ಲಖನೌ, ನವದೆಹಲಿ (ಪಿಟಿಐ): ಪಕ್ಷದ ನಾಯಕರಿಗೆ ಟಿಕೆಟ್ ನೀಡಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆಯೇ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗಾಗಿ ಲಖನೌ ಲೋಕಸಭಾ ಸ್ಥಾನ ನೀಡಲು ಸಿದ್ಧವಿರುವುದಾಗಿ ಸಂಸದ ಲಾಲ್ಜಿ ಟಂಡನ್ ಹೇಳಿದ್ದಾರೆ.

ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಇದೇ ರೀತಿ ಬೆಂಬಲ ಕೊಡಲು ಅವರು ಹಿಂದೇಟು ಹಾಕಿದ್ದಾರೆ.

‘ಚುನಾವಣೆಗೆ ಸ್ಪರ್ಧಿಸುವುದು ನನ್ನ ಜೀವನದ ಗುರಿಯಾಗಿರಲಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮೋದಿ ಅವರು ಲಖನೌದಿಂದ ಸ್ಪರ್ಧಿಸುತ್ತಾರೆ ಎಂದಾದರೆ, ಅವರ ಗೆಲುವಿಗೆ ಬೇಕಾದ ಎಲ್ಲಾ ಯತ್ನಗಳನ್ನು ಮಾಡುತ್ತೇನೆ’ ಎಂದು ಟಂಡನ್ ಹೇಳಿದ್ದಾರೆ.

ಈ ಸಂಬಂಧ, ಇದುವರೆಗೆ ಪಕ್ಷದಿಂದ ಯಾವುದೇ ಪ್ರಸ್ತಾವನೆ ತಮಗೆ ಬಂದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಲಖನೌ ಲೋಕಸಭಾ ಕ್ಷೇತ್ರಕ್ಕೆ ರಾಜನಾಥ್ ಸಿಂಗ್ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಈ ವಿಷಯ ಮಾಧ್ಯಮದಿಂದ ತಿಳಿಯಿತು ಎಂದು ಅವರು ಹೇಳಿದ್ದಾರೆ.

‘ಅಂತಿಮ ನಿರ್ಧಾರ ಸಿಇಸಿಯದ್ದು’: ವಾರಾಣಸಿ ಮತ್ತು ಲಖನೌ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಉಂಟಾಗಿರುವ ವಿವಾದವನ್ನು ಶಮನಗೊಳಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸೋಮವಾರ ಯತ್ನಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ರಾಜನಾಥ್ ಸಿಂಗ್ ಅವರಿಗಾಗಿ ಪಕ್ಷದ ಹಿರಿಯ ಮುಖಂಡರಾದ ಮುರಳಿ ಮನೋಹರ ಜೋಶಿ ಹಾಗೂ ಸಂಸದ ಲಾಲ್ಜಿ ಟಂಡನ್ ಅವರು ತಮ್ಮ ಕ್ಷೇತ್ರಗಳಾದ ವಾರಾಣಸಿ ಮತ್ತು ಲಖನೌಗಳನ್ನು ತೆರವುಗೊಳಿಸಬೇಕಾಗಬಹುದು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬಂದಿವೆ.

ಈ ಬಗ್ಗೆ ಜೋಶಿ ಹಾಗೂ ಟಂಡನ್ ಅಸಮಾಧಾನಗೊಂಡಿದ್ದಾರೆ ಎಂದೂ ಹೇಳಲಾಗಿದೆ.

‘ನನ್ನ ಅಭ್ಯರ್ಥಿತನದ ಬಗೆಗಿನ ನಿರ್ಧಾರವನ್ನೂ ಸಿಇಸಿ ಕೈಗೊಳ್ಳಲಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾರೊಬ್ಬರಿಗೂ ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಸಂಬಂಧ ನಾನೇನು ಹೇಳ-ಲಾರೆ’ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.