ಗ್ರೇಟರ್ ನೊಯಿಡಾ: ಸುಮಾರು ಇಪ್ಪತ್ತೊಂದು ತಿಂಗಳುಗಳಿಂದ ಪದಕ ಜಯದ ಬರ ಎದುರಿಸಿದ್ದ ನಿಕತ್ ಜರೀನ್ ಕಡೆಗೂ ಬಾಕ್ಸಿಂಗ್ ವಿಶ್ವಕಪ್ ಫೈನಲ್ ಪ್ರವೇಶಿಸಿದರು. ಇದರೊಂದಿಗೆ ಅವರು ಪದಕ ಖಚಿತಪಡಿಸಿಕೊಂಡರು.

ನಿಕತ್ ಅವರಲ್ಲದೇ ಜೈಸ್ಮಿನ್ ಲಂಬೋರಿಯಾ, ಜಾದುಮಣಿ ಸಿಂಗ್ ಮಂದೆನಬಮ್, ಪವನ್ ಬರ್ತವಾಲ್, ಸಚಿನ್ ಸಿವಾಚ್ ಮತ್ತು ಹಿತೇಶ್ ಗುಲಿಯಾ ಅವರು ಕೂಡ ಬೇರೆ ಬೇರೆ ತೂಕದ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಎರಡು ಸಲದ ವಿಶ್ವ ಚಾಂಪಿಯನ್ ನಿಕತ್ ಅವರು ಹೋದ ವರ್ಷದ ಫೆಬ್ರುವರಿಯಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಚಾಂಪಿಯನ್ಷಿಪ್ನಲ್ಲಿ ಪದಕ ಜಯಿಸಿದ್ದು ಕೊನೆ. ಅಲ್ಲದೇ ಕಳೆದ ಒಂದು ವರ್ಷದಿಂದ ಭುಜದ ಗಾಯದಿಂದಾಗಿ ಕಣಕ್ಕಿಳಿದಿರಲಿಲ್ಲ. ಹೋದ ಸೆಪ್ಟೆಂಬರ್ನಲ್ಲಿ ಅವರು ವಿಶ್ವ ಚಾಂಪಿಯನ್ಷಿಪ್ನಲ್ಲಿ ರಿಂಗ್ಗೆ ಇಳಿದಿದ್ದರು.

ಅವರು ಬುಧವಾರ ನಡೆದ 51ಕೆ.ಜಿ. ಸೆಮಿಫೈನಲ್ನಲ್ಲಿ ಉಜ್ಬೇಕಿಸ್ತಾನದ ಜನೀವ್ ಗುಲ್ಸೇವರ್ ವಿರುದ್ಧ ಗೆದ್ದರು. ಚಿನ್ನದ ಪದಕ ಸುತ್ತಿನಲ್ಲಿ ನಿಕತ್ ಅವರು ಚೈನಿಸ್ ತೈಪೆಯ ಗುವಾ ಯೀ ಯುವಾನ್ ವಿರುದ್ಧ ಸೆಣೆಸಲಿದ್ದಾರೆ.

ಮಹಿಳೆಯರ 57 ಕೆ.ಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ನಾಲ್ಕರ ಘಟ್ಟದಲ್ಲಿ 5–0ಯಿಂದ ಕಜಕಸ್ತಾನದ ಉಲ್ಝನ್ ಸರ್ಸೆನಬೆಕ್ ವಿರುದ್ಧ ಗೆದ್ದರು.

ಪುರುಷರ 50 ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ಜಾದುಮಣಿ ಸಿಂಗ್ ಅವರು ಆಸ್ಟ್ರೇಲಿಯಾದ ಒಮರ್ ಇಜಾಜ್ ವಿರುದ್ಧ ಗೆದ್ದರು. ಪವನ್ ಭರ್ತವಾಲಾ (55ಕೆಜಿ), ಸಚಿನ್ ಸಿವಾಚ್ (60 ಕೆ.ಜಿ) ಮತ್ತು ಹಿತೇಶ್ ಗುಲಿಯಾ (70ಕೆ.ಜಿ) ಕೂಡ ಫೈನಲ್ ಪ್ರವೇಶಿಸಿದ್ದಾರೆ.

ನೀರಜ್ ಫೋಗಟ್ (65ಕೆ.ಜಿ), ಜುಗನೂ (85ಕೆ.ಜಿ) ಮತ್ತು ಸುಮಿತ್ ಕುಂದು (75 ಕೆ.ಜಿ) ಅವರು ಸೋತು ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.