ಕುಮಟಾ: ತಾಲ್ಲೂಕಿನ ಮಿರ್ಜಾನ್ ಆದಿಚುಂಚನಗಿರಿ ಕೇಂದ್ರೀಯ ಶಾಲೆಯ ವಿದ್ಯಾರ್ಥಿಯೊಬ್ಬ ಕೊಯಮತ್ತೂರು ಬಳಿ ರೈಲಿಗೆ ಸಿಕ್ಕ ಎರಡು ಕಾಲೂ ಕಳೆದು ಕೊಂಡ ಘಟನೆ ಈಚೆಗೆ ಜರುಗಿದೆ.

ಗಾಯಾಳು ವಿದ್ಯಾರ್ಥಿಯನ್ನು ಕುಮಟಾ ಚಿತ್ರಗಿ ಕ್ರಾಸ್ ನಿವಾಸಿ ಗಣೇಶ ಪೊನಪಂಡಿ (12) ಎಂದು ಗುರುತಿಸಲಾ ಗಿದೆ. ಈತ ಮಿರ್ಜಾನಿನ ಆದಿಚುಂಚನ ಗಿರಿ ಕೇಂದ್ರೀಯ ವಿದ್ಯಾಲಯ ಶಾಲೆ ಯಲ್ಲಿ ಐದನೇ ತರಗತಿ ಓದುತ್ತಿದ್ದಾನೆ. ಮೂಲತ: ಕೊಯಮತ್ತೂರಿನವರಾದ ಈತನ ತಂದೆ ಕುಮಟಾದಲ್ಲಿ ಬೇಕರಿ ತಿನಿಸುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾನೆ. ಕೊಯಮತ್ತೂರಿ ನಲ್ಲಿರುವ ಆನಾರೋಗ್ಯ ಪೀಡಿತ ತನ್ನ ತಾಯಿಯನ್ನು ನೋಡಿ ತಂದೆಯೊಟ್ಟಿಗೆ ವಾಪಸು ಬರುವಾಗ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಹಳಿಗೆ ಸಿಕ್ಕಿ ದುರಂತ ಸಂಭವಿಸಿದೆ. ಕೊಯಮತ್ತೂರು ರೇಲ್ವೆ ನಿಲ್ದಾಣ ಸಮೀಪ ಹಳಿಗಳ ಬ್ದ್ದಿದು ಒದ್ದಾ ಡುತ್ತಿದ್ದ ಈತನನ್ನು ರೇಲ್ವೆ ಪೊಲೀಸರು ಅಸ್ಪತ್ರೆಗೆ ದಾಖಲಿಸಿದ್ದರು.

ಈತನ ಒಂದು ಕಾಲು ರೈಲು ಹರಿದು ತುಂಡಾಗಿದ್ದರೆ ಜಕಂಗೊಂಡ ಇನ್ನೊಂದು ಕಾಲನ್ನು ಆಸ್ಪತ್ರೆಯಲ್ಲಿ ವೈದ್ಯರು ಕತ್ತರಿಸಿ ಚಿಕಿತ್ಸೆ ನೀಡಿದ್ದಾರೆ.

ಈ ಬಡ ವಿದ್ಯಾರ್ಥಿಯ ಚಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ ಶಾಲೆ ಯಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ದಾನಿಗಳು, ಸಂಘ-ಸಂಸ್ಥೆಗಳು ವಿದ್ಯಾ ರ್ಥಿಯ ಚಿಕಿತ್ಸೆ ನೆರವು ನೀಡಲು ಮುಂದೆ ಬರಬಹುದಾಗಿದೆ ಎಂದು ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.