ನವದೆಹಲಿ (ಐಎಎನ್ಎಸ್): ನ್ಯಾಯಮೂರ್ತಿ (ನಿವೃತ್ತ) ಆರ್.ಎ. ಮೆಹ್ತಾ ಅವರನ್ನು ರಾಜ್ಯದ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಗುಜರಾತ್ ಸರ್ಕಾರ ಗುರುವಾರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದೆ.

ಈ ದಿನ ಬೆಳಿಗ್ಗೆಯೇ ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಮೆಹ್ತಾ ಅವರನ್ನು ಗುಜರಾತ್ ಲೋಕಾಯುಕ್ತರಾಗಿ ನೇಮಕ ಮಾಡಿ ರಾಜ್ಯಪಾಲ ಕಮಲಾ ಬೇನಿವಾಲ ಅವರು 2011ರ ಆಗಸ್ಟ್ 26ರಂದು ನೇಮಕ ಮಾಡಿದ್ದನ್ನು ಗುಜರಾತ್ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿತ್ತು. ಈ ನೇಮಕಾತಿಗೆ ಮುನ್ನ 7 ವರ್ಷಗಳ ಕಾಲ ಗುಜರಾತಿನಲ್ಲಿ ಲೋಕಾಯುಕ್ತರೇ ಇರಲಿಲ್ಲ.

ಲೋಕಾಯುಕ್ತರ ನೇಮಕಾತಿಗೆ ಮುನ್ನ ರಾಜ್ಯಪಾಲರು ಈ ವಿಷಯದ ಕುರಿತು ಸಮಾಲೋಚಿಸಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿ ಸರ್ಕಾರವು ಲೋಕಾಯುಕ್ತ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಕಟ್ಟೆ ಏರಿತ್ತು.

ರಾಜ್ಯಪಾಲರು ಮಾಡಿದ ಲೋಕಾಯುಕ್ತ ನೇಮಕಾತಿಯನ್ನು ಎತ್ತಿ ಹಿಡಿದು ~ಭಿನ್ನ ತೀರ್ಪು~ ನೀಡಿದ ಹೈಕೋರ್ಟಿನ ವಿಭಾಗೀಯ ಪೀಠವು ~ನರೇಂದ್ರ ಮೋದಿ ಅವರ ಕುಚೇಷ್ಟೆಗಳು ಮಿನಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿವೆ~ ಎಂದು ಟೀಕಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.