ಗುರುವಾರ , ಮೇ 13, 2021
16 °C

ಲೈಂಗಿಕ ಕಿರುಕಳ ಆರೋಪ: ಪಿಸಿಬಿಗೆ ವರದಿ ಸಲ್ಲಿಸಿದ ತನಿಖಾ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಕ್ರಿಕೆಟ್ ಆಟಗಾರ್ತಿಯರು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ತನಿಖೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೇಮಿಸಿದ್ದ ತನಿಖಾ ಸಮಿತಿ, ಉನ್ನತ ಅಧಿಕಾರಿಗಳಿಗೆ ತನ್ನ ವರದಿಯನ್ನು ಸಲ್ಲಿಸಿದೆ.`ಆರೋಪ ಮಾಡಿದ್ದ ಎಲ್ಲಾ ಯುವತಿಯರ ಹೇಳಿಕೆ ಪಡೆದಿದ್ದೇವೆ. ಮುಲ್ತಾನ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಸೇರಿದಂತೆ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ' ಎಂದು ಮೂರು ಸದಸ್ಯರ ತನಿಖಾ ಸಮಿತಿಯ ನೇತೃತ್ವ ವಹಿಸಿದ್ದ ಆಯೇಷಾ ಅಷರ್ ತಿಳಿಸಿದ್ದಾರೆ.ತರಬೇತಿ ಶಿಬಿರದ ವೇಳೆ ಮುಲ್ತಾನ್ ಕ್ರಿಕೆಟ್ ಕ್ಲಬ್‌ನ ಕೆಲ ಅಧಿಕಾರಿಗಳು, ಕೋಚ್‌ಗಳು ತಮ್ಮಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಮುಲ್ತಾನ್ ಮೂಲದ ಐವರು ಯುವತಿಯರು ವಾಹಿನಿಯೊಂದರಲ್ಲಿ ಆರೋಪ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.