ಬೆಂಗಳೂರು: ನಗರ ರೈಲು ನಿಲ್ದಾಣದ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯ ಹಾಗೂ ಉತ್ತರ ಪ್ಲಾಟ್ಫಾರ್ಮ್ ರಸ್ತೆಗಳ ಬಳಿ ರೈಲ್ವೆಗೆ ಸೇರಿದ ಜಾಗದಲ್ಲಿ `ನಮ್ಮ ಮೆಟ್ರೊ~ ಕಾಮಗಾರಿ ಮುಂದುವರಿಯಲು ಅನುಮತಿ ನೀಡುವಂತೆ ಮೆಟ್ರೊ ರೈಲು ನಿಗಮವು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಲ್ಲಿ ಮತ್ತೊಮ್ಮೆ ಮನವಿ ಮಾಡಿದೆ.

`ರೈಲ್ವೆ ಇಲಾಖೆಯು ಇದೇ 13 ರೊಳಗೆ ಕಾಮಗಾರಿ ನಡೆಸಲು ಅನುಮತಿ ನೀಡದೇ ಹೋದಲ್ಲಿ ಕಾಮಗಾರಿಯನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗುತ್ತದೆ~ ಎಂದು ನಿಗಮವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ.

`ಮೆಟ್ರೊ ಕಾಮಗಾರಿ ನಡೆಸಲು ರೈಲ್ವೆ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಸ್ವಾಧೀನಕ್ಕೆ ತೆಗೆದುಕೊಳ್ಳುವ ಜಮೀನಿಗೆ ಭದ್ರತಾ ಠೇವಣಿಯಾಗಿ ಈಗಾಗಲೇ ಪಾವತಿ ಮಾಡಿರುವ ರೂ 94 ಕೋಟಿ ಜತೆ ಹೆಚ್ಚುವರಿಯಾಗಿ ರೂ 125.70 ಕೋಟಿ ಹಣವನ್ನು ಪಾವತಿ ಮಾಡುವಂತೆ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಯ ಹಿರಿಯ ಎಂಜಿನಿಯರ್ರವರು ತಾಕೀತು ಮಾಡಿದ್ದಾರೆ. ಈ ಹಣ ಪಾವತಿ ಮಾಡದೇ ಇದ್ದರೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ~ ಎಂದು ನಿಗಮವು ತಿಳಿಸಿದೆ.

ಕೇಂದ್ರ ಬಗೆಹರಿಸಲಿ: `ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸಮಾನ ಪಾಲುದಾರಿಕೆ ಹೊಂದಿವೆ. ರೈಲ್ವೆ ಮತ್ತು ನಿಗಮದ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಆ ಮೂಲಕ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು~ ಎಂದು ನಿಗಮವು ಮನವಿ ಮಾಡಿದೆ.

`ರೈಲ್ವೆ ಜಾಗದಲ್ಲಿ ನಿರ್ಮಿಸಲಾಗುವ ಸುರಂಗ ಹಾಗೂ ನೆಲದಡಿಯ ನಿಲ್ದಾಣಗಳಿಗೆ ಮಾಡಿಕೊಳ್ಳುವ ಭೂ ಸ್ವಾಧೀನವು ಕಾಯಂ ಸ್ವರೂಪದ್ದಲ್ಲ. ಮೆಟ್ರೊ ಕಾಮಗಾರಿ ಪೂರ್ಣಗೊಂಡ ನಂತರ ಆ ಜಾಗವನ್ನು ರೈಲ್ವೆ ಇಲಾಖೆಯು ತನಗೆ ಬೇಕಾದಂತೆ ಬಳಸಬಹುದಾಗಿದೆ~ ಎಂದು ನಿಗಮವು ವಿವರಿಸಿದೆ.

`ರಾಜ್ಯ ಸರ್ಕಾರದ ನಿಲುವಿನ ಪ್ರಕಾರ ತಾತ್ಕಾಲಿಕ ಉದ್ದೇಶಕ್ಕಾಗಿ ಬಳಸುವ ಭೂ ಸ್ವಾಧೀನಕ್ಕೆ ನೀಡುವ ಹಣವು ರೂ 44 ಕೋಟಿಗಿಂತ ಹೆಚ್ಚಾಗುವಂತಿಲ್ಲ. ಕೇಂದ್ರ ನಗರಾಭಿವೃದ್ಧಿ ಇಲಾಖೆಯು ಸಹ ಇದೇ ನಿಲುವನ್ನು ಹೊಂದಿದೆ~ ಎಂದು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ತಿಳಿಸಿದ್ದಾರೆ.

`ಎಲ್ಲಕ್ಕಿಂತ ಮುಖ್ಯವಾಗಿ ಮೆಟ್ರೊ ಯೋಜನೆಯ ಅಂದಾಜು ವೆಚ್ಚದಲ್ಲಿ ರೈಲ್ವೆಗೆ ಪಾವತಿ ಮಾಡುವ ಹಣ ಸೇರಿಲ್ಲ. ಹೀಗಾಗಿ ಕೇಂದ್ರದ ನಗರಾಭಿವೃದ್ಧಿ ಇಲಾಖೆ ನೇತೃತ್ವದ ಉನ್ನತಾಧಿಕಾರ ಸಮಿತಿಯು ಆದಷ್ಟು ಬೇಗ ಸಭೆ ಸೇರಿ ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು~ ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.