ಅಜ್ಮೀರ್, (ಐಎಎನ್ಎಸ್): ಜೋಧ್ಪುರ- ಅಜ್ಮೀರ್ ರೈಲಿನ ಒಳಗೆ ಹಾಗೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ವಾಹನ ಹಾದುಹೋಗಲಿದ್ದ ಅಜ್ಮೀರ್ ರೈಲ್ವೆ ಜಂಕ್ಷನ್ಗೆ ಸಮೀಪದ ಮಾರ್ಟಿನ್ ಸೇತುವೆ ಮೇಲೆ ಬಾಂಬ್ ಇಡಲಾಗಿದೆ ಎಂದು ವ್ಯಕ್ತಿಯೊಬ್ಬ ಸ್ಟೇಷನ್ ಮಾಸ್ಟರ್ಗೆ ತಿಳಿಸಿದ್ದು, ಸೋಮವಾರ ತೀವ್ರ ಆತಂಕಕ್ಕೆ ಈಡು ಮಾಡಿತು.

`ಬಳಿಕ ರೈಲಿನ ಪ್ರಯಾಣಿಕರನ್ನು ಕೂಡಲೇ ತೆರವುಗೊಳಿಸಿ ರೈಲು ಸುರಕ್ಷಾ ಪಡೆಯ ಸಿಬ್ಬಂದಿಯಿಂದ ತೀವ್ರ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಲಿಲ್ಲ~ ಎಂದು ವಾಯವ್ಯ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

`ಬಾಂಬ್ ಇದೆ ಎಂದು ತಿಳಿಸಿದ ವ್ಯಕ್ತಿ ಅದೇ ರೈಲಿನ ಪ್ರಯಾಣಿಕನೇ ಆಗಿದ್ದ. ಬೆಳಿಗ್ಗೆ 11.55ರಲ್ಲಿ ರೈಲು ಖಾರ್ವ ನಿಲ್ದಾಣದಲ್ಲಿ ನಿಂತಾಗ ಆತ ಖುದ್ದಾಗಿ ಸ್ಟೇಷನ್ ಮಾಸ್ಟರ್ನ್ನು ಭೇಟಿ ಮಾಡಿದ್ದ. ಇದೀಗ ಆತನನ್ನು ಭದ್ರತಾ ಪಡೆಗಳು ತೀವ್ರ ತಪಾಸಣೆಗೆ ಒಳಪಡಿಸಿವೆ~ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.