ನವದೆಹಲಿ (ಪಿಟಿಐ /ಐಎಎನ್ಎಸ್): ಭಾರತದ ಜಿ.ಲಕ್ಷ್ಮಣನ್ ಮತ್ತು ಪ್ರೀಜಾ ಶ್ರೀಧರನ್ ಭಾನುವಾರ ಇಲ್ಲಿ ನಡೆದ ದೆಹಲಿ ಹಾಫ್ ಮ್ಯಾರಥಾನ್ನ ಭಾರತದ ಸ್ಪರ್ಧಿಗಳ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಇಥಿಯೋಪಿಯಾದ ಅತ್ಸೆಡು ಸೇಗೆ ಪುರುಷರ ವಿಭಾಗದಲ್ಲಿ ನೂತನ ದಾಖಲೆ ಬರೆಯುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟರು.

ಅತ್ಸೆಡು 59 ನಿಮಿಷ 12 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ 2008 ರಲ್ಲಿ ಡೆರಿಬಾ ಮೆರ್ಗಾ ನಿರ್ಮಿಸಿದ್ದ (59.15 ಸೆ) ದಾಖಲೆಯನ್ನು ಅಳಿಸಿ ಹಾಕಿದರು.

ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಫ್ಲಾರೆನ್ಸ್ ಕಿಪ್ಲಾಗಾಟ್ 1ಗಂಟೆ 07ನಿಮಿಷ 58ಸೆಕೆಂಡ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಭಾರತದ ಸ್ಪರ್ಧಿಗಳ ವಿಭಾಗದಲ್ಲಿ ಜಿ.ಲಕ್ಷ್ಮಣನ್ 1ಗ. 4ನಿ. 44ಸೆ ಗಳಲ್ಲಿ ಗುರಿ ಮುಟ್ಟಿ ಅಗ್ರಸ್ಥಾನ ಪಡೆದರು. ಒಟ್ಟಾರೆ 15ನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪ್ರೀಜಾ ಶ್ರೀಧರನ್ 1ಗ. 20ನಿ. 04ಸೆಕೆಂಡ್ ಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ ಒಟ್ಟಾರೆ 15 ನೇ ಮತ್ತು ಭಾರತದ ಪ್ರಥಮ ಓಟಗಾರ್ತಿಯಾಗಿ ಹೊರಹೊಮ್ಮಿದರು.

ಪುರುಷ ಹಾಗೂ ಮಹಿಳಾ ವಿಭಾಗದ ವಿಜೇತ ಸ್ಪರ್ಧಿಗಳು ರೂ2.5 ಲಕ್ಷ ಮತ್ತು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳು ಕ್ರಮವಾಗಿ ರೂ2 ಮತ್ತು ರೂ1.5 ಲಕ್ಷ ಬಹುಮಾನ ಮೊತ್ತ ತಮ್ಮದಾಗಿಸಿಕೊಂಡರು.

ಮ್ಯಾರಥಾನ್ನಲ್ಲಿ ಬಾಲಿವುಡ್ ತಾರೆಗಳಾದ ಬಿಪಾಷಾ ಬಸು, ರಾಹುಲ್ ಬೋಸ್ ಮತ್ತು ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಪಾಲ್ಗೊಂಡು ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಫಲಿತಾಂಶ: ಭಾರತದ ಪರುಷರ ವಿಭಾಗ: ಜಿ.ಲಕ್ಷ್ಮಣನ್ (01:04:44)–1, ಖೇತ ರಾಮ್ (01:04:49)–2, ರತ್ತಿರಾಮ್ ಸೈನಿ (01:04:51)–3

ಭಾರತದ ಮಹಿಳೆಯರ ವಿಭಾಗ: ಪ್ರೀಜಾ ಶ್ರೀಧರನ್ (01:20:04)–1, ಕವಿತಾ ರಾವುತ್ (01:20:06)–2, ಲಲಿತಾ ಬಬ್ಬರ್ (01:20: 09)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.