ಭಾನುವಾರ, ಮೇ 22, 2022
21 °C

ರೈತರಿಗೆ ವಿಷ, ನೇಣಿನ ಹಗ್ಗ ವಿತರಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೈತ ದಂಪತಿ ಆತ್ಮಹತ್ಯೆ’ (ಪ್ರ.ವಾ. ಮಾ. 3) ವರದಿಗೆ ಈ ಪತ್ರ. ‘ಗ್ರಾಮ ವಾಸ್ತವ್ಯ’ವಾಗಲಿ, ಸಾವಯವ ರೈತನ ಮನೆಯಲ್ಲಿ ಮಲಗುವ ಕ್ರಿಯೆಗಳಾಗಲಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಲಾರವು ಎಂಬ ಸತ್ಯವನ್ನು ಸರ್ಕಾರಗಳು ಈಗಲಾದರೂ ಮನಗಾಣಬೇಕು.

 

ಬೆಳೆದ ಬೆಳೆಗೆ ನ್ಯಾಯಯುತ ಮಾರುಕಟ್ಟೆ ಬೆಲೆಯ ಬೇಡಿಕೆ ಈಡೇರಿದರೆ ಮಾತ್ರ ಇಂತಹ ಆತ್ಮಹತ್ಯೆಗಳನ್ನು ತಡೆಯಬಹುದು. ವಿವಿಧ ಮಠ ಮಾನ್ಯಗಳಿಗೆ, ಜಾತಿಯಾಧಾರಿತ ಸಂಘಗಳಿಗೆ, ವಿವಿಧ ಉತ್ಸವ ಸಮ್ಮೇಳನಗಳಿಗೆ ಕೋಟ್ಯಂತರ ರೂಪಾಯಿ ಮೀಸಲಿಡುವ ಸರ್ಕಾರ, ರೈತನ ಬೆಳೆಯನ್ನು ಖರೀದಿಸಲು ಸೂಕ್ತ ಹಣ ಮೀಸಲಿಡದೆ ಅಪರಾಧಿ ಸ್ಥಾನದಲ್ಲಿ ನಿಂತಿದೆ.ಮತಗಳಿಕೆಗೆ ಮಾತ್ರ ರೈತರು ಬೇಕು. ನಂತರದ ಅಭಿವೃದ್ಧಿ ಹೆಸರಲ್ಲಿ ಕೈಗಾರಿಕೆಗಳಿಗೆ ಮಣೆ ಹಾಕುವ ಸರ್ಕಾರದ ನೀತಿ ಹೀಗೆಯೇ ಮುಂದುವರಿಯುವುದೇ ಆದರೆ ಸರ್ಕಾರಕ್ಕೆ ಒಂದು ವಿನಂತಿ: ದಯವಿಟ್ಟು ರೈತರಿಗೆ ಸಬ್ಸಿಡಿ ದರದಲ್ಲಿ ವಿಷವನ್ನು, ನೇಣಿನ ಹಗ್ಗವನ್ನು ವಿತರಿಸಿ ಪುಣ್ಯ ಕಟ್ಟಿಕೊಳ್ಳಿ. ಯಾಕೆಂದರೆ ಅವನ್ನೂ ಕೊಳ್ಳಲು ಇವತ್ತು ರೈತ ಅಸಹಾಯಕನಾಗಿದ್ದಾನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.