ಉಡುಪಿ: ನಂದಿಕೂರಿನ ಯುಪಿಸಿಎಲ್ನಿಂದ ಆಗುತ್ತಿರುವ ಸಮಸ್ಯೆಗಳ ಮುಂದಿನ ಹೋರಾಟ ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಇದೇ 4ರಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ತಿಳಿಸಿದರು.

ಘಟಕದಿಂದ ಆಗುತ್ತಿರುವ ಪರಿಸರ ಹಾನಿಯ ಕುರಿತಂತೆ ತೀವ್ರ ಹೋರಾಟ ಆರಂಭಿಸಿದ ರೈತ ಸಂಘ ಏ.30ರೊಳಗೆ ಅಲ್ಲಿನ ಘಟಕ ಬಂದ್ ಮಾಡಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಉಸ್ತುವಾರಿ ಸಚಿವರ ಮನೆಯ ಎದುರು ಬಾರಕೋಲು ಚಳವಳಿ ನಡೆಸಿತ್ತು. 30ರೊಳಗೆ ಘಟಕ ಮುಚ್ಚದಿದ್ದರೆ ಬೀಗಮುದ್ರೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಈ ಬಗ್ಗೆ ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ಇದೇ 4ರಂದು ರೈತ ಸಂಘ ಮುಂದಿನ ಹೋರಾಟ ಏನು?ಹೇಗೆ ಎನ್ನುವ ಬಗ್ಗೆ ಚರ್ಚಿಸಲಿದೆ ಎಂದರು.

ನಂದಿಕೂರಿನ ಕೊಳಚೂರು ಮತ್ತು ಪಾದೆಬೆಟ್ಟು ಗ್ರಾಮಗಳಲ್ಲಿ ಹಾದು ಹೋಗಿರುವ ವಿದ್ಯುತ್ ಹೈಟೆನ್ಷನ್ ವೈರ್ಗಳು ಉಪ್ಪು ನೀರಿನ ಅಂಶ ತಾಗಿ ತುಕ್ಕು ಹಿಡಿದು ಕರಗುತ್ತಿವೆ. ಆ ಪರಿಸರದಲ್ಲಿನ ತಗಡಿನ ಶೀಟ್ ಮನೆಗಳ ಮಾಡು ಹಾಳಾಗುತ್ತಿದೆ. ಇವುಗಳ ಬಗ್ಗೆ ಮಂಗಳವಾರ ಅಲ್ಲಿಗೆ ಭೇಟಿ ನೀಡಿ ಮಾಧ್ಯಮಗಳಿಗೆ ತೋರಿಸುವುದಾಗಿ ಅವರು ತಿಳಿಸಿದರು.

ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅವರ ಬಳಿ ನಿಯೋಗ ಹೋಗಿದ್ದಾಗ ‘ಕೂಡಲೇ ತಜ್ಞರ ತಂಡವನ್ನು ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಒಂದು ವೇಳೆ ಅಲ್ಲಿ ಯುಪಿಸಿಎಲ್ನಿಂದ ಅವ್ಯವಹಾರ ನಡೆದಿದ್ದರೆ ಕಂಪೆನಿ ನಿಲ್ಲಿಸಲು ಹಿಂಜರಿಯುವುದಿಲ್ಲ ಎಂದು ಮಾತುಕೊಟ್ಟಿದ್ದರು. ಆದರೆ ಈವರೆಗೂ ಒಂದು ತಂಡವೂ ಅಲ್ಲಿಗೆ ಬಂದು ಪರಿಶೀಲನೆ ಮಾಡಿಲ್ಲ’ ಎಂದು ಅವರು ಆಕ್ಷೇಪಿಸಿದರು.

ಯುಪಿಸಿಎಲ್ನಿಂದ ಆಗುತ್ತಿರುವ ತೊಂದರೆಯ ಕುರಿತು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಹಲವು ದಿನ ನಿತ್ಯೋಪವಾಸ ಮಾಡಿದ್ದಾರೆ. ಆ ಮೂಲಕವಾದರೂ ಮುಖ್ಯಮಂತ್ರಿಗಳ ಗಮನ ಸೆಳೆಯುವ ಅವರ ಪ್ರಯತ್ನ ಸಫಲವಾಗಿಲ್ಲ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಮಂಕುಬೂದಿ ಎರಚಿದ್ದಾರೆ ಎಂದು ಟೀಕಿಸಿದರು.

ಕುತ್ಯಾರುವಿನಲ್ಲಿ ಅತಿರುದ್ರ ಯಾಗ ನಡೆಯುವ ಸ್ಥಳ ಯುಪಿಸಿಎಲ್ಗೆ ಹತ್ತಿರದಲ್ಲಿದೆ. ಹೀಗಾಗಿ ಆ ಭಾಗದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಅಂದು ರೈತರೊಂದಿಗೆ ಚರ್ಚಿಸಲು, ಸ್ಥಳಕ್ಕೆ ಭೇಟಿ ನೀಡಲು ಅವಕಾಶ ಕೊಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.