ಬೆಂಗಳೂರು: ಲಂಚ ಕೇಳುವ ಪೊಲೀ ಸರ ವಿರುದ್ಧ ನಾಗರಿಕರು ನೇರವಾಗಿ ತಮಗೆ ದೂರು ನೀಡಬಹುದು. ಅಂಥ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ಬಸವನಗುಡಿ ಠಾಣೆ ಆವರಣದಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ಹಿರಿಯ ನಾಗರಿಕರ, ಮಹಿಳೆಯರ, ಮಕ್ಕಳ ಸಹಾಯವಾಣಿ ಹಾಗೂ ಸಂಚಾರ ಗಣಕೀಕೃತ ಕೇಂದ್ರ ಗಳ ‘ಸ್ಪಂದನ’ ಸಂಕೀರ್ಣವನ್ನು ಮಂಗಳವಾರ ಉದ್ಘಾಟಿಸಿ ಮಾತ ನಾಡಿ, ‘ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಆದರೆ, ಕೆಲವರು ಮಾಡುವ ಕರ್ತವ್ಯಲೋಪದಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರದಿಂದ ಎಂದಿಗೂ ರಕ್ಷಣೆ ಸಿಗುವುದಿಲ್ಲ. ಲಂಚ ಕೇಳುವ ಸಿಬ್ಬಂದಿ ವಿರುದ್ಧ ಸಾರ್ವ ಜನಿಕರು ಮುಕ್ತವಾಗಿ ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಟ್ಟು ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಮೊದಲ ಸಭೆಯಲ್ಲಿ ಭ್ರಷ್ಟಚಾರದ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಆದರೂ, ಜಾಗ್ರತರಾಗದ ಕೆಲ ಸಿಬ್ಬಂದಿ ನಾಗರಿಕರಿಂದ ಲಂಚ ಪಡೆಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಲೋಕಾ ಯುಕ್ತ ದಾಳಿಯ ಕುರಿತು ಪ್ರಕಟವಾಗುವ ಸುದ್ದಿಗಳನ್ನು ಓದಿದಾಗ ಇಲಾಖೆಯ ಬಗ್ಗೆ ಬೇಸರವಾಗುತ್ತದೆ’ ಎಂದು ರೂ10 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಹಲಸೂರು ಗೇಟ್ ಇನ್ ಸ್ಪೆಕ್ಟರ್ ಸಿ.ವಿ.ದೀಪಕ್ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದರು.

‘ಸರ್ಕಾರ ಸೂಚಿಸಿದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿ ಸುವ ಕ್ಲಬ್ಗಳ ಮಾಲೀಕರು ಯಾರಿ ಗೂ ಹೆದರಬೇಕಿಲ್ಲ, ನನ್ನನ್ನೂ ಸೇರಿ ದಂತೆ ಸರ್ಕಾರದ ಯಾರೊಬ್ಬರಿಗೂ ಹಫ್ತಾ ಕೊಡಬೇಕಾದ ಅಗತ್ಯವಿಲ್ಲ. ಅಂತಹ ಕೀಳು ಮಟ್ಟದ ರಾಜಕೀಯ ನಡೆಸುವ ಅನಿವಾರ್ಯತೆಯೂ ನಮಗಿಲ್ಲ’ ಎಂದು ಅವರು ಹೇಳಿದರು.

ಕೆಲವರು ರಾಜಕಾರಣಿಗಳ ಹೆಸರು ಹೇಳಿಕೊಂಡು ಕ್ಲಬ್ಗಳ ಮಾಲೀಕರಿಂದ ಲಂಚ ಬೇಡುತ್ತಿದ್ದಾರೆ. ಇದು ನಾಗರಿಕರ ಗಮನದಲ್ಲಿರಬೇಕು. ಪೊಲೀಸರು ಇನ್ನಾದರೂ ವೃತ್ತಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು’ ಎಂದು ಜಾರ್ಜ್ ಚಾಟಿ ಬೀಸಿದರು.

ತನಿಖೆ ಪೂರ್ಣಗೊಳ್ಳದೆ ವರ್ಗಾವಣೆ ಇಲ್ಲ: ‘ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರನ್ನು, ತನಿಖೆ ಪೂರ್ಣಗೊಳಿಸುವವರೆಗೂ ವರ್ಗಾವಣೆ ಮಾಡಬಾರದು ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ‘ಪ್ರಜಾವಾಣಿ’ ಗೆ ತಿಳಿಸಿದರು.

ವರ್ಗಾವಣೆ ಬಯಸದ ಕೆಲ ಅಧಿಕಾರಿಗಳಿಗೆ ಈ ನಿರ್ಣಯ ಸಂತಸ ತರಬಹುದು. ಆದರೆ, ಸಕಾಲಕ್ಕೆ ತನಿಖೆ ಪೂರ್ಣಗೊಳ್ಳದಿದ್ದರೂ ತನಿಖಾಧಿಕಾರಿಗಳು ಅದಕ್ಕಿಂತ ಹೆಚ್ಚಿನ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಲೋಕಾಯುಕ್ತ ಪೊಲೀಸರನ್ನು ವರ್ಗಾವಣೆ ಮಾಡುವಾಗ ಹಿರಿಯ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯಲಾಗುತ್ತಿದೆ. ಅದೇ ಮಾದರಿಯಲ್ಲಿ ಅಪರಾಧ ವಿಭಾಗದ ಪೊಲೀಸರನ್ನು ವರ್ಗಾವಣೆ ಮಾಡುವಾಗಲೂ ಹಿರಿಯ ಅಧಿಕಾರಿಗಳಿಂದ ಎನ್ಒಸಿ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.