ರಾಣೆಬೆನ್ನೂರು: ಇಲ್ಲಿನ ಮಾರುತಿನಗರದಲ್ಲಿ ವಾಸವಾಗಿರುವ ಲಕ್ಷ್ಮೇಶ್ವರದ ಪುರಸಭೆಯ ಮುಖ್ಯಾಧಿಕಾರಿ ಹನುಮಂತಪ್ಪ ಭಜಕ್ಕನವರ ಅವರ ನಿವಾಸದ ಮೇಲೆ ಗುರುವಾರ ಬೆಳಿಗ್ಗೆ 6 ಗಂಟೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹನುಮಂತಪ್ಪ ಅಕ್ರಮವಾಗಿ ಹೊಂದಿರುವ ಸುಮಾರು 32 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತದ ಆಸ್ತಿ, ನಗದು ಹಣ ಮತ್ತು ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಒಡವೆಗಳನ್ನು ಪತ್ತೆ ಹಚ್ಚಿದ್ದಾರೆ.

ಗುರುವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಹನುಮಂತಪ್ಪ ಅವರಿಗೆ ಸೇರಿದ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಶಿಗ್ಗಾಂವ, ಲಕ್ಷ್ಮೇಶ್ವರ, ಕುಮಾರಪಟ್ಟಣ, ರಾಣೆಬೆನ್ನೂರಿನಲ್ಲಿ ನಾಲ್ಕು ಕಡೆ ಸೇರಿದಂತೆ ಒಟ್ಟು ಏಳು ಕಡೆ ಒಂದೇ ದಿನ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಮುಖ್ಯಾಧಿಕಾರಿಯ 1988ರಿಂದ ಇಲ್ಲಿಯವರೆಗಿನ ಸಂಬಳದ ಒಟ್ಟು ಆದಾಯ 25 ಲಕ್ಷ ರೂಪಾಯಿ ಇದ್ದು, ಅವರು 32 ಲಕ್ಷ ರೂಪಾಯಿಗೂ ಹೆಚ್ಚಿನ ಅಕ್ರಮ ಆಸ್ತಿ-ಪಾಸ್ತಿ ಹೊಂದಿದ್ದಾರೆ ಎಂದು ದಾವಣಗೆರೆ ಲೋಕಾಯುಕ್ತ ವರಿಷ್ಠಾಧಿಕಾರಿ ಎಸ್.ಪಿ. ಕಂಬಾರ ತಿಳಿಸಿದರು.

ಮುಖ್ಯಾಧಿಕಾರಿ ವಾಸವಾಗಿರುವ ಮನೆಯಲ್ಲಿ ಸಂಗ್ರಹಿಸಿದ್ದ ಆಸ್ತಿ ಪಾಸ್ತಿ ಮತ್ತು ಒಡವೆ, ಬೃಹತ್ ಬಂಗಲೆಗಳ ಅಗತ್ಯ ದಾಖಲೆಗಳು ಮತ್ತು ವಿವಿಧ ಬ್ಯಾಂಕ್ ಖಾತೆಗಳ ಪಾಸ್ ಪುಸ್ತಕಗಳು ಮತ್ತು ಎಟಿಎಂ ಕಾರ್ಡುಗಳು, ಎಲ್ಐಸಿ, ಬಜಾಜ್ ಅಲಿಂಜ್ ಇನ್ಶೂರೆನ್ಸ್ನ ಇತರೆ ಬಾಂಡ್ಗಳನ್ನು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ. ನಗರದಲ್ಲಿ 50 ಲಕ್ಷ ರೂಪಾಯಿಗಳಿಗೂ ಹೆಚ್ಚು ಬೆಲೆ ಬಾಳುವ ಮನೆ ಹೊಂದಿದ್ದಾರೆ. ಹಣಗಿ ಎಂಬುವರ ಹೆಸರಿನಲ್ಲಿರುವ ಬೇನಾಮಿ ನಿವೇಶನದಲ್ಲಿ 40 ಲಕ್ಷರೂಗಳಿಗಿಂತ ಅಧಿಕ ಮೊತ್ತದ ಹೊಸ ಬಂಗಲೆ ಕಟ್ಟಡದ ಕಾಮಗಾರಿ ನಡೆದಿರುವುದು ತಿಳಿದು ಬಂದಿದೆ ಎಂದರು.

ಅವರ ವಾಸದ ಮನೆ ಅಕ್ಕ ಪಕ್ಕದಲ್ಲಿಯೇ ಅವರ ತಾಯಿ ಗಂಗವ್ವ ಅವರ ವಾಸದ ಮನೆ ಮತ್ತು ಖಾಲಿ ಪ್ಲಾಟುಗಳ ಮಾಹಿತಿ, ಕುಮಾರಪಟ್ಟಣದಲ್ಲಿ ಮೂರು ವಾಣಿಜ್ಯ ಮಳಿಗೆಗಳು ಬೇನಾಮಿ ಹೆಸರಿನಲ್ಲಿವೆ. ಎಲ್ಲಾ ಅಗತ್ಯ ದಾಖಲೆಪತ್ರಗಳು ದೊರಕಿದ್ದು, ಪರಿಶೀಲನೆ ಕಾರ್ಯ ಇನ್ನೂ ಮುಂದುವರಿದಿದೆ. ವಿವಿಧ ಬ್ಯಾಂಕ್ ಖಾತೆಗಳ ಪಾಸ್ ಪುಸ್ತಕಗಳು ಮತ್ತು ಎಟಿಎಂ ಕಾರ್ಡುಗಳು ದೊರಕಿದ್ದು, ಶುಕ್ರವಾರ ಎಲ್ಲ ಬ್ಯಾಂಕ್ ಖಾತೆಗಳಲ್ಲಿರುವ ಜಮಾ ಖರ್ಚಿನ ಮಾಹಿತಿ ಹೊರ ತೆಗೆಯಲಾಗುವುದು ಎಂದು ಕಂಬಾರ ತಿಳಿಸಿದರು.

ದಾವಣಗೆರೆ ಡಿ.ವೈ.ಎಸ್.ಪಿ ಬಸವರಾಜಪ್ಪ, ಹಾವೇರಿ ಲೋಕಾಯುಕ್ತ ಡಿ.ವೈ.ಎಸ್.ಪಿ ಎಂ.ಬಿ. ಪಾಟೀಲ ಹಾಗೂ ಇನ್ಸ್ಪೆಕ್ಟರ್ಗಳಾದ ಎಂ.ಕೆ. ಗಂಗಲ್, ಉಮಾಪತಿ, ಸುಧೀರ ಹೆಗಡೆ, ನಾಗರಾಜು, ಗಿರೀಶ, ಕುಲಕರ್ಣಿ ಸೇರಿದಂತೆ 15 ಕ್ಕೂ ಅಧಿಕ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.