ಮಂಗಳವಾರ, ಜನವರಿ 21, 2020
27 °C

ಲೈಂಗಿಕ ಕಿರುಕುಳ: ಆರೋಪಿ ಸಾಯಿ ಸೂರತ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರತ್‌ (ಪಿಟಿಐ): 2002ರಿಂದ 2005ರ ವರೆಗೂ ತಮ್ಮ ಆಶ್ರಮದಲ್ಲಿ ಇಲ್ಲಿನ ಮಹಿಳೆಯೊಬ್ಬರಿಗೆ  ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್‌  ಬಾಪು ಅವರ ಪುತ್ರ  ನಾರಾಯಣ‌ ಸಾಯಿಯನ್ನು  ಗುರುವಾರ ದೆಹಲಿಯಿಂದ ಇಲ್ಲಿಗೆ ಕರೆತರಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಯಿ ಹಾಗೂ ಅವನ ಆಪ್ತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲು ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವ ಸಾಧ್ಯತೆಗಳಿವೆ.

‘ನಾರಾಯಣ‌ ಸಾಯಿ  ಹಾಗೂ ಅವರ ಆಪ್ತರನ್ನು ವಶಕ್ಕೆ ಪಡೆದು ಇಂದು (ಗುರುವಾರ) ಬೆಳಿಗ್ಗೆ ಸೂರತ್‌ಗೆ ಕರೆತರಲಾಗಿದೆ’ ಎಂದು ಪೊಲೀಸ್‌ ಆಯುಕ್ತ ರಾಕೇಶ್‌ ಅಸ್ಥನಾ ತಿಳಿಸಿದ್ದಾರೆ.

ಬುಧವಾರವಷ್ಟೇ ರೋಹಿನಿಯಲ್ಲಿರುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಸಾಯಿ ಹಾಗೂ ಅವನ ಇಬ್ಬರು ಆಪ್ತರನ್ನು ಗುಜರಾತ್‌ಗೆ ಕರೆತರಲು ಪೊಲೀಸರಿಗೆ ಅನುಮತಿ ನೀಡಿತ್ತು.

ಪ್ರತಿಕ್ರಿಯಿಸಿ (+)