ನವದೆಹಲಿ (ಪಿಟಿಐ): ಚಿನ್ನದ ಧಾರಣೆ ದೇಶದ ಚಿನಿವಾರ ಪೇಟೆಯಲ್ಲಿ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೇರಿ ರೂ. 31 ಸಾವಿರದ ಗಡಿ ದಾಟಿದೆ. ಆ ಮೂಲಕ ಈ ಮೊದಲೇ ಹಣ ಹೂಡಿದ್ದವರಲ್ಲಿ ಸಂತಸವನ್ನೂ, ಆಭರಣ ಖರೀದಿಸಲು ಕಾದುನಿಂತಿರುವ ವನಿತೆಯರಲ್ಲಿ ಬೇಸರವನ್ನೂ ಉಂಟು ಮಾಡಿದೆ.

ಚಿನ್ನದ ಧಾರಣೆ ದೆಹಲಿಯಲ್ಲಿ ಗುರುವಾರ 10 ಗ್ರಾಂಗೆ ರೂ. 290ಏರಿತು. ಅಪರಂಜಿ ರೂ. 31,035ರಲ್ಲೂ, ಸ್ಟಾಂಡರ್ಡ್ ಚಿನ್ನ ರೂ. 30,835ರಲ್ಲೂ ಮಾರಾಟವಾಯಿತು. ಇನ್ನೊಂದೆಡೆ ಬೆಳ್ಳಿಯೂ ರೂ. 1000 ದುಬಾರಿಯಾಗಿ ಕೆ.ಜಿ.ಗೆ 57000ರಲ್ಲಿ ವಹಿವಾಟು ನಡೆಸಿತು. ಬೆಳ್ಳಿ ನಾಣ್ಯಗಳ ಬೆಲೆಯಂತೂ ರೂ. 3000ದಷ್ಟು ಹೆಚ್ಚಿ, 100 ನಾಣ್ಯಗಳು ರೂ. 72,000ರಲ್ಲಿ ಮಾರಾಟವಾದವು.

ಮುಂಬೈ: ವಾಣಿಜ್ಯ ರಾಜಧಾನಿಯಲ್ಲಿಯೂ ಅಪರಂಜಿ ಚಿನ್ನ 10 ಗ್ರಾಂಗೆ ರೂ. 230ರಷ್ಟು ಬೆಲೆ ಹೆಚ್ಚಿಸಿಕೊಂಡು ರೂ. 30,650ರಲ್ಲಿ ಮಾರಾಟವಾಯಿತು. ಸ್ಟಾಂಡರ್ಡ್ ಚಿನ್ನ ರೂ. 235ರಷ್ಟು ಹೆಚ್ಚಳವಾಗಿ ರೂ. 30,515ಕ್ಕೆ ಬಂದಿತು. ಶೇ .999ರಷ್ಟು ಶುದ್ಧ ಬೆಳ್ಳಿ ಕೆ.ಜಿ.ಗೆ 57,510ರಲ್ಲಿ (ರೂ. 1070 ಅಧಿಕ) ಮಾರಾಟವಾಯಿತು.

ಲಂಡನ್ ಪೇಟೆಯಲ್ಲಿಯೂ ಚಿನ್ನ ಗುರುವಾರ ಕಳೆದ 16 ವಾರಗಳಲ್ಲಿಯೇ ಗರಿಷ್ಠ ಮಟ್ಟಕ್ಕೇರಿತ್ತು. ಒಂದು ಔನ್ಸ್ ಚಿನ್ನದಲ್ಲಿ ಇಲ್ಲಿ 30.35 ಅಮೆರಿಕನ್ ಡಾಲರ್ ಬೆಲೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.