ಸೋಮವಾರ, ಜೂನ್ 21, 2021
20 °C

ರೂ.26,040 ಕೋಟಿಗೆ ತಗ್ಗಿದ ‘ಸಿಎಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ರಫ್ತು ವಹಿವಾಟಿನಲ್ಲಿ ವೃದ್ಧಿ, ಇನ್ನೊಂದೆಡೆ ಚಿನ್ನದ ವಹಿವಾಟು ಮೇಲಿನ ನಿರ್ಬಂಧದಿಂದಾಗಿ ಆಮದು ಚಟುವಟಿಕೆ ತಗ್ಗಿದ್ದರಿಂದ ಪ್ರಸಕ್ತ ಹಣ ಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ದೇಶದ ‘ಚಾಲ್ತಿ ಖಾತೆ ಕೊರತೆ’ (ಸಿಎಡಿ) ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ.ಅಕ್ಟೋಬರ್‌, ಡಿಸೆಂಬರ್‌ ನಡುವಿನ ಅವಧಿಯಲ್ಲಿ ‘ಸಿಎಡಿ’ 420 ಕೋಟಿ ಅಮೆರಿಕನ್‌ ಡಾಲರ್‌ಗೆ (ರೂ.26,040 ಕೋಟಿ), ಅಂದರೆ, ‘ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ’ಯ (ಜಿಡಿಪಿ) ಶೇ 09ರಷ್ಟಕ್ಕೆ ಇಳಿಕೆಯಾಗಿದೆ.ವಾಣಿಜ್ಯ ಸರಕುಗಳ ರಫ್ತು 3ನೇ ತ್ರೈಮಾಸಿಕದಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಮುಖ್ಯವಾಗಿ ಆಮದು ಸುಂಕ ಹೆಚ್ಚಳದ ಕಾರಣ ವಿದೇಶದಿಂದ ಚಿನ್ನ ತರಿಸಿಕೊಳ್ಳುವುದು ಕಡಿಮೆ ಆಗಿದ್ದರಿಂದ ಒಟ್ಟಾರೆ ಆಮದು ಪ್ರಮಾಣದಲ್ಲಿಯೂ ಭಾರಿ ಇಳಿಕೆಯಾಯಿತು.ಈ ಎರಡೂ ಕಾರಣದಿಂದಾಗಿ ‘ಸಿಎಡಿ’ ಗಮನಾರ್ಹ ಇಳಿಕೆಯಾಯಿತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ‘ಸಿಎಡಿ’ 3190 ಕೋಟಿ ಡಾಲರ್‌ಗಳಷ್ಟು (ಈಗಿನ ಲೆಕ್ಕ ದಲ್ಲಿ ರೂ.1,97,780 ಕೋಟಿ) ಅಂದರೆ, ‘ಜಿಡಿಪಿ’ಯ ಶೇ 6.5ರಷ್ಟು ಗರಿಷ್ಠ ಪ್ರಮಾಣದಲ್ಲಿತ್ತು.ಚಿನ್ನದ ಆಮದು ವಿಪರೀತವಾಗಿದ್ದ ರಿಂದ ‘ಸಿಎಡಿ’ ಹೆಚ್ಚುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌, ಆಮದು ಸುಂಕ ಏರಿಕೆ, ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲ ಮತ್ತು ಬಂಗಾರದ ನಾಣ್ಯ ವಹಿವಾಟಿಗೆ ಮಿತಿ ವಿಧಿಸಿದ್ದೂ ಸೇರಿದಂತೆ  ಹಲವು ನಿಯಂತ್ರಣ ಕ್ರಮ ಕೈಗೊಂಡವು. ಇದರ ಪರಿಣಾಮವಾಗಿ ‘ಸಿಎಡಿ’ ಗಣ ನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.