ಭಾನುವಾರ, ಮೇ 9, 2021
28 °C

ರೈತರಿಗೆ ಸರ್ಕಾರದಿಂದ ಹಲವು ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ: ಕಳೆದ 25 ವರ್ಷಗಳಿಂದ ಗದ್ನ್ಯಾಳಹಳದಲ್ಲಿ ಸಾಕಷ್ಟು ಹೂಳು ತುಂಬಿಕೊಂಡು, ಮಳೆ ನೀರು ಸರಾಗ ವಾಗಿ ಹರಿಯದೆ ರೈತರ ಭೂಮಿಫಲ ವತ್ತತೆ ಕಳೆದುಕೊಂಡು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಸರ್ಕಾರ ಕಾಮಗಾರಿಗೆ ಚಾಲನೆ ನೀಡಿದ್ದು ಸಂತಸ ತಂದಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.234 ಲಕ್ಷದಲ್ಲಿ ಗದ್ನ್ಯಾಳ ಹಳ್ಳದ ಸವಳು-ಜವುಳ ಪೀಡಿತ ಪ್ರದೇಶಗಳ ಭೂಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇದ ರೊಂದಿಗೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಅಧುನೀಕರಣ, ಸವಳು-ಜವುಳು ಭೂಮಿ ಸುಧಾ ರಣೆಯ ಯೋಜನೆಗಳಿಗೆ ಅಧಿಕಾರಿಗಳು ಸಹಕರಿಸುತ್ತಿರುವುದು ಸ್ವಾಗತಾರ್ಹ ವಾಗಿದೆ ಎಂದರು.ಅಚ್ಚುಕಟ್ಟು ಪ್ರದೇಶದಲ್ಲಿ ಬರುವ  ಏತ ನೀರಾವರಿ ಸುಧಾರಣೆಗೆ 5 ಕೋಟಿ ಅನುದಾನ ಬಂದಿದೆ. ಪ.ಜಾ/ ಪ.ಪಂಗಡ ಕ್ಷಯೋಭಿವೃದ್ಧಿಗಾಗಿ ರಸ್ತೆ, ಸಮುದಾಯ ಭವನಗಳಿಗೆ ಕೊಟ್ಯಂತರ ಹಣ ಬಂದಿದೆ ಎಂದು ತಿಳಿಸಿದರು.ರೈತರು, ಕೃಷಿ ಕೂಲಿ ಕಾರ್ಮಿಕರು ಕೆಲಸದಲ್ಲಿ ನಿರತರಾದಾಗ ಹಾವು ಕಚ್ಚಿ ಅಥವಾ ಅಪಘಾತದಿಂದ ಮೃತರಾದಲ್ಲಿ ಅವರ ಕುಟುಂಬಕ್ಕೆ ಒಂದು  ಲಕ್ಷ ಪರಿಹಾರ ಧನ ನೀಡಲಾಗುವುದು. ಇದಕ್ಕಾಗಿ ಯಾವುದೇ ವಿಮೆ ಭರಿಸಬೇಕಾಗಿಲ್ಲ ಎಂದರು. ತಾಲ್ಲೂಕಿನಲ್ಲಿ ಬರಗಾಲ ಎದುರಿಸಲು ಕುಡಿಯುವ ನೀರಿನ ಕೊರತೆ ನೀಗಿಸಲು 1.78 ಕೋಟಿ ಹಣ ಪ್ರಸ್ತಾವ ಸಲ್ಲಿಸಲಾಗಿದೆ.ಸದ್ಯ 90 ಲಕ್ಷ ಹಣ ಬಂದಿದೆ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯ ಕುರಿತು ಗಮನಕ್ಕೆ ತಂದಲ್ಲಿ 48 ಗಂಟೆಯಲ್ಲಿ ನೀರಿನ ಸಮಸ್ಯ ಪರಿಹಾರ ನೀಡಲಾಗುವುದು ಎಂದು ಹೇಳಿದರು.ಕೃಷಿ ಅಧಿಕಾರಿ ಸಹದೇವ ಯರಗೊಪ್ಪ ಮಾತನಾಡಿ, ಮುಂದಿನ ದಶಕಗಳಲ್ಲಿ ಜಗತ್ತಿನಾದ್ಯಂತ ಜಲಕ್ಕಾಗಿ ಯುದ್ಧ ನಡೆಯಲಿದೆ. ನೀರನ್ನು ಮಿತವಾಗಿ ಬಳಸುವುದರೊಂದಿಗೆ ಸಾವ ಯವ ಕೃಷಿಗೆ ಆದ್ಯತೆ ನೀಡುವುದು ಅಗತ್ಯವಿದೆ ಎಂದರು.ಮಲ್ಲಿಕಾರ್ಜುನ ಸ್ವಾಮೀಜಿ, ಅಜ್ಜಯ್ಯಸ್ವಾಮೀಜಿ, ಶಿವಾನಂದ ಹೂಗಾರ, ಬಸಯ್ಯ ಹಿರೇಮಠ, ಅನೀಲ ಸುಣಗಾರ, ರತ್ನವ್ವ ತೇಗೊರ, ಬಾರ್ಕಿ, ಬಾಳಪ್ಪ ಕಗದಾಳ, ಎಂ.ಎಂ. ಕೊಮಣ್ಣವರ, ಬಿ.ಆರ್. ನರಸನ್ನವರ ಹಾಜರಿದ್ದರು.ಶಶಿಧರ ಸದಾಶಿವನವರ ಸ್ವಾಗತಿಸಿದರು. ಶಿವಾನಂದ ತಾಹಾಳ ನಿರೂಪಿಸಿದರು. ಸಿ.ಎಂ. ದ್ಯಾಮಣ್ಣವರ ವಂದಿಸಿದರು.ಪರಿಹಾರ

ಸವದತ್ತಿ ತಾಲ್ಲೂಕಿನ ಕೊಟೂರು ಗ್ರಾಮದ ಕೃಷಿ ಕೂಲಿ ಕೆಲಸ ಮಾಡುವಾಗಿ ಹಾವು ಕಚ್ಚಿ ಮರಣ ಹೊಂದಿದ ಯಲ್ಲವ್ವ ಚಿಪ್ಪಲಕಟ್ಟಿ ಅವರ ಪತಿ ರಾಮಪ್ಪ ಅವರಿಗೆ ಶಾಸಕ ಆನಂದ ಮಾಮನಿ 1ಲಕ್ಷ ರೂ  ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.