ಮಂಗಳವಾರ, ಏಪ್ರಿಲ್ 13, 2021
32 °C

ಲಂಡನ್ ಮೇಯರ್ ತ್ರಿಶಂಕು ಸ್ಥಿತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ ಮೇಯರ್ ತ್ರಿಶಂಕು ಸ್ಥಿತಿ!

ಲಂಡನ್ (ಐಎಎನ್‌ಎಸ್): ಒಲಿಂಪಿಕ್ಸ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ  `ರೋಪ್ ವೇ~ ಮೂಲಕ ಇಳಿಯುತ್ತಿದ್ದ ಲಂಡನ್ ಮೇಯರ್ ಬೋರಿಸ್ ಜಾನ್‌ಸನ್ ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡು ಫಜೀತಿ ಪಟ್ಟ ಪ್ರಸಂಗ ಬುಧವಾರ ಸಂಭವಿಸಿದೆ.ಈಸ್ಟ್ ಲಂಡನ್ನಿನ ವಿಕ್ಟೋರಿಯಾ ಪಾರ್ಕ್‌ನಲ್ಲಿ ಆಯೋಜಿತವಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್, ಒಂದು ಸಾವಿರ ಅಡಿ ಉದ್ದದ `ರೋಪ್ ವೇ~ಯಲ್ಲಿ ಎರಡು ಕೈಗಳಲ್ಲಿ ಬ್ರಿಟನ್ ರಾಷ್ಟ್ರ ಧ್ವಜ ಹಿಡಿದುಕೊಂಡು ಜಾರುತ್ತಿದ್ದರು.ಮಾರ್ಗ ಮಧ್ಯೆ `ರೋಪ್ ವೇ~ನ ಜಾರುಕ ಕೆಟ್ಟು ನಿಂತಿತು. ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡ ಮೇಯರ್, `ಹಗ್ಗ ಕೊಡಿ, ಏಣಿ ತನ್ನಿ~ ಎಂದು ಜೋರಾಗಿ ಕೂಗಿಕೊಂಡರು. ಈ ಪ್ರಸಂಗ ಕಂಡ ನೆರೆದಿದ್ದ ಜನರು ಜೋರು ದನಿ ಮಾಡಿ ನಗತೊಡಗಿದರು. ನಂತರ ಮೇಯರ್ ಅವರನ್ನು ಮತ್ತೆ ಮೇಲಕ್ಕೆ ಎಳೆದುಕೊಳ್ಳಲಾಯಿತು.ಮೇಯರ್ ಅವರ ತ್ರಿಶಂಕು ಸ್ಥಿತಿಯ ಬಗ್ಗೆ ಟ್ವಿಟರ್‌ನಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.