ಭಾನುವಾರ, ಜನವರಿ 19, 2020
27 °C

ಲೋಕೋಪಯೋಗಿ ಕಚೇರಿಗೆ ಇಲ್ಲ ಸರ್ಕಾರಿ ರಜೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ಅಗಲಿದ ರಾಷ್ಟ್ರಕವಿ ಜಿಎಸ್ಎಸ್ ಅವರ ನಿಧನದ ಅಂಗವಾಗಿ ಸರ್ಕಾರ ರಜೆ ಘೋಷಿಸಿದರೂ ಸಹ ಇಲ್ಲಿನ ಲೋಕೋಪಯೋಗಿ ಇಲಾಖೆ ರಜೆ ನೀಡಿದೆ ಮರಳು ಲಾರಿಗಳಿಗೆ ಪರವಾನಗಿ ನೀಡಿರುವುದು ವರದಿಯಾಗಿದೆ.ಸಾರ್ವಜನಿಕರ ಗಮನಕ್ಕೆ ಬಾರದಂತೆ ಕಚೇರಿಯ ಹೊರ ಬಾಗಿಲು ಬಂದ್ ಮಾಡಿಕೊಂಡು, ನಿಯೋಜಿತ ಸಿಬ್ಬಂದಿ  ಮರಳು ಪರವಾನಗಿ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ಈ ಬಗ್ಗೆ ‘ಪ್ರಜಾವಾಣಿ’ ವಿಚಾರಿಸಿ ದಾಗ, ಪರವಾನಗಿ ಕೋರಿ ಡಿ.23 ರಂದು ಮರಳಿನ ರಾಜಧನದ ಹಣದ ಡಿಡಿಯನ್ನು ಮರಳು ಲಾರಿ ಮಾಲೀಕರು ನೀಡಿದ್ದರು. ಅದನ್ನು  ಇಂಟರ್‌ನೆಟ್‌ಗೆ ಅಪ್‌ಲೋಡ್ ಸಹ ಮಾಡಲಾಗಿತ್ತು.  ಈ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನಿ, ಕಂದಾಯ ಇಲಾಖೆಯ ಮೌಖಿಕ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದರು.ರಾಜಧನದ ಬ್ಯಾಂಕ್‌ ಡಿಡಿ 3 ತಿಂಗಳ ಕಾಲಾವಕಾಶ ಇದೆ. ಆದರೆ, ಮರಳು ಲಾರಿ ಮಾಲೀಕರಿಂದ ಡಿಡಿ ಪಡೆದು ತರಾತುರಿಯಲ್ಲಿ ಪರವಾನಗಿ ನೀಡಿದ ಬಗ್ಗೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ರಜೆ ಬೇಡ: ಸರ್ಕಾರಿ ರಜಾ ದಿನದಲ್ಲಿಯೂ ಮರಳು ಪರವಾನಗಿ ನೀಡಬೇಕು. ಇದರಿಂದ ಮರಳು ಕಾರ್ಮಿಕರ ಒಂದು ದಿನದ ಕೂಲಿ ಇಲ್ಲದಂತಾಗುತ್ತದೆ. ಅಷ್ಟೇ ಅಲ್ಲದೆ ಮರಳು ಲಾರಿಗೆ ಪ್ರತಿ ದಿನ ತೆರಿಗೆ ಪಾವತಿ ಮಾಡುತ್ತೇವೆ. ರಾಷ್ಟ್ರಕವಿಗೆ ಶ್ರದ್ಧಾಂಜಲಿ ಇದೆ.

ಆದರೆ, ದಿಢೀರನೆ ರಜೆ ಘೋಷಣೆ ಆದ ಸಮಯದಲ್ಲಿ ಕೂಲಿ ಕಾರ್ಮಿಕರ ಪಾಡು ಸಹ ಯೋಚಿಸಬೇಕು  ಎಂದು ಲಾರಿ ಮಾಲೀಕರ ಸಂಘದ ಹಾಲಗದ್ದೆ ಉಮೇಶ್ ದೂರಿದ್ದಾರೆ.ಅರ್ಧಕ್ಕೆ ಹಾರದ ಧ್ವಜ: ತಾಲ್ಲೂಕು ಕಚೇರಿ ಸೇರಿದಂತೆ 3 ಸರ್ಕಾರಿ ಕಚೇರಿಗಳಲ್ಲಿ ಮಾತ್ರ ರಾಷ್ಟ್ರಕವಿ ಜಿಎಸ್ಎಸ್‌ ನಿಧನದ ಶೋಕಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲಾಗಿತ್ತು. ಉಳಿದಂತೆ ಬಹುತೇಕ ಕಚೇರಿಗಳಿಗೆ ಬೀಗ ಹಾಕಲಾಗಿತ್ತು.

ಪ್ರತಿಕ್ರಿಯಿಸಿ (+)