ಮಂಗಳವಾರ, ಏಪ್ರಿಲ್ 20, 2021
24 °C

ರೈತರನ್ನು ದಿಕ್ಕು ತಪ್ಪಿಸುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಣ್ಣ ರೈತರಿಗೆ ಸರ್ಕಾರ ಸಹಾಯ ಧನ ಕೊಡುತ್ತದೆ. ಅರ್ಹ ರೈತರೆಲ್ಲರೂ ಕಂದಾಯ ಇಲಾಖೆಗೆ ಅರ್ಜಿ ಕೊಡಿ’ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕರು ಲಕ್ಯಾ ಹೋಬಳಿಯ ಒಂದು ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರೆನ್ನಲಾಗಿದೆ.ಇದನ್ನೇ ನಂಬಿದ ಸಣ್ಣ ಮತ್ತು ಅತಿ ಸಣ್ಣ ರೈತರೆಲ್ಲರೂ ಕಳಸಾಪುರದ ನೆಮ್ಮದಿ ಕೇಂದ್ರದ ಮುಂದೆ ಇಡೀ ದಿನ ಕ್ಯೂನಲ್ಲಿ ನಿಂತು ಅರ್ಜಿ ಕೊಡುತ್ತಿರುವುದು ಯಾವ ಪುರುಷಾರ್ಥಕ್ಕೆ?ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ, ಸರ್ಕಾರದಿಂದ ಯಾವ ಸೂಚನೆಯೂ ನಮಗೆ ಬಂದಿಲ್ಲ ಮತ್ತು ಅರ್ಜಿ ಕೊಡಬೇಕಾದ ಫಾರಂಗಳು ಬಂದಿಲ್ಲ. ಇದೆಲ್ಲ ಮುಗ್ಧ ರೈತರನ್ನು ದಿಕ್ಕುತಪ್ಪಿಸುವ ಕೆಲಸವೆಂದು ಹೇಳುತ್ತಾರೆ. ಶಾಸಕರು ನಿಜ ಸಂಗತಿಯನ್ನು         ತಿಳಿಸುವರೆ?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.