತವೆ. ಹೀಗಾಗಿ ವೆಟ್ ಗ್ರೈಂಡರ್ ಖರೀದಿಸುವ ಮುನ್ನ ಈ ಅಂಶದ ಬಗ್ಗೆ ಗ್ರಾಹಕರು ವಿತರಕರ ಬಳಿ ಪ್ರಸ್ತಾಪಿಸಬೇಕು.

ಒಮ್ಮೆ ಲೋಡ್ ಹಾಕಿದರೆ ಗ್ರೈಂಡರ್ ಯಾವುದೇ ಅಡೆತಡೆಯಿಲ್ಲದೆ ಯಾವುದೇ ಮೇಲುಸ್ತವಾಗಿ ಅಗತ್ಯವಿಲ್ಲದೆ ಹಿಟ್ಟನ್ನು ರುಬ್ಬುತ್ತದೆಯೇ ನೋಡಬೇಕು. ಇನ್ನು ಬಹುತೇಕ ಗ್ರೈಂಡರ್ಗಳಿಗೆ ಹಿಟ್ಟು ನಾದುವ ಯಂತ್ರ, ತೆಂಗಿನಕಾಯಿ ತುರಿಯುವ ಸಾಧನ ಇತ್ಯಾದಿ ಹೆಚ್ಚುವರಿ ಉಪಕರಣಗಳನ್ನು ಜೋಡಿಸಲಾಗಿರುತ್ತದೆ. ಇವು ಗ್ರಾಹಕರ ಕುತೂಹಲವನ್ನು ಸೆಳೆಯುತ್ತವಾದರೂ ಅವು ನಿಜವಾಗಿಯೂ ತಮಗೆ ಅಗತ್ಯವೇ ಎಂಬ ಬಗ್ಗೆ ಯೋಚಿಸಬೇಕು.

ಬಳಕೆದಾರರ ಕೈಪಿಡಿಯಲ್ಲಿ ಉಪಕರಣದ, ಬಿಡಿ ಭಾಗಗಳು, ಬಳಕೆ ವೇಳೆ ಅನುಸರಿಸಬೇಕಾದ ಕ್ರಮ ಇತ್ಯಾದಿ ವಿವರ ಮಾಹಿತಿಗಳು ಇರಬೇಕು. ಮುಖ್ಯವಾಗಿ ಈ ಕೈಪಿಡಿಯಲ್ಲಿ ವಾರಂಟಿ ಕಾರ್ಡ್, ನಿಬಂಧನೆಗಳು ಹಾಗೂ ನಿಮ್ಮ ನಗರ/ ಪಟ್ಟಣದಲ್ಲಿರುವ ಅಧಿಕೃತ ಸೇವಾ ಕೇಂದ್ರಗಳ ಪಟ್ಟಿ ಇರಬೇಕು.

(ನಾಳೆಗೆ ಮುಂದುವರಿಯಲಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.