ಭಾರತದಲ್ಲಿ ಹಾಕಿಗೆ ಸಂಬಂಧಿಸಿದಂತೆ ಇಂತಹ ದುರಂತವನ್ನು ನೋಡುವ ಪ್ರಸಂಗ ಬರುತ್ತದೆಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಬೆಲ್ಜಿಯಂ ಎದುರಿನ ಪಂದ್ಯದಲ್ಲಿ ಭಾರತ ಸೋತಿದ್ದು ಕಂಡಾಗ ನನಗೆ ಅತೀವ ದುಃಖ ಉಂಟಾಯಿತು.

ನಾನಷ್ಟೇ ಅಲ್ಲ, ಅಂತರರಾಷ್ಟ್ರೀಯ ಹಾಕಿಯಲ್ಲಿ ಈ ನಾಡನ್ನು ಪ್ರತಿನಿಧಿಸಿದ ನೂರಾರು ಹಿರಿಯ ಆಟಗಾರರು ತುಂಬಾ ನೊಂದುಕೊಂಡಿರುತ್ತಾರೆ ಎನ್ನುವುದೂ ನನಗೆ ಗೊತ್ತು.ಈ ನಾಡಿನ ಹಾಕಿ ಪರಂಪರೆಯನ್ನು ಯೋಚಿಸುತ್ತಾ ಪ್ರಸಕ್ತ ಭಾರತ ತಂಡವನ್ನು ಗಮನಿಸಿದಾಗ ಇದು ನಮ್ಮ ರಾಷ್ಟ್ರೀಯ ತಂಡ ಅಲ್ಲವೇ ಅಲ್ಲ ಎಂದೆನಿಸುವುದು ಸಹಜ. ಹಿಂದೆಂದೂ ಒಲಿಂಪಿಕ್ಸ್ನಲ್ಲಿ ಭಾರತ ಈ ಮಟ್ಟಿಗಿನ ಕಳಪೆ ಆಟ ಆಡಿದ್ದಿಲ್ಲ. ಇದು ಭಾರತೀಯರೆಲ್ಲರೂ ನಾಚಿ ತಲೆತಗ್ಗಿಸುವಂತಹ ಸಂಗತಿಯಾಗಿದೆ.

ಕ್ರೀಡೆಗೆ ಸಂಬಂಧಿಸಿದಂತೆ ಇದೊಂದು `ರಾಷ್ಟ್ರೀಯ ದುರಂತ~ ಎಂದು ನಾವು ಗಂಭೀರವಾಗಿಯೇ ಪರಿಗಣಿಸಬೇಕಿದೆ. ಇಂತಹ ಹೀನಾಯ ಸೋಲಿಗೆ ಕಾರಣವೇನು ಎಂಬ ಬಗ್ಗೆ ಕೇವಲ ಆತ್ಮವಿಮರ್ಶೆಯಷ್ಟೇ ಸಾಲದು. ತಪ್ಪು ಎಲ್ಲಿ ಆಗಿದೆ ಎಂಬುದನ್ನು ಗುರುತಿಸಿ ಅಲ್ಲಿಗೆ ಮದ್ದು ಎರೆಯಲೇ ಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಹಾಕಿ ಕ್ರೀಡೆ ಪ್ರಪಾತಕ್ಕೆ ಬೀಳಲಿದೆ.

ಲಂಡನ್ಗೆ ತೆರಳಿದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿಯೇ ಎಡವಟ್ಟುಗಳಾಗಿದ್ದವು. ಆಯ್ಕೆ ಸಂದರ್ಭದಲ್ಲಿಯೇ ವಿವಾದ ಉಂಟಾಗಿತ್ತು. ಈ ಋತುವಿನ ಅತ್ಯುತ್ತಮ ಆಟಗಾರರನ್ನು ಕೈಬಿಡಲಾದ ಸುದ್ದಿ ಗೊತ್ತಾದಾಗಲೇ ನನಗೆ ಆತಂಕವಾಗಿತ್ತು.

ಆಸ್ಟ್ರೇಲಿಯಾದ ಮೈಕೆಲ್ ನಾಬ್ಸ್ ಬಗ್ಗೆ ನನಗೆ ಯಾವುದೇ ಅಸಹನೆ ಇಲ್ಲ. ಆದರೆ ಅವರು ಉನ್ನತ ಪರಂಪರೆ ಇರುವ ಭಾರತದಂತಹ ತಂಡಕ್ಕೆ ತರಬೇತಿ ನೀಡಲು ಅರ್ಹ ವ್ಯಕ್ತಿಯಂತೂ ಆಗಿರಲಿಲ್ಲ. ಅಂತಹ ಯಾವುದೇ ದಟ್ಟ ಅನುಭವವೂ ಅವರಿಗಿರಲಿಲ್ಲ. ಆದರೆ ಅವರನ್ನೇ ಕೋಚ್ ಆಗಿ ನೇಮಕ ಮಾಡಲಾಯಿತು. ಭಾರತ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತ ಒಲಿಂಪಿಕ್ ಸಂಸ್ಥೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವೇನಿರಲಿಲ್ಲ.

ಪರಿಣತ ಹಿರಿಯ ಆಟಗಾರರ ಸಮಿತಿಯೊಂದನ್ನು ನೇಮಿಸಿ ಅವರ ಸಲಹೆಯ ಮೇರೆಗೆ ತರಬೇತಿದಾರರನ್ನು ನೇಮಕ ಮಾಡಬಹುದಿತ್ತು. ಇಂತಹ ಕೆಲಸವೂ ಆಗ ನಡೆಯಲಿಲ್ಲ.ಪ್ರಸಕ್ತ ತಂಡ ಉತ್ತಮ ರೀತಿಯಲ್ಲಿ ತರಬೇತುಗೊಳ್ಳಲಿಲ್ಲ ಎನ್ನುವುದಂತೂ ಸ್ಪಷ್ಟ. ಆಟಗಾರರಲ್ಲಿ ಅರ್ಪಣಾ ಮನೋಭಾವ ಇರಲಿಲ್ಲ ಎಂಬುದು ಎದ್ದು ಕಾಣುತಿತ್ತು. ಭಾರತ ತಂಡದ ಪ್ರಸಕ್ತ ದುರವಸ್ಥೆಗೆ ಇಂತಹ ಹತ್ತಾರು ಕಾರಣಗಳನ್ನು ಕೊಡಬಹುದು. ಆದರೆ ಅದರಿಂದ ಸಾಧಿಸುವಂತಹದ್ದೇನೂ ಇಲ್ಲ.

ಭಾರತ ಹಾಕಿ ಫೆಡರೇಷನ್ ಮತ್ತು ಹಾಕಿ ಇಂಡಿಯ ನಡುವಣ ಕಿತ್ತಾಟದಿಂದ ಈ ನಾಡಿನಲ್ಲಿ ಹಾಕಿ ಬಹಳಷ್ಟು ಸೊರಗಿದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಈ ಗೊಂದಲವನ್ನು ನಿವಾರಿಸುವುದಕ್ಕಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಭಾರತದೊಳಗೆ ಕಾಲಿಟ್ಟಿತು.

ಇದು ಅಗತ್ಯವಿತ್ತೇ ? ನಮ್ಮಳಗಿನ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬಹುದಿತ್ತಲ್ಲಾ. ಇನ್ನಾದರೂ ಸರ್ಕಾರವೇ ಆಸಕ್ತಿ ವಹಿಸಿ ಒಂದೇ ಪ್ರಬಲ ಹಾಕಿ ಸಂಸ್ಥೆ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಹಾಕಿ ಕ್ರೀಡೆ `ಲಂಡನ್ ಒಲಿಂಪಿಕ್ಸ್ನಲ್ಲಿ ಸಂಭವಿಸಿದಂತಹ ಅಪಾಯಗಳಿಗೆ ಸಿಲುಕಿ ಜರ್ಜರಿತಗೊಳ್ಳುವುದಂತು ನಿಜ. ಹಾಗಾಗದಿರಲಿ ಎಂದು ಹಾರೈಸುತ್ತೇನೆ.

ವಿದೇಶಗಳಲ್ಲಿ ಕ್ರೀಡಾ ಚಟುವಟಿಕೆಗಳು ಎತ್ತರಕ್ಕೇರುತ್ತಿದ್ದರೆ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಕಳಾಹೀನವಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚತ್ತುಕೊಳ್ಳಬೇಕಿದೆ. ಇಲ್ಲಿ ಕ್ರೀಡಾಡಳಿತ ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರೀಡಾಡಳಿತಕ್ಕೆ ಸಂಬಂಧಿಸಿದಂತೆ ಭಾರತ ಆಡಳಿತ ಸೇವೆಯ ಮೂಲಕವೇ ಕ್ರೀಡಾ ಪರಿಣತರನ್ನು ಆಯ್ಕೆ ಮಾಡುವ ವ್ಯವಸ್ಥೆ ಬರಬೇಕಿದೆ.

ನಿಜವಾಯಿತು ಭವಿಷ್ಯ...!
ಭಾರತ ಹಾಕಿ ತಂಡ ಪ್ರಸಕ್ತ ಲಂಡನ್ ಒಲಿಂಪಿಕ್ಸ್ನಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಸೋತಿದೆ. `ಈ ತಂಡ ಲಂಡನ್ನಲ್ಲಿ ಕನಿಷ್ಠ ಆರರ ಒಳಗಿನ ಸ್ಥಾನ ಗಳಿಸಲು ಸಾಧ್ಯವೇ ಇಲ್ಲ~ ಎಂದು ಎಂ.ಪಿ.ಗಣೇಶ್ ಅವರು ನಾಲ್ಕು ತಿಂಗಳ ಹಿಂದೆಯೇ ಅನಿಸಿಕೆ ವ್ಯಕ್ತ ಪಡಿಸಿದ್ದು ಏಪ್ರಿಲ್ನಲ್ಲಿ `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡಿತ್ತು. ಇದೀಗ ಅವರು ಮತ್ತೆ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಬರೆದಿದ್ದಾರೆ

ಜ ಎಂ.ಪಿ. ಗಣೇಶ್
ಲೇಖಕರು 1972ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದಲ್ಲಿ ಆಡಿದ್ದರು. 1980ರ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಭಾರತ ಹಾಕಿ ತಂಡದ ಕೋಚ್ಗಳಲ್ಲಿ ಒಬ್ಬರಾಗಿದ್ದರು. ಎಪ್ಪತ್ತರ ದಶಕದಲ್ಲಿ ಕೆಲವು ಅಂತರ ರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.