ತುಮಕೂರು: ಜಿಲ್ಲೆಯಲ್ಲೂ ರೇಷ್ಮೆ ಬೆಳೆಯುವ ಪ್ರದೇಶ ನಿಧಾನವಾಗಿ ಕಡಿಮೆಯಾಗುತ್ತಿದೆ. ಹಲ ಕಾರಣಗಳಿಂದ ರೇಷ್ಮೆ ಬಿಟ್ಟು ರೈತರು ಪರ್ಯಾಯ ಬೆಳೆಯತ್ತ ಹೆಜ್ಜೆ ಹಾಕಿದ್ದಾರೆ.

ಸತತವಾಗಿ ಕುಸಿದ ಬೆಲೆ, ಮಳೆ ಕೊರತೆ ಪರಿಣಾಮ ರೇಷ್ಮೆ ಉತ್ಪಾದನೆ ಮೇಲೂ ಬಿದ್ದಿದೆ. ಮಳೆಯ ಜೂಜಾಟದಿಂದ ಬೇಸತ್ತಿರುವ ರೈತರು ರೇಷ್ಮೆ ಕೈಬಿಟ್ಟು, ಅಡಿಕೆ, ತೆಂಗು, ಬಾಳೆಯಂಥ ದೀರ್ಘಾವಧಿ ಬೆಳೆಗಳ ಮೊರೆ ಹೋಗುತ್ತಿದ್ದಾರೆ.

ಮೈಸೂರು ರೇಷ್ಮೆ ಬಿತ್ತನೆ ಪ್ರದೇಶಗಳಾದ ಕುಣಿಗಲ್, ಹೆಬ್ಬೂರು, ಕೆಂಪನಹಳ್ಳಿ, ಸಂತೆಮಾವತ್ತೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಈ ವರ್ಷ ರೇಷ್ಮೆ ಬೆಳೆಯುವ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. 2012-13ರಲ್ಲಿ ಜಿಲ್ಲೆಯಲ್ಲಿ 3058 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗಿತ್ತು. ಆದರೆ ಪ್ರಸಕ್ತ ವರ್ಷ ಈ ಪ್ರಮಾಣ 2980 ಹೆಕ್ಟೇರ್ಗೆ ಇಳಿದಿದೆ. ಕೇಂದ್ರ ರೇಷ್ಮೆ ಮಂಡಳಿ ಹಾಗೂ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಹಲವು ಕ್ರಮ ಕೈಗೊಂಡರೂ ಮಳೆಯ ಅಭಾವ ಹಾಗೂ ನೀರಿನ ಕೊರತೆಯಿಂದ ರೈತರು ರೇಷ್ಮೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಬೈವೋಲ್ಟನ್, ಮೈಸೂರು ಸೀಡ್ ಹಾಗೂ ಮಿಶ್ರ ತಳಿ ರೇಷ್ಮೆ ಬಿತ್ತನೆ ಮಾಡುವ ರೈತರಿಗಾಗಿ ಸರ್ಕಾರ ಈ ವರ್ಷ ರೂ.83 ಲಕ್ಷ ನೀಡಲಿದ್ದು, ಮೊದಲ ಕಂತಿನಲ್ಲಿ ರೂ.15 ಲಕ್ಷ ಬಿಡುಗಡೆಯಾಗಿದೆ. ಇದನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ರೇಷ್ಮೆ ಕೃಷಿ ಇಲಾಖೆ ನೀಡಲಿದೆ.

ತುಮಕೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ತಾಲ್ಲೂಕಿನಲ್ಲಿ ಬೈವೋಲ್ಟನ್ ರೇಷ್ಮೆ ಇಳುವರಿ ಉತ್ತಮವಾಗಿದೆ. ಮಿಶ್ರ ತಳಿಯ ರೇಷ್ಮೆ ಬೆಳೆಯುವ ಬೆಳೆಗಾರರಿಗೆ ಸರ್ಕಾರ ಪ್ರತಿ ಕೆ.ಜಿ ರೇಷ್ಮೆ ಗೂಡಿಗೆ ಸರಾಸರಿ ರೂ.300 ನೀಡುತ್ತಿದ್ದು, 10 ರೂಪಾಯಿ ಪ್ರೋತ್ಸಾಹಧನ ಕೊಡುತ್ತಿದೆ. ಬೈವೋಲ್ಟನ್ ತಳಿಗೆ ಸರಾಸರಿ ರೂ.350ರ ಜತೆಗೆ ರೂ.40 ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಚೀನಾ ರೇಷ್ಮೆ ಆಮದಿನಿಂದ ರೇಷ್ಮೆ ಗೂಡಿನ ಬೆಲೆ ಕುಸಿದಿತ್ತು. ಇದರಿಂದ ಬೇಸತ್ತ ರೈತರು ರೇಷ್ಮೆ ಬೆಳೆಯಿಂದ ದೂರ ಸರಿಯಲಾರಂಭಿಸಿದರು. ಇದನ್ನು ಅರಿತ ಕೇಂದ್ರ ಸರ್ಕಾರ ಆಮದು ರೇಷ್ಮೆ ಮೇಲಿನ ತೆರಿಗೆ ಪ್ರಮಾಣವನ್ನು ಶೇ 15ಕ್ಕೆ ಏರಿಸಿದೆ. ಈ ತೆರಿಗೆ ಏರಿಕೆ ವೇಳೆಗೆ ರೇಷ್ಮೆ ಗೂಡಿನ ಉತ್ಪಾದನೆ ಕಡಿಮೆಯಾಗಿದ್ದು, ಗೂಡಿನ ಬೆಲೆಯಲ್ಲಿ ಏರಿಕೆ ಕಂಡಿದೆ. ಆಮದು ರೇಷ್ಮೆಗೆ ತೆರಿಗೆ ವಿಧಿಸಿದ್ದರೂ ಚೀನಾ ರೇಷ್ಮೆಯ ಸ್ಪರ್ಧೆ ಎದುರಿಸಿ ನಿಲ್ಲುವುದು ಸ್ಥಳೀಯ ರೈತರಿಗೆ ಕಷ್ಟಕರವಾಗಿದೆ.

5ನೇ ಸ್ಥಾನ: ರಾಜ್ಯದ ರೇಷ್ಮೆ ಬೆಳೆಯುವ ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ಐದನೇ ಸ್ಥಾನದಲ್ಲಿದೆ. ವಾಣಿಜ್ಯ ಬಳಕೆ ಹಾಗೂ ಬಿತ್ತನೆ ರೇಷ್ಮೆಯೂ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ವರ್ಷ 2080 ಮೆಟ್ರಿಕ್ ಟನ್ ಗೂಡು ಉತ್ಪಾದನೆಯಾಗಿದೆ ಎಂದು ಇಲಾಖೆ ಉಪನಿರ್ದೇಶಕ ಪುಟ್ಟಲಿಂಗಯ್ಯ ತಿಳಿಸಿದರು.

ಸಹಾಯ ಬೇಕು: ರೇಷ್ಮೆ ಬೆಳೆಗೆ ಸರ್ಕಾರ ಉತ್ತಮ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಇಲಾಖೆ ಯಾವುದೇ ಕೀಟನಾಶಕ ನೀಡಿಲ್ಲ. ಕೇಳಿದರೆ ಸರ್ಕಾರ ಕೊಡುವ ಸಹಾಯ ಧನದಲ್ಲೇ ಕೊಂಡುಕೊಳ್ಳಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಹಿಂದೆ ಸಹಾಯ ಧನದ ಜತೆಗೆ ಕೀಟನಾಶಕವನ್ನೂ ನೀಡುತ್ತಿತ್ತು ಎಂದು ಕೊರಟಗೆರೆ ತಾಲ್ಲೂಕು ಮುದ್ದುಮಲ್ಲಯ್ಯ `ಪ್ರಜಾವಾಣಿ'ಗೆ ತಿಳಿಸಿದರು.

ನೀರಾವರಿ ಪ್ರದೇಶದಲ್ಲಿ ವರ್ಷಕ್ಕೆ 4ರಿಂದ 5 ಬೆಳೆ ಬೆಳೆಯುತ್ತೇವೆ. ಉತ್ತಮ ಲಾಭವನ್ನೂ ಕಾಣುತ್ತಿದ್ದೇವೆ ಎಂದು ತುಮಕೂರು ತಾಲ್ಲೂಕು ಬೆಳಧರ ಕೃಷಿಕ ಅಶ್ವಥಪ್ಪ ಹೇಳುತ್ತಾರೆ.

ತುಮಕೂರು ತಾಲ್ಲೂಕು ಅಜ್ಜಪ್ಪನಹಳ್ಳಿ ರೇಷ್ಮೆ ಬೆಳೆಗಾರ ಶ್ರೀನಿವಾಸ್ ಮೂರ್ತಿ ಪ್ರತಿಕ್ರಿಯಿಸಿ, ರೇಷ್ಮೆ ಬೆಳೆ ಲಾಭದಾಯಕವಾಗಿದೆ. ಸರ್ಕಾರದಿಂದ ಪ್ರೋತ್ಸಾಹ ಧನ ಸಿಗುತ್ತಿದೆ. ಆದರೆ ನೀರಿನ ಕೊರತೆಯಿಂದ ಉತ್ತಮ ಬೆಳೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

ಶೇಂಗಾ ನಾಡಿನಲ್ಲೂ ರೇಷ್ಮೆ
ತುಮಕೂರು: ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಬರಪೀಡಿತ ಪಾವಗಡ ತಾಲ್ಲೂಕಿಗೆ ವಿಶೇಷ ಕ್ಲಷ್ಟರ್ ಸ್ಥಾನಮಾನ ನೀಡಲಾಗಿದೆ. ಮಳೆಯಾಧರಿತ ಪ್ರದೇಶದಲ್ಲಿ ಶೇಂಗಾ ಬೆಳೆದರೆ, ನೀರಾವರಿ ಪ್ರದೇಶದಲ್ಲಿ ಶೇಂಗಾ ಬೆಳೆಗೆ ಪರ್ಯಾಯವಾಗಿ ರೇಷ್ಮೆ ಬೆಳೆಯಲಾಗುತ್ತಿದೆ. ತಾಲ್ಲೂಕಿನಾದ್ಯಂತ 600 ಹೆಕ್ಟೇರ್ ಪ್ರದೇಶದಲ್ಲಿ 40 ರೈತರು ಬೈವೋಲ್ಟನ್ ರೇಷ್ಮೆ ಬೆಳೆಯುತ್ತಿದ್ದಾರೆ.

ತಾಲ್ಲೂಕಿನಲ್ಲಿ ಚಾಕಿ ಹುಳು ಉತ್ಪಾದನೆ ಈ ಹಿಂದೆ 27,000 ಸಾವಿರ ಇತ್ತು. ಈಗ ಅದು 1.75 ಲಕ್ಷಕ್ಕೆ ಏರಿದೆ. ವರ್ಷಾಂತ್ಯಕ್ಕೆ ಪಾವಗಡದಲ್ಲಿ ಚಾಕಿ ಹುಳು ಉತ್ಪಾದನೆಯನ್ನು 2 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ರೇಷ್ಮೆ ಇಲಾಖೆ ತಿಳಿಸಿದೆ.

ಪಾವಗಡದಲ್ಲಿ ಬೈವೋಲ್ಟನ್ ಚಾಕಿ ಹುಳು ಸಂಶೋಧನೆ ನಡೆಯುತ್ತಿದ್ದು, ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಇದರ ಉಸ್ತುವಾರಿ ಹೊತ್ತಿದ್ದಾರೆ. ಪ್ರಸಕ್ತ ವರ್ಷ ಶಿರಾ, ಮಧುಗಿರಿ, ತುಮಕೂರು, ಕೊರಟಗೆರೆಯನ್ನು ಕ್ಲಸ್ಟರ್ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.