ಶನಿವಾರ, ಜುಲೈ 24, 2021
26 °C

ರೈಲ್ವೆ ಕೆಳ ಸೇತುವೆ ತಂದ ಯಾತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ತಾಲ್ಲೂಕಿನ ನೊಸಗೆರೆ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾಪುರ ಹಾಗೂ ಬೊಪ್ಪನಹಳ್ಳಿ ಗ್ರಾಮಗಳ ಸಮೀಪದ ರೈಲ್ವೆ ಕೆಳ ಸೇತುವೆಯು ಗ್ರಾಮಸ್ಥರಿಗೆ ನಿತ್ಯ  ಕಿರಿ ಕಿರಿ ಎಂಬಂತಾಗಿದೆ.  ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಈ ಸೇತುವೆಯ ಕೆಳಗಿನಿಂದ ಸಂಚರಿಸುವುದೇ ಒಂದು ಸರ್ಕಸ್‌ ಎನ್ನುವಂತಾಗಿದೆ.`ಮಾಲೂರು ಪಟ್ಟಣದಿಂದ 4.ಕಿ.ಮೀ ಅಂತರದಲ್ಲಿನ ಈ ಗ್ರಾಮಕ್ಕೆ ಸಂಚಾರಕ್ಕೆ ಸೇತುವೆ ಕಲ್ಪಿಸಿದೆ. ಆದರೂ ಬೃಹತ್‌ ಪ್ರಮಾಣದ ವಾಹನವಾಗಲಿ ಅಥವಾ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ~ ಎನ್ನುತ್ತಾರೆ ಸ್ಥಳೀಯರು.`ನಾವು ಬೆಳೆದ ತರಕಾರಿ ಸಾಗಿಸಲು, ವ್ಯಾಪಾರ  ವಹಿವಾಟು,  ಕಚೇರಿ  ಕೆಲಸ, ಶಾಲಾ-ಕಾಲೇಜಿಗೆ ಹೋಗಲು ಸಂಪರ್ಕ ರಸ್ತೆ ಇಲ್ಲವಾಗಿದೆ. ಈ ಸೇತುವೆ ಮಾರ್ಗದಲ್ಲಿ ದ್ವಿಚಕ್ರ ವಾಹನ ಮಾತ್ರ ಸಂಚರಿಸಬಹುದು. ಮಳೆಗಾಲದಲ್ಲಂತೂ  ನಮಗೆ ನರಕ ಯಾತನೆ~ ಎಂದು  `ಪ್ರಜಾವಾಣಿ~ಗೆ ತಿಳಿಸಿದರು ರೈತ ಮಲ್ಲಪ್ಪ.ಬಸ್‌ ಸೌಕರ್ಯವಂತೂ ಇಲ್ಲದ ಗ್ರಾಮಕ್ಕೆ ನೊಸಗೆರೆ ಗ್ರಾ.ಪಂ ವ್ಯಾಪ್ತಿಯ ಚಿಕ್ಕಾಪುರ, ಬೊಪ್ಪನಹಳ್ಳಿ, ಮಾದನಹಟ್ಟಿ, ಹುರಳಗೆರೆ, ಮಾರಸಂದ್ರ ಮತ್ತು ಪಿಚ್ಚಗುಂಟ್ರಹಳ್ಳಿ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು.

ಬೃಹತ್‌ ವಾಹನಗಳು ಗ್ರಾಮಗಳಿಗೆ ಹೋಗಬೇಕಾದರೆ ಕೈಗಾರಿಕೆ ಪ್ರಾಂಗಣ ಮೂಲಕ ಉಪಾಸಪುರ, ಹುರಳಗೆರೆ ಮಾರ್ಗವಾಗಿ ಸುಮಾರು 10 ಕಿ.ಮೀ ಸುತ್ತಿಕೊಂಡು ತಲುಪಬೇಕು. ಇಂತಹ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳು  ಪ್ರಯತ್ನಿಸಿಲ್ಲ .ಮಾಜಿ ರೈಲ್ವೆ ಸಚಿವರಾಗಿದ್ದ ಸಿ.ಕೆ. ಜಾಫರ್‌ ಶರೀಫ್‌ ಅವಧಿಯಲ್ಲಿ ಚಿಕ್ಕಾಪುರ, ಬೊಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೆಳ ಸೇತುವೆ ವಿಸ್ತರಣೆಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.   ಈಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಗಮನ ಹರಿಸಿ ಪರ್ಯಾಯ ವ್ಯವಸ್ಥೆಯಾದರೂ ಮಾಡಬೇಕೆಂಬುದು ಸಾರ್ವಜನಿಕರು ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.