ಹಾವೇರಿ: ಪ್ರಸಕ್ತ ಹಣಕಾಸು ವರ್ಷದ ಜಿಲ್ಲಾ ಪಂಚಾಯಿತಿ ಯೋಜನಾ ಕಾರ್ಯಕ್ರಮಗಳ ವಾರ್ಷಿಕ ಅನು ದಾನದ 71.45 ಕೋಟಿ ರೂಪಾಯಿ ಗಳ ಕ್ರಿಯಾಯೋಜನೆಗೆ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿ.ಪಂ. ಸದಸ್ಯರು ಅನುಮೋದನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಜಿ.ಪಂ.ಮುಖ್ಯಲೆಕ್ಕಾಧಿಕಾರಿ ಬಸನಗೌಡ ಅವರು, 2013-14ನೇ ಸಾಲಿನ ಜಿಲ್ಲಾ ಪಂಚಾಯಿತಿ ಕಾರ್ಯ ಕ್ರಮಗಳ (ಲಿಂಕ್ ಡಾಕ್ಯೂಮೆಂಟ್) ವಾರ್ಷಿಕ ಅನುದಾನದ ಕ್ರಿಯಾ ಯೋಜನೆಯನ್ನು ಓದಿ ಸದಸ್ಯರ ಅನುಮೋದನೆಗೆ ಕೋರಿದರು. ಆಗ ಸದ್ಯಸ್ಯರು, ಅದರಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿ ಸರ್ವಾನು ಮತದ ಒಪ್ಪಿಗೆ ಸೂಚಿಸಿದರು.

ಸರ್ಕಾರವು ಪ್ರಸಕ್ತ ಸಾಲಿನ ಯೋಜನಾ ಕಾರ್ಯಕ್ರಮಗಳಿಗೆ ರಾಜ್ಯದ ಪಾಲು ಶೇ 68, ಕೇಂದ್ರದ ಪಾಲು ಶೇ 42 ರಷ್ಟು ಅನುದಾನ ಸೇರಿ ಒಟ್ಟು 156.93 ಕೋಟಿ ರೂಪಾಯಿ ಅನುದಾನ ಒದಗಿಸಿದ್ದು, ಅದರಲ್ಲಿ ಜಿ.ಪಂ.ಗೆ 71.45 ಕೋಟಿ ರೂಪಾಯಿ ಗಳ ಅನುದಾನ ಒದಗಿಸಲಾಗಿದೆ. ಜಿ.ಪಂ. ವ್ಯಾಪ್ತಿಯ 26 ಇಲಾಖೆಗಳು ಸಲ್ಲಿಸಿದ ಪ್ರಸ್ತಾವನೆ 91 ಕಾರ್ಯಕ್ರಮ ಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿಯ 71.45 ಕೋಟಿ ರೂ.ಗಳ ಅನುದಾನದಲ್ಲಿ ಗೌರವಧನ ಸೇರಿ ವೇತನಕ್ಕೆ ರೂ30.47 ಕೋಟಿ (ಶೇ. 43), ಸಾಮಾನ್ಯ ವೆಚ್ಚಗಳಾದ ಊಟ, ಕಚೇರಿ, ದೂರವಾಣಿ, ಇಂಧನ, ವಾಹನ ಬಾಡಿಗೆ, ದುರಸ್ತಿ ವೆಚ್ಚ ಇತ್ಯಾದಿ ಸೇರಿ ರೂ27.94 ಕೋಟಿ (ಶೇ.39), ಕಾಮಗಾರಿಗಳಿಗೆ ರೂ6.27 ಕೋಟಿ , (ಶೇ.9), ಶಾಲಾ ಸಾಮಗ್ರಿ, ಕೃಷಿ ಉಪಕರಣ, ಔಷಧಿ, ಇತ್ಯಾದಿಗಳ ಖರೀದಿಗೆ ರೂ1.06 ಕೋಟಿ .(ಶೇ.1), ಪ್ರಚಾರ, ಪ್ರದರ್ಶನ, ಸಸಿ ನೆಡುವುದು, ಪ್ರಕಟಣೆಗಳು ಸೇರಿ ಕಾರ್ಯಕ್ರಮಗಳಿಗೆ ರೂ86.62 ಲಕ್ಷ (ಶೇ.1), ಫಲಾನು ಭವಿಗಳಿಗೆ ್ಙ4.84 ಕೋಟಿ (ಶೇ.7)ರಷ್ಟು ಅನುದಾನ ನೀಡಲಾಗಿದೆ ಎಂದರು.

ಅನುದಾನ ಹಂಚಿಕೆ:ಪ್ರಸಕ್ತ ಸಾಲಿಗೆ ಯೋಜನೇತರ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು ಜಿ.ಪಂ.ಗೆ ರೂ98.61 ಕೋಟಿ, ತಾ.ಪಂ.ಗೆ ರೂ23.96 ಕೋಟಿ ಅನುದಾನವನ್ನು ವಿಂಗಡನೆ ಮಾಡ ಲಾಗಿದೆ. ಜಿ.ಪಂ.ನ ಅನುದಾನದಲ್ಲಿ ವೇತನಕ್ಕೆ ಶೇ 88 ರಷ್ಟು ಅಂದರೆ ರೂ86.71 ಕೋಟಿ, ವೇತನೇತರ ವೆಚ್ಚಕ್ಕಾಗಿ ಶೇ 12ರಷ್ಟು ಅಂದರೆ, 11.90 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಯೋಜನಾ ಕಾರ್ಯಕ್ರಮಗಳಿಗೆ ನಿಗದಿಯಾದ ರೂ71.45 ಕೋಟಿ ಅನುದಾನವನ್ನು ಜಿ.ಪಂ. ವ್ಯಾಪ್ತಿಯ 26 ಇಲಾಖೆಗಳ ಪೈಕಿ ಶಿಕ್ಷಣಕ್ಕೆ ರೂ31.18 ಕೋಟಿ, ಲೋಕಶಿಕ್ಷಣಕ್ಕೆ ್ಙ 15 ಲಕ್ಷ, ಕ್ರೀಡೆ ಮತ್ತು ಯುವಜನ ಸೇವೆಗೆ ್ಙ 42 ಲಕ್ಷ,

ವೈದ್ಯಕೀಯ ಮತ್ತು ಜನಾರೋಗ್ಯಕ್ಕೆ ರೂ17.19 ಕೋಟಿ, ಆಯುಷ್ಗೆ ರೂ25ಲಕ್ಷ, ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕೆ ರೂ1.33 ಕೋಟಿ, ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ್ಙ 56.43 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ್ಙ 3.20 ಕೋಟಿ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕೆ ರೂ5.53ಕೋಟಿ, ಕೃಷಿಗೆ ರೂ1.72ಕೋಟಿ,

ತೋಟಗಾರಿಕೆಗೆ ರೂ.76.06 ಲಕ್ಷ, ಪಶು ಸಂಗೋ ಪನೆಗೆ ್ಙ66 ಲಕ್ಷ, ಮೀನುಗಾರಿಕೆಗೆ ರೂ28.60 ಲಕ್ಷ, ಅರಣ್ಯಕ್ಕೆ ರೂ.70 ಲಕ್ಷ, ಸಹಕಾರ ್ಙ18.53 ಲಕ್ಷ, ಗ್ರಾಮೀಣಾ ಭಿವೃದ್ಧಿಗೆ ರೂ2.40 ಕೋಟಿ, ಗ್ರಾಮೋದ್ಯಮ ಮತ್ತು ಸಣ್ಣಪುಟ್ಟ ಉದ್ಯಮಕ್ಕೆ ರೂ20.11 ಲಕ್ಷ, ರೇಷ್ಮೆ ಇಲಾಖೆಗೆ ರೂ8ಲಕ್ಷ, ರಸ್ತೆ ಮತ್ತು ಸೇತುವೆಗೆ ರೂ3.75 ಕೋಟಿ,

ಸಚಿವಾಲಯ ಮತ್ತು ಆರ್ಥಿಕ ಸೇವೆಗೆ ರೂ9.80 ಲಕ್ಷ, ಕೈಮಗ್ಗ ಮತ್ತು ಜವಳಿಗೆ ರೂ6.20ಲಕ್ಷ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ರೂ4.05ಲಕ್ಷ , ಕಲೆ ಮತ್ತು ಸಂಸ್ಕೃತಿಗೆ ರೂ7ಲಕ್ಷ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ರೂ21.97 ಲಕ್ಷ , ಕೃಷಿ ಮಾರುಕಟ್ಟೆಗೆ ್ಙ 5ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ್ಙ 33.98 ಲಕ್ಷ ನಿಗದಿ ಮಾಡಲಾಗಿದೆ ಎಂದು ಬಸನಗೌಡರ ಸಭೆಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ಶಂಕ್ರಣ್ಣ ಮಾತನವರ ವಹಿಸಿದ್ದರು. ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಶಾಸಕರಾದ ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿ.ಪಂ. ಸಿಇಓ ಉಮೇಶ ಕುಸುಗಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.