ಚೆನ್ನೈ : ಇಲ್ಲಿಗೆ 75 ಕಿಮೀ ದೂರದ ಅರಕ್ಕೋಣಂನಲ್ಲಿ ಮಂಗಳವಾರ ರಾತ್ರಿ ಎರಡು ಪ್ರಯಾಣಿಕರ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಮೃತಪಟ್ಟು, ಸುಮಾರು 85ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಚಿಟ್ಟೇರಿ ರೈಲು ನಿಲ್ದಾಣದ ಬಳಿ ರಾತ್ರಿ 9.30ರ ವೇಳೆಯಲ್ಲಿ ಸಿಗ್ನಲ್ಗಾಗಿ ಕಾಯುತ್ತಿದ್ದ ಕಾಟ್ಪಾಡಿ ಪ್ರಯಾಣಿಕರ ರೈಲಿಗೆ ಚೆನ್ನೈ ಬೀಚ್ ಮತ್ತು ವೆಲ್ಲೂರು ನಡುವೆ ಸಂಚರಿಸುವ ವಿದ್ಯುತ್ ಚಾಲಿತ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಅಪಘಾತ ಸ್ಥಳದಲ್ಲಿದ್ದ ಪೊಲೀಸರು `ಪ್ರಜಾವಾಣಿ~ಗೆ ದೂರವಾಣಿ ಮೂಲಕ ಹೇಳಿದ್ದಾರೆ.

ಡಿಕ್ಕಿಯಿಂದಾಗಿ ನಿಂತಿದ್ದ ರೈಲಿನ ಒಂದು ಬೋಗಿ ಮತ್ತು ಡಿಕ್ಕಿ ಹೊಡೆದ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಇದರಡಿ ಕೆಲವು ಪ್ರಯಾಣಿಕರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಈ ಪ್ರದೇಶದಲ್ಲಿನ ಕಗ್ಗತ್ತಲು ಮತ್ತು ಭಾರಿ ಮಳೆಯಿಂದ ಪರಿಹಾರ ಕಾರ್ಯಕ್ಕೆ ತೊಂದರೆ ಆಗಿತ್ತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಪರಿಹಾರ ಸಾಮಗ್ರಿ ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ ಎರಡು ರೈಲುಗಳು ಇಲ್ಲಿಂದ ಅಪಘಾತ ಸ್ಥಳಕ್ಕೆ ತೆರಳಿವೆ. ಗಾಯಗೊಂಡ ವರನ್ನು ಅರಕ್ಕೋಣಂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳಿ ತಪ್ಪಿದ ಬೋಗಿಗಳಡಿ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಪ್ರಯಾಣಿಕರು ಸಿಲುಕಿದ್ದಾರೆಂದು ನಂಬಲಾಗಿದೆ. ಹಿಂದಿನಿಂದ ಬಂದ ರೈಲು, ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆಯಲು ಏನು ಕಾರಣ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ.

ಈ ಅಪಘಾತದಿಂದಾಗಿ ರಾತ್ರಿ ಚೆನ್ನೈನಿಂದ ಹೊರಡಬೇಕಿದ್ದ ಪಶ್ಚಿಮ ಕರಾವಳಿ ಮತ್ತು ಬೆಂಗಳೂರು ಮೂಲದ ರೈಲುಗಳ ಸಂಚಾರ ವ್ಯತ್ಯಯವಾಗಿದೆ. ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.