ಸೋಮವಾರ, ಮೇ 16, 2022
30 °C

ರೆಡ್ಡಗೊಲ್ಲವಾರಹಳ್ಳಿ ಸರ್ಕಾರಿ ಶಾಲೆಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಕೊನೆಗೊಂಡ ಬೆಂಗಳೂರು ವಿಭಾಗ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಹನ್ನೊಂದು ತಂಡಗಳಲ್ಲಿ ನಾಲ್ಕು ತಂಡ ಜಯ ಸಾಧಿಸಿವೆ. ವಿಜೇತ ತಂಡಗಳು ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿವೆ.ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿಂಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಂಡವು ಚಿಕ್ಕಬಳ್ಳಾಪುರ ತಂಡವನ್ನು ಪರಾಜಯಗೊಳಿಸಿ ಪ್ರಥಮ ಸ್ಥಾನ ಗಳಿಸಿದೆ.

ಪ್ರೌಢಶಾಲೆ ಬಾಲಕಿಯರ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ರೆಡ್ಡಗೊಲ್ಲವಾರ ಹಳ್ಳಿಯ ಚಿತ್ರಪಿಣಾಕಿನಿ ಸರ್ಕಾರಿ ಪ್ರೌಢಶಾಲೆ ತಂಡ ಕೋಲಾರ ತಂಡಕ್ಕೆ ಸೋಲಿಸಿ ವಿಜಯ ಸಾಧಿಸಿದೆ.ಹಿರಿಯ ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ತುಮಕೂರು ಜಿಲ್ಲೆಯ ಮಧು ಗಿರಿಯ ಜೂಪಿಟರ್ ಪಬ್ಲಿಕ್ ಶಾಲೆ ತಂಡವು ಚಿಕ್ಕಬಳ್ಳಾಪುರ ತಂಡ ಸೋಲಿಸಿ ಪ್ರಥಮ ಸ್ಥಾನ ಗಳಿಸಿದೆ.ಪ್ರೌಢಶಾಲೆ ಬಾಲಕರ ವಿಭಾಗದಲ್ಲಿ ದಾವಣಗೆರೆಯ ಡಾ.ಬಿ.ಎಂ.ಕಾಂಪೊಸಿಟ್ ಶಿಕ್ಷಣ ಸಂಸ್ಥೆ ತಂಡವು ಬೆಂಗಳೂರು ಗ್ರಾಮಾಂತರ ತಂಡ ಸೋಲಿಸಿ ವಿಜಯ ಸಾಧಿಸಿದೆ.ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯ ಸಮಾರೋಪದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಗಳಿಸಿದ ತಂಡಗಳ ಸದಸ್ಯರು ರಾಜ್ಯಮಟ್ಟದ ಪಂದ್ಯಾವಳಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಲೀಗ್ ಪಂದ್ಯಗಳ ಫಲಿತಾಂಶ

ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ಮಧುಗಿರಿ (22 ಅಂಕಗಳು) ವಿರುದ್ಧ ಚಿತ್ರದುರ್ಗ (27 ಅಂಕಗಳು) ಜಯ.ತುಮಕೂರು (10) ವಿರುದ್ಧ ಶಿವಮೊಗ್ಗ (29) ಜಯ. ಕೋಲಾರ (20) ವಿರುದ್ಧ ಬೆಂಗಳೂರು ಗ್ರಾಮಾಂತರ (29) ಜಯ.ಬೆಂಗಳೂರು ಉತ್ತರ (14) ವಿರುದ್ಧ ಚಿಕ್ಕಬಳ್ಳಾಪುರ (41) ಜಯ. ಚಿತ್ರದುರ್ಗ (20) ಮತ್ತು ಬೆಂಗಳೂರು ದಕ್ಷಿಣ (48) ಜಯ.

ಪ್ರೌಢಶಾಲಾ ಬಾಲಕಿಯರ ವಿಭಾಗ

ಚಿತ್ರದುರ್ಗ (30) ವಿರುದ್ಧ ಬೆಂಗಳೂರು ದಕ್ಷಿಣ (43) ಜಯ. ರಾಮನಗರ (20) ವಿರುದ್ಧ ದಾವಣಗೆರೆ (24) ಜಯ.

ತುಮಕೂರು (18) ವಿರುದ್ಧ ಬೆಂಗಳೂರು ಗ್ರಾಮಾಂತರ (30) ಜಯ. ಬೆಂಗಳೂರು ಉತ್ತರ (35) ವಿರುದ್ಧ ಚಿಕ್ಕಬಳ್ಳಾಪುರ (39) ಜಯ. ಬೆಂಗಳೂರು ದಕ್ಷಿಣ (21) ವಿರುದ್ಧ ಶಿವಮೊಗ್ಗ (41) ಜಯ.ಹಿರಿಯ ಪ್ರಾಥಮಿಕ ಬಾಲಕರ ವಿಭಾಗ

ಚಿತ್ರದುರ್ಗ (31) ವಿರುದ್ಧ ತುಮಕೂರು (41) ಜಯ. ದಾವಣಗೆರೆ (38) ವಿರುದ್ಧ ಮಧುಗಿರಿ (46) ಜಯ. ಬೆಂಗಳೂರು ದಕ್ಷಿಣ (41) ವಿರುದ್ಧ ಚಿಕ್ಕಬಳ್ಳಾಪುರ (48) ಜಯ. ಶಿವಮೊಗ್ಗ (29) ವಿರುದ್ಧ ರಾಮನಗರ (62) ಜಯ.

ತುಮಕೂರು (8) ವಿರುದ್ಧ ಬೆಂಗಳೂರು ಉತ್ತರ (37) ಜಯ. ಬೆಂಗಳೂರು ಗ್ರಾಮಾಂತರ (8) ಮಧುಗಿರಿ (35) ಜಯ.ಪ್ರೌಢಶಾಲಾ ಬಾಲಕರ ವಿಭಾಗ

ಶಿವಮೊಗ್ಗ (18) ವಿರುದ್ಧ ಮಧುಗಿರಿ (37) ಜಯ. ಕೋಲಾರ (13) ವಿರುದ್ಧ ಚಿಕ್ಕಬಳ್ಳಾಪುರ (35) ಜಯ. ಬೆಂಗಳೂರು ಉತ್ತರ (31) ವಿರುದ್ಧ ತುಮಕೂರು (40) ಜಯ.

ರಾಮನಗರ (15) ವಿರುದ್ಧ ದಾವಣಗೆರೆ (40) ಜಯ. ಮಧುಗಿರಿ (16) ವಿರುದ್ಧ ಬೆಂಗಳೂರು ಗ್ರಾಮಾಂತರ (36) ಜಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.