ಸೋಮವಾರ, ಜೂನ್ 14, 2021
27 °C

ಲೋಕಾಯುಕ್ತ ಪೊಲೀಸರ ಬಲೆಗೆ ಸರ್ವೇಯರ್‌ ವಾಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪಾರ್ಟ್‌ಮೆಂಟ್‌ ಜಾಗದ ಸಮೀಕ್ಷೆ ನಡೆಸಲು ₨ 22 ಲಕ್ಷ ಲಂಚ ಕೇಳಿದ ಸರ್ವೇಯರ್‌ ವಾಸು ಎಂಬು­ವವರು ಲೋಕಾಯುಕ್ತ ಪೊಲೀ­ಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾ­ಚಾರ ನಿಯಂತ್ರಣ ಕಾಯ್ದೆಯ ಅನ್ವಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ನಗರದ ಬಿ.ಕೆ. ರಾಜೇಂದ್ರನ್‌ ಎಂಬುವವರು ವಿಠೋಲಾ ಎಂಬ ಹೆಸ­ರಿ­ನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿ­ದ್ದರು. ಇದರ ಸುತ್ತಲಿನ ಆವರಣ ಗೋಡೆ­ಯನ್ನು ಕಂದಾಯ ಇಲಾಖೆ ಅಧಿ­ಕಾರಿ­ಗಳು ಒಡೆದುಹಾಕಿದ್ದರು. ಅಪಾರ್ಟ್‌­ಮೆಂಟ್‌ ಜಾಗದ ಸಮೀಕ್ಷೆ ಮಾಡಿ­ಕೊಡಲು ಸರ್ವೇಯರ್‌ ವಾಸು ಅವರು ಲಂಚಕ್ಕೆ ಬೇಡಿಕೆ ಇಟ್ಟರು.ಲಂಚ ಕೊಡಲು ಮನಸ್ಸು ಬಾರದ ಕಾರಣ ರಾಜೇಂದ್ರನ್‌ ಅವರು ಲೋಕಾ­ಯುಕ್ತ ಪೊಲೀಸರಿಗೆ ದೂರು ನೀಡಿದರು. ವಾಸು ಅವರ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಬೀಸಿದ ಬಲೆ ಯಶಸ್ವಿ­ಯಾಗಿದ್ದು, ಅವರು ಮಂಗಳ­ವಾರ ₨ 5 ಲಕ್ಷ ಮುಂಗಡ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿ­ದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕ­ರಣದ ತನಿಖೆ ಜಾರಿಯಲ್ಲಿದೆ ಎಂದು ಲೋಕಾ­­ಯುಕ್ತ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.