ಸೋಮವಾರ, ಜೂನ್ 21, 2021
23 °C

ಲಾರಿ ಬಿಡಿಭಾಗ ಕತ್ತರಿಸಿ ಸಂಚಾರಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ಇಲ್ಲಿಯ ಕನಕದಾಸ ವೃತ್ತ­ದಲ್ಲಿ ಲಾರಿಯ ಮುಂದಿನ ಬಿಡಿಭಾಗ (ಆ್ಯಕ್ಸೆಲ್) ಕತ್ತರಿಸಿದ್ದರಿಂದ ಬುಧವಾರ ನಸುನಿಕ ಜಾವದಿಂದ ಸಂಜೆಯವರೆಗೆ ಮಧ್ಯೆ, ಮಧ್ಯೆ ಸಂಚಾರಕ್ಕೆ ತೀವ್ರವಾದ ತೊಂದರೆಯಾದ ಘಟನೆ ಬುಧವಾರ ಇಲ್ಲಿ ಜರುಗಿತು.ಸದಾ ಜನನಿಬಿಡವಾಗಿರುವ ಕನಕ­ದಾಸ ವೃತ್ತದಲ್ಲಿ ಲಾರಿ ರಸ್ತೆಗೆ ಚಾಚಿ­ಕೊಂಡು ನಿಂತಿದ್ದರಿಂದ, ರಸ್ತೆಯವರೆಗೆ ಬ್ಯಾನರ್ ಕಟ್ಟಲು ಬೊಂಬುಗಳನ್ನು ಹಾಕಿದ್ದರಿಂದ, ನಿಯಂತ್ರಣಕ್ಕೆ ಪೊಲೀಸರು ಇರದಿದ್ದರಿಂದ ಇಡೀ ದಿನ ಸಂಚಾರಕ್ಕೆ ತೊಂದರೆಯಾಗಿ, ಟ್ರಾಫಿಕ್ ಜಾಮ್ ಆಗುವುದು ಸಹಜವಾಗಿತ್ತು.ಶಾಲೆ ಬಿಟ್ಟ ಸಮಯದಲ್ಲಿ ಈ ಸ್ಥಳದಲ್ಲಿ ಭಾರಿ ಗಾತ್ರದ ಲಾರಿ ಹೋಗು­ವಾಗ ಟ್ರಾಫಿಕ್ ಜಾಮ್ ಆಗಿ ಸುಮಾರು ಒಂದು ಕಿ.ಮೀ.ವರೆಗೆ ಎರಡೂ ಭಾಗದಲ್ಲಿ ವಾಹನಗಳು ಸಾಲು­ಗಟ್ಟಿ ನಿಂತಿದ್ದವು. ಒಂದು ತಾಸಿಗೂ ಅಧಿಕ ಅವಧಿಯವರೆಗೆ ವಾಹ­ನ­ಗಳು ನಿಂತ ಜಾಗೆಯಿಂದ ಕದಲಲಿಲ್ಲ.ಶಾಲೆಯಿಂದ ಮಕ್ಕಳನ್ನು ಕರೆದು­ಕೊಂಡು ಬರುವವರು, ಶಾಲಾ ವಾಹನ­ಗಳು ಎಲ್ಲೆಂದರಲ್ಲಿ ನಿಂತಿದ್ದರಿಂದ ಪಾಲಕರು ಆತಂಕಗೊಂಡು ಮಕ್ಕಳ ಹುಡುಕಾಟದಲ್ಲಿ ನಿರತರಾಗಿರುವುದು ಕಂಡುಬಂತು. ಕೆಲ ವಾಹನಗಳು ಪರ್ಯಾಯ ಮಾರ್ಗವಾಗಿ ಸುರಕ್ಷಿತ­ವಾಗಿ ಪಾರಾದವು.ಒಬ್ಬ ಪೊಲೀಸ್ ಪೇದೆಯನ್ನು ನಿಯೋ­ಜಿಸಲಾಗಿ­ತ್ತಾದರೂ ಭಾರಿ ಪ್ರಮಾ­ಣದ ವಾಹನ ಸಂಚಾರ ನಿಯಂ­ತ್ರಿ­ಸುವುದಕ್ಕೆ ಹರಸಾಹಸ ಪಡಬೇಕಾ­ಯಿತು. ಪ್ರತಿದಿನವೂ ಖಾಸಗಿ ವಾಹನ­ಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದು, ಸಂಚಾರಕ್ಕೆ ತೊಂದರೆಯಾಗುವುದು, ಟ್ರಾಫಿಕ್ ಜಾಮ್ ಆಗುವುದು, ವಾಹನ­ಗಳವರೆ ಸ್ವನಿಯಂತ್ರಣ ಮಾಡಿಕೊಂಡು ಹೋಗುವುದು, ಸಿಬ್ಬಂದಿ ಕೊರತೆ ಎಂದು ಪೊಲೀಸ್ ಅಧಿಕಾರಿಗಳು ಸಿದ್ಧ ಉತ್ತರ ನೀಡುವುದು ಸಾಮಾನ್ಯ­ವಾಗಿದೆ.ರಸ್ತೆಯವರೆಗೆ ವ್ಯಾಪಾರಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಂ­ಡಿದ್ದರೂ, ಮುಖ್ಯರಸ್ತೆಗೆ ಫ್ಲೆಕ್ಸ್, ಬ್ಯಾನ­ರ್‌­­ಗಾಗಿ ಬೊಂಬು, ಬಲ್ಲೀಸ್‌­ಗಳನ್ನು ಹಾಕಿದ್ದರಿಂದ ಸಂಚಾರಕ್ಕೆ ಸದಾ ತೊಂದ­ರೆಯಾಗುತ್ತಲೆ ಇರುತ್ತದೆ. ಸಂಬಂ­­ಧಿಸಿದವರು ನಿಯಂತ್ರಣ­ದತ್ತ ಗಮ­ನಹರಿಸಿ, ಕ್ರಮಕ್ಕೆ ಮುಂದಾಗಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.