ರೈಲಿಗೆ ಸಿಲುಕಿ ಇಬ್ಬರ ಸಾವು

ಶನಿವಾರ, ಮೇ 25, 2019
22 °C

ರೈಲಿಗೆ ಸಿಲುಕಿ ಇಬ್ಬರ ಸಾವು

Published:
Updated:

ಪುತ್ತೂರು: ತಾಲ್ಲೂಕಿನ ಕಾಣಿಯೂರು ಸಮೀಪದ ಪುಣ್ಚತ್ತಾರು ಗ್ರಾಮದ ಮೂಡಾಯಿ ಮಜಲು ಎಂಬಲ್ಲಿ ರೈಲು ಹಳಿ ದಾಟುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಪುಣ್ಚತ್ತಾರು ಗ್ರಾಮದ ಉಪ್ಪಡ್ಕ ನಿವಾಸಿ ತಿರುಮಲೇಶ್ವರ (22) ಮತ್ತು ಸುಳ್ಯ ತಾಲ್ಲೂಕಿನ ಮುರುಳ್ಯ ಗ್ರಾಮದ ಕಡೀರ ನಿವಾಸಿ ಹರಿಯಪ್ಪ (24) ಮೃತಪಟ್ಟವರು. ಶುಕ್ರವಾರ ರಾತ್ರಿ 10ರ ಸುಮಾರಿಗೆ ಅವರು ಹಳಿಯಲ್ಲಿ ಸಾಗುತ್ತಿದ್ದಾಗ ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅವರ ಮೇಲೆ ಹಾದು ಹೋಯಿತು.ಪುತ್ತೂರು-ಕಾಣಿಯೂರು- ನಿಂತಿಕಲ್ಲು ನಡುವೆ ಓಡಾಡುವ ಟೂರಿಸ್ಟ್ ಟೆಂಪೊ ಒಂದರ ನಿರ್ವಾಹಕರಾಗಿ ದುಡಿಯುತ್ತಿದ್ದ ತಿರುಮಲೇಶ್ವರ ಮತ್ತು ಪುಳಿಕುಕ್ಕು ಎಂಬಲ್ಲಿ ಹೋಲೊ ಬ್ಲಾಕ್ ತಯಾರಿಕಾ ಉದ್ಯಮದಲ್ಲಿ  ಕೆಲಸ ಮಾಡುತ್ತಿದ್ದ ಹರಿಯಪ್ಪ ಕೆಲಸ ಮುಗಿಸಿಕೊಂಡು ಜತೆಯಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry